Breaking News

ಬೆಳಗಾವಿಯ ಶಿವಾಜಿ ಉದ್ಯಾನವನಕ್ಕೆ ಅಭಿವೃದ್ಧಿಯ ಸ್ಪರ್ಶ

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಈಗ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು ಶಾಸಕ ಅಭಯ ಪಾಟೀಲ ಇಂದು ಬೆಳಗಿನ ಜಾವ 7 ,ಘಂಟೆಗೆ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನ ದ ಅಭಿವೃದ್ಧಿಗೆ ಚಾಲನೆ ನೀಡಿದರು

ಒಂದು ಕೋಟಿ ಮೂವತ್ತು ಲಕ್ಷ ರೂ ವೆಚ್ಚದಲ್ಲಿ ಉದ್ಯಾನವನದ ಅಭಿವೃದ್ಧಿ ಆಕರ್ಷಕ ಮಕ್ಕಳ ಆಟಕೀಯ ಸಾಮುಗ್ರಿಗಳ ಅಳವಡಿಕೆ ,ಪುಟ್ ಪಾತ್ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಭಯ ಪಾಟೀಲ ಪೂಜೆ ನೆರವೇರಿಸಿ ಚಾಲನೆ ನೀಡಿದರು

ಈ ಸಂಧರ್ಭದಲ್ಲಿ ಮಾತನಾಡಿದ ಅವರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ರಸ್ತೆಗಳ ಸುಧಾರಣೆಗೆ ಯೋಜನೆ ರೂಪಿಸಲಾಗಿದೆ ಜನೇವರಿ ತಿಂಗಳಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗುತ್ತವೆ‌. ಮೊದಲನೇಯ ರೆಲ್ವೇ ಗೇಟ್ ನಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆ,ಶಿವಾಜಿ ಗಾರ್ಡನ್ ಪಕ್ಕದಲ್ಲಿರುವ ಭಾತಖಾಂಡೆ ಶಾಲೆಯಿಂದ ಎಂ ಆರ್ ಎಫ್ ಶೋ ರೂಂ ವರೆಗಿನ ರಸ್ತೆ,ರೂಪಾಲಿ ಕಲ್ಯಾಣ ಮಂಟಪದಿಂದ ಎಂ ಆರ್ ಎಫ್ ಅಂಗಡಿವರೆಗಿನ ರಸ್ತೆ, ಆರ್ ಪಿ ಡಿ ಸರ್ಕಲ್ ದಿಂದ ಜೈಲ್ ಶಾಲೆವರೆಗಿನ ರಸ್ತೆ,,ಮಹಾವೀರ ಭವನದಿಂದ ಗುರುದೇವ ಮಂದಿರ ವರೆಗಿನ ರಸ್ತೆ ಬ್ಯಾಂಕ್ ಆಫ್ ಇಂಡಿಯಾದಿಂದ ನಾಥ ಫೈ ಸರ್ಕಲ್ ವರೆಗಿನ ರಸ್ತೆ ಹರಿ ಮಂದಿರ ಎದುರುಗಿನ ರಸ್ತೆ ,ಮಹಾತ್ಮಾ ಪುಲೆ ರಸ್ತೆ, ನಾಥ ಪೈ ಸರ್ಕಲ್ ದಿಂದ ಜೈಲ್ ಶಾಲೆಯ ರಸ್ತೆ ,ಗಳ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿದ್ದು ಕಾಮಗಾರಿಗಳು ನಡೆಯುವ ಸಂಧರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಅಭಯ ಪಾಟೀಲ ಮನವಿ ಮಾಡಿಕೊಂಡರು

ಜೊತೆಗೆ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಪೀರನವಾಡಿ,ಮಚ್ಛೆ,ಹುಂಚ್ಯಾನಟ್ಟಿ ಸೇರುದಂತೆ ನಾಲ್ಕು ಗ್ರಾಮ ಪಂಚಾಯ್ತಿಗಳ ವ್ತಾಪ್ತಿಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಜನೇವರಿ ತಿಂಗಳಲ್ಲಿ ಆರಂಭಗೊಂಡು ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಅಭಯ ಪಾಟೀಲ ಹೇಳಿದರು

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಲ್ಲ ಪ್ರಮುಖ ರಸ್ತೆಗಳ ಸುಧಾರಣೆ,ಚರಂಡಿ,ಡ್ರಿನೇಜ್ ನಿರ್ಮಾಣದ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಂತರ ಪಾರ್ಕಗಳ ಅಭಿವೃದ್ಧಿ ಮತ್ತು ಇತರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಾಸಕ ಅಭಯ ಪಾಟೀಲ ಹೇಳಿದರು

Check Also

ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!

ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.