ಬೆಳಗಾವಿ- ಸುಮಾರು ಅರವತ್ತು ವಯಸ್ಸಿನ ಅಜ್ಜಿ ಯಾವ ಊರಿನಿಂದ ಬೆಳಗಾವಿಗೆ ಬಂದಿದ್ದಳೋ ಗೊತ್ತಿಲ್ಲ.ಈ ಅಜ್ಜಿ,ಬಸ್ ಹತ್ತುವಾಗ ಗ್ರೀನ್ ಸಿಗ್ನಲ್ ಬಿದ್ದಿದೆ ಚಾಲಕ ಹಿಂದೆ ಮುಂದೆ ನೋಡದೇ ಬಸ್ ಓಡಿಸಿದ್ದಾನೆ ಅಜ್ಜಿ ಬಸ್ಸಿನ ಗಾಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ನಡೆದಿದೆ.
ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸರಕಾರಿ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ 60 ವರ್ಷದ ವೃದ್ಧೆ ಮೃತಪಟ್ಟ ಘಟನೆ ನಡೆದಿದೆ.
ಸಿಗ್ನಲ್ ಬಿಟ್ಟಿತೆಂದು ಚಾಲಕ ಬಸ್ ಚಲಾಯಿಸುವಾಗ ಸಿಲುಕಿ ಅಜ್ಜಿ ಮೃತಪಟ್ಟಿದ್ದಾಳೆ. ಬೇರೆ ಗ್ರಾಮದಿಂದ ಬೆಳಗಾವಿ ನಗರಕ್ಕೆ ಬಂದಿದ್ದ ಅಜ್ಜಿಗೆ 60 ವರ್ಷ ವಯಸ್ಸು ಎಂದು ಅಂದಾಜಿಸಲಾಗಿದೆ.ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.