Home / Breaking News / ಬೆಳಗಾವಿಯಲ್ಲಿ ಶುರುವಾಯ್ತು ಮತ್ತೊಂದು ಸ್ವೀಮ್ಮೀಂಗ್ ಪೂಲ್….!!

ಬೆಳಗಾವಿಯಲ್ಲಿ ಶುರುವಾಯ್ತು ಮತ್ತೊಂದು ಸ್ವೀಮ್ಮೀಂಗ್ ಪೂಲ್….!!

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಅವರ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತೆ ಚಾಲನೆ ಸಿಕ್ಕಿದೆ.

ಬೆಳಗಾವಿಯ ಅಶೋಕ ನಗರದಲ್ಲಿ ಸ್ಪೋರ್ಟ್ ಕಾಂಪ್ಲೆಕ್ಸ್ ನಿರ್ಮಿಸಲಾಗಿತ್ತು ಇದನ್ನು ನಿರ್ವಹಣೆ ಮಾಡುವ ಗುತ್ತಿಗೆ ಪಡೆಯಲು ಯಾರೂ ಮುಂದೆ ಬಂದಿರಲಿಲ್ಲ ಹೀಗಾಗಿ ಇಲ್ಲಿಯ ಈಜು ಕೋಳ ಬ್ಯಾಡ್ಮಿಂಟನ್ ಹಾಲ್ ಸೇರಿದಂತೆ ಜಿಮ್ ಕೂಡಾ ಬಂದ್ ಆಗಿದ್ದವು.ಶಾಸಕ ರಾಜು ಸೇಠ ಅವರು ಎಲ್ಲ ರೀತಿಯ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಬ್ಯಾಡ್ಮಿಂಟನ್ ಹಾಲ್ ಮತ್ತು ಈಜುಕೋಳವನ್ನು ನವೀಕರಣ ಮಾಡಿ ಅಶೋಕ ನಗರದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಹೊಸ ಕಾಯಕಲ್ಪ ನೀಡಿದ್ದಾರೆ.

ಬೆಳಗಾವಿ ಉತ್ತರ ಮತಕ್ಷೇತ್ರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಕ್ಷೇತ್ರದ ಸಮಸ್ಯೆಗಳನ್ನು ಖುದ್ದಾಗಿ ಅವಲೋಕಿಸಿ ಸಮಸ್ಯೆಗಳ ಪರಿಹಾರಕ್ಕೆ ರಾಜು ಸೇಠ ಅವರು ಜನತಾ ದರ್ಶನಗಳನ್ನು ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಚಾರಕ್ಕೆ ರಾಜು ಸೇಠ ಅವರು ವಿಶೇಷ ಆದ್ಯತೆ ನೀಡುತ್ತಿದ್ದಾರೆ.

Check Also

ಚಾಕುವಿನಿಂದ ಇರಿದು, ಬೆಳಗಾವಿ ಜಿಲ್ಲೆಯಲ್ಲಿ ಡಬಲ್ ಮರ್ಡರ್….

ಬೆಳಗಾವಿ: ಅಪ್ರಾಪ್ತ ಮಗಳಿಗೆ ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ ಹಾಗೂ ಆತನ ಸಹೋದರನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ತಂದೆಯೇ ಹತ್ಯೆ …

Leave a Reply

Your email address will not be published. Required fields are marked *