Home / Breaking News / ಯುವಕ ಯುವತಿ ಕೂಡಿ ಕುಂತಾಗ ನೈತಿಕ ಪೋಲೀಸ್ಗಿರಿ…..!!!

ಯುವಕ ಯುವತಿ ಕೂಡಿ ಕುಂತಾಗ ನೈತಿಕ ಪೋಲೀಸ್ಗಿರಿ…..!!!

ಬೆಳಗಾವಿ- ಹುಡುಗ ಹುಡುಗಿ ಕೂಡಿ ಕುಂತಾಗ ಅವರಿಬ್ಬರ ಮೇಲೆ ಏಕಾ ಏಕಿ ದಾಳಿ ಮಾಡಿದ ಹದಿನೈದು ಜನ ಯುವಕರ ಗುಂಪು ಅವರನ್ನು ಥಳಿಸಿ ಇಬ್ಬರನ್ನು ಬಲವಂತವಾಗಿ ಮನೆಯೊಂದರಲ್ಲಿ ದಿನವಿಡೀ ಕೂಡಿ ಹಾಕಿದ ಘಟನೆ ಬೆಳಗಾವಿ ಮಹಾನಗರದ ಕೋಟೆ ಕೆರೆಯ ಧ್ವಜದ ಆವರಣದಲ್ಲಿ ನಡೆದಿದೆ.

ಬೆಳಗಾವಿಯ ಕೋಟೆ ಕೆರೆ ಕಿನಾರೆ ಈಗ ಪ್ರೇಮಿಗಳ ಅಡ್ಡಾ ಆಗಿದೆ. ಇಲ್ಲಿ ದಿನನಿತ್ಯ ನೂರಾರು ಜನ ಪ್ರೇಮಿಗಳು ಬರ್ತಾರೆ ಹೋಗ್ತಾರೆ. ಹುಡುಗ ಮತ್ತು ಹುಡುಗಿ ಇಬ್ಬರ ಜಾತಿ ವಿಭಿನ್ನವಾಗಿದ್ದಲ್ಲಿ ಇವರನ್ನು ಗುರುತಿಸಿ ಅವರ ಮೇಲೆ ಅಟ್ಯಾಕ್ ಮಾಡುವ ಜಾಲವಿದೆ.ಆದ್ರೆ ಇವತ್ತು ಬೆಳಗಾವಿಯಲ್ಲಿ ಆಗಿದ್ದು ಬೇರೆ.ಯಾಕಂದ್ರೆ ಹುಡುಗ ಮತ್ತು ಹುಡುಗಿ ಇಬ್ಬರೂ ಒಂದೇ ಕೋಮಿನವರು, ನಮ್ಮ ಕೋಮಿನ ಹುಡುಗಿ ಬೇರೆ ಕೋಮಿನ ಹುಡುಗಿಯ ಜೊತೆ ಕುಂತಿದ್ದಾಳೆ ಎಂದು ಮಿಸ್ಟೇಕ್ ಮಾಡಿಕೊಂಡು ಅವರ ಮೇಲೆ ಯುವಕರ ಗುಂಪು ದಾಳಿ ಮಾಡಿದೆ. ಇಬ್ಬರನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ಮಾಡಿದ್ದು ಇಬ್ಬರನ್ನು ವೀರಭದ್ರ ನಗರದ ಮನೆಯೊಂದರಲ್ಲಿ ಕೂಡಿ ಹಾಕಿ ನೈತಿಕ ಪೋಲೀಸ್ಗಿರಿ ಮಾಡಿದ್ದು ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗ ಹುಡುಗಿಯ ಮೇಲೆ ಹಲ್ಲೆ ಮಾಡಿರುವ 15 ಜನ ಯುವಕರ ಪತ್ತೆಗೆ ಬೆಳಗಾವಿ ಮಾರ್ಕೆಟ್ ಠಾಣೆಯ ಪೋಲೀಸರು ಜಾಲ ಬೀಸಿದ್ದಾರೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *