Breaking News

ಮರಳು ಮಾಫಿಯಾ ಸಂಘರ್ಷದ ಶಂಕೆ, ಗುಂಡಿನ ದಾಳಿಗೆ ಯುವಕ ಬಲಿ

ಬೆಳಗಾವಿ : ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಯುವಕನೋರ್ವನನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಬೇಕವಾಡ ಗ್ರಾಮದ ನಡುವೆ ನಡೆದಿದೆ.

ರವಿವಾರ ತಡರಾತ್ರಿ ಹಲಸಿ – ಬೇಕವಾಡ ರಸ್ತೆಯ ನರಸೇವಾಡಿ ಬೀಜ ಬಳಿ ತಡರಾತ್ರಿ 3 ಗಂಟೆ ಸುಮಾರಿಗೆ ನಡೆದ ಗುಂಡಿನದಾಳಿಯಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಲ್ತಾಫ್ ಮಕಾನದಾರ್ (27) ಗುಂಡಿನ ದಾಳಿಯಲ್ಲಿ ಬಲಿಯಾಗಿದ್ದಾನೆ. ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಹಲಸಿ ಖಾನಾಪುರದ ಬೇಕ್ವಾಡಕ್ಕೆ ಹೋಗುವ ನರಸೇವಾಡಿ ಬ್ರಿಡ್ಜ್ ಪ್ರದೇಶದಲ್ಲಿ ನಿತ್ಯವೂ ಮರಳು ಸಂಗ್ರಹ ನಡೆಯುತ್ತು ಎನ್ನಲಾಗಿದೆ.ಗುಂಡಿನ ದಾಳಿಗೆ ಬಲಿಯಾದ ಅಲ್ತಾಫ್ ಮಕಾನದಾರ ಲಾರಿಯಲ್ಲಿ ಮರಳು ತುಂಬುವ ಕಾರ್ಮಿಕನಾಗಿದ್ದ ಎಂದು ತಿಳಿದು ಬಂದಿದೆ.

ಮರಳು ಮಾಫಿಯಾ ಸಂಘರ್ಷದ ಕಾರಣಕ್ಕೆ ಈ ಗುಂಡಿನ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಈ ಸುದ್ದಿ ಎಲ್ಲೆಡೆ ಹರಡಿದ ಬಳಿಕ , ಪೊಲೀಸ್ ರು ತಕ್ಷಣವೆ ಆಗಮಿಸಿ ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಇರಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್, ನಂದಗಡ ಪೊಲೀಸ್ ನಿರೀಕ್ಷಕ ಎಸ್. ಸಿ. ಪಾಟೀಲ್ ಘಟನಾ ಸ್ಥಳದ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.

A weapon firing incident has been reported in nandgad ps limits halasi village resulting in death of one person by name altaf makandar aged 30 years. Further investigation is going on.

Check Also

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು …

Leave a Reply

Your email address will not be published. Required fields are marked *