Breaking News
Home / Breaking News / ಪಿಯುಸಿ ಪರೀಕ್ಷೆ ಆರಂಭ,ಕಪ್ಪು ಪಟ್ಟಿ ಧರಿಸಿ ಉಪನ್ಯಾಸಕರಿಂದ ಪ್ರತಿಭಟನೆ

ಪಿಯುಸಿ ಪರೀಕ್ಷೆ ಆರಂಭ,ಕಪ್ಪು ಪಟ್ಟಿ ಧರಿಸಿ ಉಪನ್ಯಾಸಕರಿಂದ ಪ್ರತಿಭಟನೆ

 

ಬೆಳಗಾವಿ ಜಿಲ್ಲೆಯಾದ್ಯಂತ ಇಂದಿನಿಂದ ಪಿಯುಸಿ ಪರೀಕ್ಷೆ ಆರಂಭವಾಗಿದೆ ಉಪನ್ಯಾಸಕರು ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ

ನಡೆಯಲಿರುವ ಪಿಯುಸಿ ಪರೀಕ್ಷೆಗೆ ನಡೆಯಲಿದ್ದು ಪರೀಕ್ಷಾ ಕೇಂದ್ರ ಸುತ್ತಲು ವ್ಯಾಪಕ ಪೊಲಿಸ್ ಭದ್ರತೆ ವಹಿಸಲಾಗಿದೆ ಬೆಳಗಾವಿಯ ಜೋತಿ ಕಾಲೇಜ್ , ಆರ್ ಪಿ ಡಿ ಕಾಲೇಜ್ , ಸರ್ದಾರ ಪಿಯುಕಾಲೇಜ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 77 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 49914 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 28849 ಹುಡುಗರು ಮತ್ತು 21074 ಹುಡುಗಿಯರು ಇದ್ದಾರೆ. ಈ ಬಾರಿ ಪರೀಕ್ಷೆಗೆ 38880 ರೆಗ್ಯುಲರ್ ಇದ್ದು 8653 ಪುನರಾವರ್ತಿತ ಮತ್ತು 2381 ಬಾಹ್ಯ ವಿದ್ಯಾರ್ಥಿಗಳು ಇದ್ದಾರೆ. ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತ ದಳ ರಚನೆ ಮಾಡಲಾಗಿದ್ದು ನಕಲು ತಡೆಯಲು ಪೊಲೀಸ್ ಕಾಬಲು ನಿಯೊಜಿಸಲಾಗುದ್ದು ಮುಂಜಾಗೃತ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಕಲಂ 144 ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇನ್ನು ಪಿಯುಸಿಯ ಅತಿಥಿ ಉನ್ಯಾಸಕರ ವೇತನ ತಾರ ತಮ್ಯ ವಿರೋಧಿಸಿ ಪರೀಕ್ಷೆ ಕೇಂದ್ರದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ.

Check Also

ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲ…!

ಚಿಕ್ಕೋಡಿ- ಚಿಕ್ಕೋಡಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ NCP ಅಭ್ಯರ್ಥಿ ಉತ್ತಮ್ …

Leave a Reply

Your email address will not be published. Required fields are marked *