Home / Breaking News / ಬೆಳಗಾವಿಯಲ್ಲಿ ಕಗ್ಗಂಟಿದೆ ನಮಗೇ ತಿಳಿಯುತ್ತಿಲ್ಲ ಅಂದ್ರು ಸತೀಶ್ ಜಾರಕಿಹೊಳಿ…!!

ಬೆಳಗಾವಿಯಲ್ಲಿ ಕಗ್ಗಂಟಿದೆ ನಮಗೇ ತಿಳಿಯುತ್ತಿಲ್ಲ ಅಂದ್ರು ಸತೀಶ್ ಜಾರಕಿಹೊಳಿ…!!

ಬೆಳಗಾವಿ -ಬೆಳಗಾವಿ, ಚಿಕ್ಕೋಡಿ ಲೋಕಸಭಾ ಟಿಕೆಟ್ ವಿಳಂಬ ವಿಚಾರವಾಗಿ ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿಕೆ ನೀಡಿದ್ದು,
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಗ್ಗಂಟಿದೆ, ನಮಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬೆಳಗಾವಿ ಲೋಕಸಭಾ ಕ್ಷೇತ್ರದ ಕುರಿತು ಹೈಕಮಾಂಡ್ ನವರು ರೆಡಿ ಇದ್ದಾರೆ ಜಿಲ್ಲೆಯಲ್ಲಿ ನಾಯಕರಲ್ಲಿ ಇತ್ಯರ್ಥ ಆಗ್ತಿಲ್ಲ,ನಮ್ಮ ಜಿಲ್ಲೆಯದ್ದು ಎರಡನೇ ಲಿಸ್ಟ್ ನಲ್ಲಿ ಬರುತ್ತೆ ಈಗ ಬರಲ್ಲ,ಸೋಮವಾರ ಒಳಗೆ ಮತ್ತೆ ಹೈಕಮಾಂಡ್ ಗೆ ಹೇಳ್ತೆವಿ,ಒಳಗೂ ಹೊರಗೂ ಎನೂ ಇಲ್ಲ ಎಲ್ಲ ಶಾಸಕರ, ನಾಯಕರ ಸಹಮತ ಇದೆ.
ಸಮುದಾಯಕ್ಕೆ ಪ್ರಾಮುಖ್ಯ ಕೊಡುವ ದೃಷ್ಟಿಯಿಂದ ಚಿಕ್ಕೋಡಿಗೆ ಕುರುಬರಿಗೆ ಟಿಕೆಟ್ ಕೊಡುವ ಚಿಂತನೆ ನಡೆದಿದೆ ಎಂದು ಸತೀಶ್ ಜಾರಕಿಹಿಳಿ ಹೇಳಿದ್ದಾರೆ.ಈ ಬಗ್ಗೆ ಸಿಎಂ ಅವರ ಗಮನಕ್ಕೂ ತಂದಿದ್ದೇವೆ.ರಾಜ್ಯದ 28ಕ್ಷೇತ್ರದಲ್ಲಿ ಕುರುಬರಿಗೆ ಎಲ್ಲಿ ಟಿಕೆಟ್ ನೀಡ್ತಿಲ್ಲ ಅದಕ್ಕೆ ಚಿಕ್ಕೋಡಿ ನೀಡಿ ಅಂತಾ ಡಿಮ್ಯಾಂಡ್ ಇದೆ ಎಂದರು.

ಈ ಕೂಗು ಮೊದಲಿಂದಲೂ ಇದೆ….

ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ವಿಚಾರವಾಗಿ
ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು
ಈ ಕೂಗು ಮೊದಲಿನಿಂದಲೂ ಇದೆ, ಹೊಸದೇನಿದೆ ಇದರಲ್ಲಿ.
ಖರ್ಗೆ ಅವರ ಕಾಲದಿಂದಲೂ ನಾವು 99ಕ್ಕೆ ಔಟ್ ಆಗ್ತಿವೆ.
ಹಾಗೇ ಅವತ್ತಿನಿಂದಲೂ ದಲಿತ ಸಿಎಂ ಕೂಗು ಇದೆ.
ದಲಿತ ಸಿಎಂ ವಿಚಾರಕ್ಕೆ ಕೆಲವರ ಆಕ್ಷೇಪಣೆ ವಿಚಾರ.
ರಾಜಕಾರಣ ಅಂದ್ರೆ ಕೂತಂತ್ರ ಇರೋದೆ.ಡಿಕೆಶಿ ಅವರಿಗೂ ದಲಿತ ಸಿಎಂ ಕೂಗಿಗೆ ಎನೂ ಸಂಬಂಧ.ಅವರು ಅವಕಾಶ ಇದ್ರೇ ಸಿಎಂ ಆಗ್ತಾರೆ ಇದಕ್ಕೆ ಸಂಬಂಧ ಇಲ್ಲ.
ಸದ್ಯಕ್ಕೆ ಈ ವಿಚಾರ ಅವಶ್ಯಕತೆ ಇಲ್ಲ, ಇದು ಚುನಾವಣೆ ವಿಷಯವೂ ಅಲ್ಲಾ.ಎಂದು ಸತೀಶ್ ಹೇಳಿದ್ರು.

ನಮ್ಮಲ್ಲಿ ಸೈನಿಕರ ಸಂಖ್ಯೆ ಜಾಸ್ತಿ ಲೀಡರ್ಸ್ ಕೊರತೆ ಇದೆ ಅದು ಹುಟ್ಟಬೇಕು.ನಾಲ್ಕು ಕೋಟಿ ಅಹಿಂದ ವೋಟ್ ಬ್ಯಾಂಕ್ ಇದೆ ನಮ್ ಬೇಸ್ ಅದೆ.
ಪ್ರಭಾವ ಬೀರುವಲ್ಲಿ ನಾವು ವಿಫಲ ಆಗಿದ್ದೇವೆ.
ಹೈಕಮಾಂಡ್ ಮೇಲೆ ಪ್ರಭಾವ ಬೀರುವಲ್ಲಿ ವಿಫಲ ಆಗಿದ್ದೆವೆ.ನಮ್ಮ ಪಕ್ಷ ಅಷ್ಟೆ ಅಲ್ಲ ಎಲ್ಲ ಪಕ್ಷದಲ್ಲಿ ಹಾಗೇ ಇದೆ.ಹಿಂದೆ ಕಾರಜೋಳ ಅವರ ಹೆಸರಿತ್ತು ಆದ್ರೇ ಆಗಲಿಲ್ಲ.ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಅವರ ಹೆಸರಿತ್ತು ಆಗಲಿಲ್ಲ.ರಾಷ್ಟ್ರ ಮಟ್ಟದಲ್ಲಿ ಅಹಿಂದ ಫಕ್ವ ಆಗಿಲ್ಲ ಮೊದಲು ಕರ್ನಾಟಕ ಸೀಮಿತ.ಚುನಾವಣೆ ಆದ ಮೇಲೆ ಅಹಿಂದಕ್ಕೆ ಹೆಚ್ಚು ಶಕ್ತಿ ತುಂಬುವ ಕೆಲಸ ಮಾಡ್ತೇವಿ.ಎಲ್ಲರೂ ಜಾಗೃತ ಅಗಿದ್ದಾರೆ ಚುನಾವಣೆ ಆದ ಮೇಲೆ ನೋಡೋಣ ಅಂದ್ರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *