Breaking News

ಜಿಲ್ಲಾ ಆಸ್ಪತ್ರೆ ಈಗ ಕ್ಲೀನ್ …ಕ್ಲೀನ್

ಬೆಳಗಾವಿ-ಮಾಜಿ ಶಾಸಕ ಅಭಯ ಪಾಟೀಲರ ಸ್ವಚ್ಛತಾ ಪಡೆ ಜಿಲ್ಲಾ ಆಸ್ಪತ್ರೆಯಲ್ಲಿ ಶೌಚಾಲಯ ಡಸ್ಟಬೀನ್ ಸೇರಿದಂತೆ ಹೊರ ರೋಗಿಗಳ ವಿಭಾಗವನ್ನು ಕ್ಷಣಾರ್ಧದಲ್ಲಿಯೇ ಕ್ಲೀನ್ ಮಾಡಿ ಎಲ್ಲರ ಗಮನ ಸೆಳೆದರು
ಸ್ವತಹ ಅಭಯ ಪಾಟೀಲರು ಹೊರ ರೋಗಿಗಳ ವಿಭಾಗದ ಶೌಚಾಲಯವನ್ನು ಸ್ವಚ್ಛಗೊಳಿಸಿದರು ನೂರಕ್ಕೂ ಹೆಚ್ಚು ಯುವಕರು ಕಸಗೂಡಿಸಿ ಅಭಿಯಾನದಲ್ಲಿ ಪಾಲ್ಗೊಂಡು ಇತರರಿಗೆ ಮಾದರಿಯಾದರು
ಈ ಸಂಧರ್ಭದಲ್ಲಿ ಮಾತನಾಡಿದ ಅಭಯ ಪಾಟೀಲ ಬೆಳಗಾವಿಯ ಜನ ಪತ್ರ ಬರೆದು ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಅಭಿಯಾನ ನಡೆಸಿದ್ದೇವೆ ಇಲ್ಲಿಯ ಪರಿಸ್ಥಿತಿ ನೋಡಿದಾಗನಿಜವಾಗಿಯೂ ಇದು ಆಸ್ಪತ್ರೆ ಅಲ್ಲ ಇದೊಂದು ನರಕ ಅನ್ನೋದು ಖಾತ್ರಿ ಆಯಿತು ಅದಕ್ಕಾಗಿ ಮುಂದಿನ ಭಾನುವಾರವೂ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರೊಂದಿಗೆ ಸೇರಿ ಅಭಿಯಾನ ಮುಂದುವರೆಸುತ್ತೇವೆ ಎಂದರು
ಅಭಯ ಪಾಟೀಲರ ಪಡೆ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿರುವದನ್ನು ಗಮನಿಸಿದ ಸಾರ್ವಜನಿಕರೂ ಅಭಿಯಾನದಲ್ಲಿಪಾಲ್ಗೊಂಡಿದ್ದು ವಿಶೇಷವಾಗಿತ್ತು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *