Home / Breaking News / ಬೆಳಗಾವಿ:ಅನಾಥ ಮಗುವನ್ನು ದತ್ತು ಪಡೆದ ಪ್ರಭಾವತಿ!!

ಬೆಳಗಾವಿ:ಅನಾಥ ಮಗುವನ್ನು ದತ್ತು ಪಡೆದ ಪ್ರಭಾವತಿ!!

ಬೆಳಗಾವಿ-ಆರು ವರ್ಷದ ಹಿಂದೆ ತಂದೆ ಅಗಲಿದ,ನಾಲ್ಕು ವರ್ಷದ ಹಿಂದೆ ತಾಯಿಯೂ ಇಹಲೋಕ ತ್ಯಜಿಸಿದರು, ಅನಾಥವಾಗಿದ್ದ ಮಗುವನ್ನು 70 ವರ್ಷದ ಅಜ್ಜಿ ಸಾಕುತ್ತಿರುವದನ್ನು ಕಣ್ಣಾರೆ ಕಂಡು ಮಮ್ಮಲ ಮರಗಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ನಾಯಕಿ ಪ್ರಭಾವತಿ ಚಾವಡಿ ಆ ಅನಾಥ ಮಗುವನ್ನು ದತ್ತು ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಬೆಳಗಾವಿಯ ವಡಗಾವಿ ಪ್ರದೇಶದ ಮಂಗಾಯಿ ನಗರದಲ್ಲಿ ಅಜ್ಜಿಯೊಬ್ಬಳು ತಂದೆ ತಾಯಿ ಕಳೆದುಕೊಂಡ ಆ ಮಗುವನ್ನು ಸಾಕುತ್ತಿರುವ ವಿಷಯ ಗೊತ್ತಾಗಿ ಅಜ್ಜಿ ಮತ್ತು ಮಗುವನ್ನು ತಮ್ಮ ಮನೆಗೆ ಕರೆಯಿಸಿ ಅವರನ್ನು ವಿಚಾರಿಸಿದ ಕಾಂಗ್ರೆಸ್ ನಾಯಕಿ ಪ್ರಭಾವತಿ ಚಾವಡಿ ಅವರು ಸ್ಥಳದಲ್ಲೇ ಅಜ್ಜಿಗೆ ಆರ್ಥಿಕ ಸಹಾಯ ಮಾಡುವದರ ಜೊತೆಗೆ ಮಗುವನ್ನು ದತ್ತು ಪಡೆದು ಮಗುವಿಗೆ ಶಿಕ್ಷಣ ಕೊಡುವ ಜವಾಬ್ದಾರಿಯನ್ನು ವಹಿಸುವದರ ಮೂಲಕ ಪ್ರಭಾವತಿ ಚಾವಡಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.

ಬೆಳಗಾವಿ ಸುದ್ದಿ ಡಾಟ್ ಜೊತೆ ಈ ವಿಚಾರವಾಗಿ ಮಾತನಾಡಿದ ಪ್ರಭಾವತಿ ಚಾವಡಿ,ಅನಾಥ ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ನಾನೇ ನಿಭಾಯಿಸುತ್ತೇನೆ‌.ತಮ್ಮ ಫೌಂಡೇಶನ್ ಮೂಲಕ ಮಗುವಿನ ಆರೈಕೆ ಮಾಡಲು ನಿರ್ಧರಿಸಿದ್ದೇನೆ.ಈಗ ಸದ್ಯಕ್ಕೆ ಮಗುವಿನ ಅಜ್ಜಿಗೆ ಸ್ವಲ್ಪ ಮಟ್ಟಿಗೆ ಆರ್ಥಿಕ ಸಹಾಯ ಮಾಡಿದ್ದೇನೆ.ಅನಾಥ ಮಗು ವಿನ ಬದುಕು ರೂಪಿಸು ಸಂಕಲ್ಪ ಮಾಡಿದ್ದೇನೆ ಎಂದು ಪ್ರಭಾವತಿ ಚಾವಡಿ ಹೇಳಿದ್ರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿರುವ ಪ್ರಭಾವತಿ ಚಾವಡಿ ಅವರು ಹಲವಾರು ಸಮಾಜಿಕ,ಮತ್ತು ಮಾನವೀಯ ಸೇವೆಗಳ ಮೂಲಕ ದಕ್ಷಿಣ ಮತಕ್ಷೇತ್ರದಲ್ಲಿ ಪ್ರಭಾವ ಬೀರಿದ್ದು ಸತ್ಯ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *