Breaking News

ಮನವಿಪತ್ರದ ಸಹಿಗಳ ದುರ್ಬಳಕೆ, ಶಿವಪ್ರಿಯಾ ಸ್ಪಷ್ಟನೆ..

ಬೆಳಗಾವಿ, -ಇಲಾಖೆಯ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವು ಸತ್ಯಕ್ಕೆ ದೂರವಾಗಿದ್ದು, ದೂರುಪತ್ರವೊಂದಕ್ಕೆ ಬಳಸಲಾಗಿರುವ ಸಹಿಗಳು ಕೂಡ ಇದಕ್ಕೆ ಸಂಬಂಧಿಸಿರುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಕಡೇಚೂರ ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ದಿನಾಂಕ 5-11-2024 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಇಲಾಖೆಯ ವಸತಿನಿಲಯಗಳ ಮೆನು ಹಾಗೂ ಡಯಟ್ ಬದಲಾವಣೆಗೆ ಸಂಬಂಧಿಸಿದಂತೆ ಮಾನ್ಯ ಸಚಿವರಿಗೆ ಸಲ್ಲಿಸಲು ಸಿದ್ಧಪಡಿಸಲಾಗಿದ್ದ ಮನವಿಪತ್ರಕ್ಕೆ ಮಾಡಲಾಗಿರುವ ಸಹಿಗಳನ್ನೇ ದುರ್ಬಳಕೆ‌ ಮಾಡಿಕೊಂಡು ಇದಕ್ಕೆ ಸಂಬಂಧವಿಲ್ಲದ ದೂರುಪತ್ರಕ್ಕೆ ಬಳಕೆ‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇಲಾಖೆಯ ಸಿಬ್ಬಂದಿ ಅಥವಾ ವಸತಿನಿಲಯಗಳ ಮೇಲ್ವಿಚಾರಕರಿಗೆ ಯಾವುದೇ ರೀತಿಯ ಕಿರುಕುಳ ನೀಡಿರುವುದಿಲ್ಲ. ಇಲಾಖೆಯ ಪ್ರತಿಯೊಂದು ಕೆಲಸವನ್ನು ಸರಕಾರದ ನಿಯಮ ಮತ್ತು ಮಾರ್ಗಸೂಚಿಯ ಪ್ರಕಾರವೇ ನಿರ್ವಹಿಸಲಾಗುತ್ತಿದೆ. ಹಲವಾರು ದಿನಗಳಿಂದ ವಿನಾಕಾರಣ ತಮಗೆ ಕಿರುಕುಳ ನೀಡಲಾಗುತ್ತಿದ್ದು, ಆದಾಗ್ಯೂ ಇಲಾಖೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದು ಶಿವಪ್ರಿಯಾ ಕಡೇಚೂರ ತಿಳಿಸಿದ್ದಾರೆ.
****

Check Also

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು …

Leave a Reply

Your email address will not be published. Required fields are marked *