Breaking News

ಬೆಳಗಾವಿ ದಕ್ಷಿಣದಲ್ಲಿ ಅಮೀತ್ ಶಾ ಖುಷ್ ಹುವಾ..!!

ಬೆಳಗಾವಿ- ಬಿಜೆಪಿ ‌ಚಾಣಕ್ಯ ಅಮಿತ್ ಶಾ ಬೆಳಗಾವಿ ದಕ್ಷಿಣ ವಿಧಾನಸಭೆ ‌ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ‌ ನಡೆಸಿದರು. ರೋಡ್ ಶೋ ಜೊತೆಗೆ 20 ಸಾವಿರಕ್ಕೂ ಅಧಿಕ ಬೈಕ್‌ಗಳ ಮೂಲಕ ರ್ಯಾಲಿ ನಡೆಯಿತು. ವಿಶ್ವದಾಖಲೆ ರೀತಿಯಲ್ಲಿ ನಡೆದ ಬೈಕ್ ರ್ಯಾಲಿ ಕಂಡು ಸ್ವತಃ ಅಮಿತ್ ಶಾ ಬೆರಗಾದರು.

ರೋಡ್ ಶೋದಲ್ಲಿ ಪಾಲ್ಗೊಂಡ ಅಪಾರ ಜನಸ್ತೋಮ ಬಿಜೆಪಿ, ಅಮಿತ್ ಶಾ, ಅಭಯ ಪಾಟೀಲ ‌ಪರ ಘೋಷಣೆ ಕೂಗಿದರು. ಗಲ್ಲಿ ಗಲ್ಲಿಗಳಲ್ಲಿ ಹೂಮಳೆಗೈದು ಅಮಿತ್ ಶಾರನ್ನು ಪ್ರೀತಿಯಿಂದ ಬರಮಾಡಿಕೊಂಡರು. ನಿನ್ನೆಯಷ್ಟೇ ಬೈಕ್ ರ್ಯಾಲಿ ನಿಗದಿಯಾಗಿತ್ತು. ಒಂದೇ ರಾತ್ರಿಯಲ್ಲಿ 25 ಸಾವಿರ ಬೈಕ್ ಗಳ 50 ಮೇಲೆ ಸಾವಿರ ಕಾರ್ಯಕರ್ತರು ಪಾಲ್ಗೊಂಡು ಶಿಸ್ತುಬದ್ಧ ರೋಡ್‌ ಶೋ ಮಾಡುವ ಮೂಲಕ ತಾವು ವಿಭಿನ್ನ, ವಿಶೇಷ ‌ಅನ್ನುವುದನ್ನು ಅಭಯ ಪಾಟೀಲ ಮತ್ತೊಮ್ಮೆ ಸಾಬೀತುಪಡಿಸಿದರು. ಬೆಳಗಾವಿಯ ವಡಗಾಂವದಿಂದ ಆರಂಭವಾದ ರೋಡ್ ಶೋ 4 ಕಿಮೀವರೆಗೆ ಕ್ರಮಿಸಿತು. ಅಮಿತ್ ಶಾಗೆ ಗೋವಾ ಸಿಎಂ ಪ್ರಮೋದ ಸಾವಂತ್ ಕೂಡ ಸಾಥ್ ನೀಡಿದರು.

ಕೆಲ ದಿನಗಳಿಂದ ರಾಜಕೀಯ ‌ವಿರೋಧಿಗಳು ಹಬ್ಬಿಸುತ್ತಿದ್ದ ವದಂತಿಗಳು ‌ಇಂದು ನಡೆದ ಬೈಕ್ ‌ರ್ಯಾಲಿಯಲ್ಲಿ ಕೊಚ್ಚಿ ಹೋದವು. ರೋಡ್ ಶೋ ಯಶಸ್ವಿಯಾದ ಹಿನ್ನೆಲೆಯಲ್ಲಿ ಚುನಾವಣೆ ಚಾಣಾಕ್ಯ ಅಮಿತ್ ಶಾ ಕೂಡ ಖುಷ್ ಆದರು.

ಈ ವೇಳೆ ರೋಡ್ ‌ಶೋ ಉದ್ದೇಶಿಸಿ ಮಾತನಾಡಿದ ಅಮಿತ್ ‌ಶಾ, ಅಪಾರ ‌ಜನಸ್ತೋಮ‌ ನೋಡಿದ್ರೆ ಅಭಯ ಪಾಟೀಲ ಪ್ರಚಂಡ‌ ಬಹುಮತದಿಂದ ಗೆಲುವು ದಾಖಲಿಸುವುದು ಖಚಿತ. ಕಳೆದ‌ ಚುನಾವಣೆಗಿಂತ‌ ಈ ಸಲ ಲೀಡ್ ಎರಡು ಪಟ್ಟು ಹೆಚ್ಚಾಗಲಿದೆ ಎಂದು ಶಾ‌ ವಿಶ್ವಾಸ‌ ವ್ಯಕ್ತಪಡಿಸಿದರು. ಒಂದು ಲಕ್ಷಕ್ಕೂ ಅಧಿಕ‌ ಮತಗಳ ಅಂತರದ ಗೆಲುವು ಅಭಯ ‌ಪಾಟೀಲಗೆ ದೊರೆಯುವುದು ನಿಶ್ಚಿತ ‌ಎಂಬುದ‌ನ್ನು ರೋಡ್‌ ಶೋ ಸಾಬೀತುಪಡಿಸಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *