Breaking News

: ಬಿಜೆಪಿಗೆ ಮೋಸ ಮಾಡಿದ ಸವದಿಯನ್ನು ಸೋಲಿಸಿ-ಅಮೀತ್ ಶಾ

ಅಥಣಿ :ಬಿಜೆಪಿಗೆ ಮೋಸ ಮಾಡಿದ ಲಕ್ಷ್ಮಣ ಸವದಿ ಅವರನ್ನು ಈ ಸಲದ ಚುನಾವಣೆಯಲ್ಲಿ ಸೋಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕರ ನೀಡಿದರು.

ಇಲ್ಲಿಯ ಭೋಜರಾಜ ಕ್ರೀಡಾಂಗಣದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.ರ್ನಾಟಕ ಚುನಾವಣೆಯೇ ಬೇರೆ. ಅಥಣಿ ಚುನಾವಣೆಯೇಬೇರೆ. ಅಧಿಕಾರದ ಆಸೆಗೆ ತನ್ನ ಸ್ವಾರ್ಥಕ್ಕೆ ಬಿಜೆಪಿಗೆ ಮೋಸ ಮಾಡಿದ ಸವದಿಯನ್ನು ಈ ಸಲ ಸೋಲಿಸಲೇಬೇಕು ಎಂದು ಕರೆಕೊಟ್ಟರು.
ಕಾಂಗ್ರೆಸ್ ಬಜರಂಗದಳವನ್ನು ಅಪಮಾನಿಸಿದೆ. ಅಂತಹ ಪಕ್ಷದಿಂದ ಸ್ಪರ್ಧೆ ನಡೆಸಿರುವ ಸವದಿಯನ್ನು ಈ ಬಾರಿ ಅಥಣಿ ಮತದಾರರು ಸೋಲಿಸಬೇಕು ಎಂದು ಕರೆ ನೀಡಿದರು. ಮುಸ್ಲಿಮರಿಗೆ ಶೇಕಡಾ 6 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಹೇಳಿರುವ ಕಾಂಗ್ರೆಸ್ಸಿಗರು ಯಾರ ಮೀಸಲಾತಿ ಕಡಿಮೆ ಮಾಡುತ್ತೀರಿ ? ದಲಿತರು ಹಾಗೂ ಲಿಂಗಾಯತರ ಮೀಸಲಾತಿ ಕಡಿಮೆ ಮಾಡುತ್ತೀರಾ ? ಎಂದು ಪ್ರಶ್ನಿಸಿದ ಅವರು ಪ್ರಧಾನಿ ಮೋದಿ ಅವರು ಮಹದಾಯಿ ನೀರನ್ನು ಉತ್ತರ ಕರ್ನಾಟಕಕ್ಕೆ ನೀಡಿದರು. ಸಮಸ್ತ ಕಿತ್ತೂರು ಕರ್ನಾಟಕ ರೈತರಿಗೆ ಅನುಕೂಲ ಮಾಡಿಕೊಟ್ಟರು. ಬಿಜೆಪಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಂದ ಕರ್ನಾಟಕ ಜನತೆಯ ಮನ ಗೆದ್ದಿದೆ ಎಂದು ಹೇಳಿದರು.

ಮಹೇಶ ಕುಮಟಳ್ಳಿ ಮತ್ತು ರಮೇಶ ಜಾರಕಿಹೊಳಿ ಬಿಜೆಪಿಗೆ ಬಂದ ಕಾರಣ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಆಡಳಿತ ನಡೆಸುವಂತಾಗಿದೆ. ರಾಹುಲ್ ಗಾಂಧಿ ಹೋದಲ್ಲೆಲ್ಲ ಕಾಂಗ್ರೆಸ್ ಪಕ್ಷ ಸೋತಿದೆ. ಮೋದಿಯವರನ್ನು ವಿಷದಹಾವು ಎಂದು ಖರ್ಗೆ ಕರೆದಿದ್ದಾರೆ. ಎಷ್ಟು ದಿನಗಳ ಕಾಲ ಮೋದಿಗೆ ಬಯುತ್ತೀರಿ. ಇದರಿಂದ ಕಮಲವೇ ಅರಳುತ್ತದೆ. ಪಿಎಫ್ ಐ ಸಂಘಟನೆಯನ್ನು ನಾವೇ ನಿಷೇಧಿಸುತ್ತೇವೆ. ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿರುವ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಿ ಎಂದು ಅವರು ತಿಳಿಸಿದರು.

ರಮೇಶ ಜಾರಕಿಹೊಳಿ ಮಾತನಾಡಿ, ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಸಿಬಿಐಗೆ ಒಪ್ಪಿಸಬೇಕು. ಸೂಪರ್ ಸೀಡ್ ಮಾಡಬೇಕು ಎಂದು ಅಮಿತ್ ಶಾ ಅವರಲ್ಲಿ ವಿನಂತಿಸಿದರು. ಸೋತು ಮನೆಯಲ್ಲಿದ್ದ ಲಕ್ಷ್ಮಣ ಸವದಿ ಅವರು ಚುನಾವಣೆಯಲ್ಲಿ ಸೋತು ಮನೆಯಲ್ಲಿದ್ದರು. ನಂತರ ನಡೆದ ಚುನಾವಣೆಯಲ್ಲಿ ಮಹೇಶ ಕುಮಟಳ್ಳಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ಮಹೇಶ ಕುಮಟಳ್ಳಿ ಅವರ ಮೇಲಿನ ಸ್ನೇಹದ ಕಾರಣದಿಂದ ಅಥಣಿಗೆ ಬರುತ್ತಿದ್ದೇನೆ. ಈ ಸಲದ ಚುನಾವಣೆಯಲ್ಲಿ ಮಹೇಶ ಕುಮಟಳ್ಳಿ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುವಂತೆ ವಿನಂತಿಸಿದರು.

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.