ಬೆಳಗಾವಿ:
ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿರುವ ಜಮೀನಿನ ವಿವಾಧದಲ್ಲಿ ಶಂಕರ ಮುನವಳ್ಳಿ ಹಾಗೂ ಕುಲಕರ್ಣಿ ಕುಟುಂಬ ಮಧ್ಯ ಪ್ರವೇಶಿಸಲು ಯಾವುದೆ ಹಕ್ಕಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಲಕರ್ಣಿ ಕುಟುಂಬ ಆ ಜಮೀನನ್ನು ಬಾಬು ದಮ್ಮನಗಿಗೆ ಮಾರಾಟ ಮಾಡಿದ್ದಾರೆ. ಈಗೇನಿದ್ದರೂ ದಮ್ಮನಗಿ ಕುಟುಂಬ ವಾದ ಮಾಡಬಹುದೇ ಹೊರತು ಶಂಕರ ಮುನವಳ್ಳಿ ಹಾಗೂ ಕುಲಕರ್ಣಿ ಕುಟುಂಬಕ್ಕೆ ಅಲ್ಲ. ಈ ಇಬ್ಬರಿಗೆ ಇದರಲ್ಲಿ ಯಾವುದೇ ಹಕ್ಕಿಲ್ಲ ಎಂದಿದ್ದಾರೆ.
ಶಂಕರ ಮುನವಳ್ಳಿ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿರುವ ಜಮೀನು ಒಂದೇ ಅಲ್ಲ. ಬೆಂಗಳೂರಿನ ಅರಮನೆ, ಜೈಲು ಮಾರಾಟ ಮಾಡಲು ಹೋಗಿದ್ದ ವ್ಯಕ್ತಿ. ಅಧಿಕಾರಿಗಳನ್ನು ಹೆದರಿಸಿ ಬೆರದರಿಸಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಮುನವಳ್ಳಿಯ ಒಂದೊಂದು ಪ್ರಕರಣವನ್ನು ಬಯಲಿಗೆಳೆಯುವೆ. ಮುನವಳ್ಳಿ ಅವರು ಉದ್ಯಮಿನಾ, ಸಮಾಜ ಸೇವಕನಾ ಎನಿದ್ದಾರೆ. ಎಂದು ಪ್ರಶ್ನಿಸುರುವ ಅವರು ಅವರೆನೇ ಮಾಡಿದರೂ ಜಮೀನು ಈಗ ತಹಶೀಲ್ದಾರ ಮತ್ತು ದಮ್ಮನಗಿ ನಡುವೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.ಎಂದರು
ಇದು ಮುಗಿಯಬೇಕಾದರೆ ಕನಿಷ್ಠ 3-4 ವರ್ಷ ಕಳೆಯಬಹುದು. ಇದರಲ್ಲಿ ಸರ್ಕಾರದ ಪರವಾದರೆ ತಕ್ಷಣ ಬೆಳಗಾವಿ ಎರಡನೇ ರಾಜ್ಯಧಾನಿ ಎಂದು ಸಾಬೀತಾಗಿದ್ದು ಸರ್ಕಾರ ಹೆಡ್‍ಕ್ವಾಟರ್ಸ ಹಾಗು ಅವಳಿ ಕಟ್ಟಡಗಳನ್ನು ಕಟ್ಟಲಾಗುವುದು ಎಂದು ಹೇಳಿದ್ದಾರೆ.
ಬಾಬು ದಮ್ಮನಗಿ ಅವರು ಕೇಳುವ ಅಧಿಕಾರ ಇದೆ. ಆದರೆ ಶಂಕರ ಮುನವಳ್ಳಿ ಅವರಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.