ಬೆಳಗಾವಿ; ಸರಕಾರಿ ಟಾವರಗಳನ್ನು ಖಾಸಗೀಕರಣ ಮಾಡಲು ತಿರ್ಮಾನಿಸಿರುವ ಕೇಂದ್ರ ಸರಕಾರದ ಟಾವರ ಖಾಸಗೀಕರಣ ಕೈಬಿಡಬೇಕು ಎಂದು ಆಗ್ರಹಿಸಿ ಗುರುವಾರ ಬಿಎಸ್ಎನ್ಎಲ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.
ಖಾಸಗೀಕರಣದಿಂದ ಸಾವಿರಾರು ನೌಕರರು ತಮ್ಮ ಉದ್ಯೋಗ ಕಳೆದುಕೊಳ್ಳುವ ಹಾಗೂ ಸರಕಾರದ ಭೂಕಸಕ್ಕೆ ಹಾನಿಯಾಗುವ ಸಂಬವಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ರಿಲಯನ್ಸ್ ಜೀವೂ ಕಂಪನಿ ಜನರಿಗೆ ಆರು ವರ್ಷ ಉಚಿತ ಸೌಲಭ್ಯ ನೀಡಲಿ. ಉಚಿತ ಸೌಲ್ಯಭದ ಹೆಸರಿನಲ್ಲಿ ಸರಕಾರದ ಭೂಕಸಕ್ಕೆ ಸಾವಿರಾರು ಕೋಟಿ ತೆರಿಗೆ ವಂಚನೆ ಮಾಡುವುದು ಸರಿಯಲ್ಲ. ತೆರಿಗೆ ಪಾವತಿ ಮಾಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಸ್.ಎಸ್.ಮೇಲಿನಮನಿ, ಮುರಗೇಪ್ಪ ಅಥಣಿ, ಎಸ್.ಆರ್.ಪಾಟೀಲ, ವಾಯ್.ಆರ್.ಹಂಚಿನಮನಿ, ಜಿ.ಸಿ.ಕಾಮತ, ವಾಯ್.ಡಿ.ಹಳೆಮನಿ ಸೇರಿದಂತೆ ನೂರಾರು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …