Home / Breaking News / ಬೆಳಗಾವಿ ವಿಮಾನ ನಿಲ್ಧಾಣದಲ್ಲಿ ಜೀವಂತ ಗುಂಡು ಪತ್ತೆ…!!

ಬೆಳಗಾವಿ ವಿಮಾನ ನಿಲ್ಧಾಣದಲ್ಲಿ ಜೀವಂತ ಗುಂಡು ಪತ್ತೆ…!!

ಬೆಳಗಾವಿ-ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ಧಾಣದಲ್ಲಿ,ಜೀವಂತ ಗುಂಡು ಸಮೇತ ವಿಮಾನ ಪ್ರಯಾಣಕ್ಕೆ ಅಣಿ ಆಗ್ತಿದ್ದ ಸೇನಾಧಿಕಾರಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಾಕಿಕೊಂಡಿದ್ದಾನೆ.

ಸದ್ಯ ಡೆಹ್ರಾಡೂನ್‌ನಲ್ಲಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ಈ ಅಧಿಕಾರಿ,ಹೆಚ್ಚಿನ ತರಬೇತಿಗೆ ಬೆಳಗಾವಿಯ ಕಮಾಂಡೋ ಸೆಂಟರ್‌ಗೆ ಬಂದಿದ್ದ‌ತರಬೇತಿ ಮುಗಿಸಿ ಮರಳುವಾಗ ಬ್ಯಾಗ್‌ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೈದ್ರಾಬಾದ್‌ಗೆ ಪ್ರಯಾಣ ಬೆಳೆಸುತ್ತಿದ್ದ ಅಧಿಕಾರಿ,ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ಧಾಣದಲ್ಲಿ ಜೀವಂತ ಗುಂಡು ಸಮೇತ ಪ್ರಯಾಣ ಮಾಡಲು ಅಣಿಯಾಗಿದ್ದ.ತಕ್ಷಣವೇ ಈ ಅಧಿಕಾರಿಯನ್ನು ಮಾರಿಹಾಳ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ.

ಬೆಳಗಾವಿ ಮರಾಠಾ ಲಘು ಪದಾತಿ ದಳದ ಹಿರಿಯ ಸೇನಾಧಿಕಾರಿಗಳಿಗೆ ಮಾಹಿತಿ ರವಾನಿಸಿದ ಮಾರಿಹಾಳ ಠಾಣೆ ಪೊಲೀಸರು.ಸೇನೆಯ ಹಿರಿಯ ಅಧಿಕಾರಿಗಳಿಂದ ಕ್ಯಾಪ್ಟನ್ ವಿಚಾರಣೆ ಸಾಧ್ಯತೆ ಇದೆ.ಬ್ಯಾಗ್‌ನಲ್ಲಿ ಜೀವಂತ ಗುಂಡು ಇರುವುದನ್ನು ಗಮನಿಸದೇ ಪ್ರಯಾಣಿಸ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಅಧಿಕಾರಿ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *