Home / Breaking News / ಬೆಳಗಾವಿ ಕಾರ್ಪೋರೇಶನ್ ಇಲೆಕ್ಷನ್ ದಲ್ಲಿ ಸಿಂಬಾಲ್ ಫೈಟ್…..!!!!!

ಬೆಳಗಾವಿ ಕಾರ್ಪೋರೇಶನ್ ಇಲೆಕ್ಷನ್ ದಲ್ಲಿ ಸಿಂಬಾಲ್ ಫೈಟ್…..!!!!!

ಬೆಳಗಾವಿ- ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾಷೆ ಆಧಾರಿತ ಫೈಟ್ ಗೆ ಬ್ರೇಕ್ ಬೀಳುವ ಎಲ್ಲ ಲಕ್ಷಣಗಳು ಕಂಡು ಬಂದಿವೆ

ಮುಂಬರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳು ಸಿಂಬಾಲ್ ಆಧಾರಿತ ಫೈಟ್ ಗೆ ತಯಾರಿ ಮಾಡಿಕೊಳ್ಳುತ್ತಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ
ಬಿಜೆಪಿ ಪಕ್ಷ ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರ್ಮ ಕೊಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದ್ದು ಅದಕ್ಕೆ ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ

ಬಿಜೆಪಿ ಬಿ ಫಾರ್ಮ ಕೊಟ್ಟರೆ ಕಾಂಗ್ರೆಸ್ ಕೂಡಾ ಬಿ ಫಾರ್ಮ ಕೊಡಬಹುದು ಎನ್ನುವ ಲೆಕ್ಕಾಚಾರವಿದ್ದು ರಾಜಕೀಯ ಪಕ್ಷಗಳು ಬಿ ಫಾರ್ಮ ಕೊಟ್ಟರೆ ಎಂಈಎಸ್ ಬಣ್ಣ ಬಯಲಾಗುವದರಲ್ಲಿ ಸಂದೇಹವೇ ಇಲ್ಲ ‌.

ಬೆಳಗಾವಿ ಮಹಾನಗರ ಪಾಲಿಕೆಗೆ ಹಲವಾರು ಜನ ಮರಾಠಿ ಭಾಷಿಕ ನಗರ ಸೇವಕರು ಗೆಲ್ಲುತ್ತಾರೆ ಅವರೆಲ್ಲ ಎಂಈಎಸ್ ನವರು ಎಂದು ಗೆದ್ದೆತ್ತಿನ ಬಾಲ ಹಿಡಿದು ಭಾಷೆಯ ಹೆಸರಿನಲ್ಲಿ ಎಂಈಎಸ್ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಲೇ ಬಂದಿದೆ

ವಿಧಾನಸಭೆ ಚುನಾವಣೆಯಲ್ಲಿ ಮರಾಠಿ ಭಾಷಿಕರು ನಾಡದ್ರೋಹಿ ಎಂಈಎಸ್ ಗೆ ತಕ್ಕ ಪಾಠ ಕಲಿಸಿ ಮಣ್ಣುಪಾಲು ಮಾಡಿದ್ದು ಪಾಲಿಕೆಯಲ್ಲಿ ಪಕ್ಷ ಆಧಾರಿತ ಚುನಾವಣೆ ನಡೆದ್ರೆ ಪಾಲಿಕೆಯಲ್ಲಿ ಎಂಈಎಸ್ ನ ಕಮಿಷನ್ ದಂಧೆಗೆ ಬ್ರೆಕ್ ಬೀಳೋದು ಗ್ಯಾರಂಟಿ

ಮರಾಠಿ ಭಾಷಿಕರು ಪಕ್ಷೇತರರಾಗಿ ಗೆದ್ದು ಬಂದರೆ ಎಂಈಎಸ್ ಗೆ ಸಪೋರ್ಟ ಮಾಡಲೇ ಬೇಕು ಎಂದು ಬೆದರಿಸುವದು ಸಪೋರ್ಟ ಮಾಡದ ಮರಾಠಿ ನಗರಸೇವಕರಿಗೆ ಗದ್ದಾರ್ ಪಟ್ಟ ಕಟ್ಟುವದು ಎಂಈಎಸ್ ನ ಚಾಳಿಯಾಗಿದೆ.

ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಬಿ ಫಾರ್ಮ ಕೊಟ್ಟರೆ ಪಾಲಿಕೆಯಲ್ಲಿ ಭಾಷಾ ರಾಜಕಾರಣಕ್ಕೆ ತಿಲಾಂಜಲಿ ಗ್ಯಾರಂಟಿ

ಬೆಳಗಾವಿ ಪಾಲಿಕೆಯಲ್ಲಿ ರಾಜಕೀಯ ಪಕ್ಷಗಳ ಹಿಡಿತವಿಲ್ಲ ಎಂಈಎಸ್ ನಾಯಕರೇ ಭಾಷೆಯ ಹೆಸರಿನಲ್ಲಿ ಕಾರ್ಬಾರ್ ನಡೆಸಿದ್ದು ಎರಡೂ ರಾಜಕೀಯ ಪಕ್ಷಗಳು ಬಿ ಫಾರ್ಮ ನೀಡಿ ಪಾಲಿಕೆಯಲ್ಲೂ ನಾಡದ್ರೋಹಿಗಳಿ ಮೂಗುದಾರ ಹಾಕಬಹುದಾಗಿದೆ

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *