ಬೆಳಗಾವಿಯಲ್ಲಿ ದರೋಡೆಗೆ ವಿಫಲ ಯತ್ನ
ಬೆಳಗಾವಿ- ಚಾಕು ಚೂರಿ ಸಮೇತ ಬಂದ ದರೋಡೆಕೋರರು ಸಕ್ಯುರಿಟಿ ಗಾರ್ಡಗೆ ಅರವಳಿಕೆ ಮದ್ದು {ಕ್ಲೋರೋಫಾರ್ಮ}ನೀಡಿ ಮನೆಯ ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ಶನಿವಾರ ಮದ್ಯರಾತ್ರಿ ನಡೆದಿದೆ
ನಗರದ ಕಾಂಗ್ರೆಸ್ ರಸ್ತೆಯಲ್ಲಿರುವ ಅರುಣ ಚಿತ್ರ ಮಂದಿರದ ಹಿಂಬದಿಯಲ್ಲಿರು ಅಹಜಾ ಎಂಬ ಮನೆಗೆ ಬಂದ ಮೂರು ಜನ ದರೋಡೆಕೋರರು ಮೊದಲು ಸಕ್ಯುರಿಟಿ ಕಾರ್ಡಗೆ ಕಟ್ಟಿ ಹಾಕಿ ಆತನಿಗೆ ಕ್ಲೋರೋಫಾರ್ಮ ನೀಡಿ ಆತನನ್ನು ಮಲಗಿಸಿ ನಂತರ ಮನೆಗೆ ನುಗ್ಗಲು ಮುಂದಾಗಿದ್ದಾರೆ ಅಷ್ಟರಲ್ಲಿ ನೆರೆಯ ಮನೆಯ ಸಕ್ಯುರಿಟಿ ಗಾರ್ಡ ಇದನ್ನು ನೋಡಿ ಚಿರಾಡಲು ಆರಂಬಿಸಿದಾಗ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೆಳಲಾಗಿದೆ
ಮೂರು ಜನ ದರೋಡೆಕೋರರು ಚಾಕು ಚೂರಿ ಹಾಹು ಇನ್ನಿತರ ಸಲಕರಣೆ ಗಳೊಂದಿಗೆ ಬಂದಿದ್ದರು ಸಕ್ಯುರಿಟಿ ಗಾರ್ಡನ ಚೀರಾಟ ಕೂಗಾಟ ಕೇಳಿ ಚಾಕು ಚೂರಿ ಅಲ್ಲಿಯೇ ಎಸೆದು ಪರಾರಿಯಾಗಿದ್ದಾರೆ
ಹಿರಿಯ ಪೋಲಿಸ್ ಅಧಿಕಾರಿಗಳು ಬಾನುವಾರ ಬೆಳಿಗ್ಗೆ ಸ್ಥಳಕ್ಕೆ ಧಾವಿಸಿ ಪರಶೀಲನೆ ನಡೆಸಿದ್ದಾರೆ
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …