ಖಾನಾಪೂರ ಪಿ ಎಸ್ ಐ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಳಗಾವಿ- ಅಮಾಯಕ ಕೂಲಿ ಕಾರ್ಮಿಕರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿ ದೂರು ಕೊಡಲು ಹೋದ ಮಹಿಳೆಯರಿಗೆ ಕಿರುಕಳ ನೀಡುತ್ತುರುವ ಖಾನಾಪೂರ ಪಿಎಸ್ಐ ಪರಶರಾಮ ಪೂಜೇರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು

ಖಾನಾಪೂರ ಪಿಎಸ್ಐ ಪೂಜೇರ ಅವರು ಬಾಳಗೌಡ ಬಸಪ್ಪ ಪಾಟೀಲನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ದೂರು ನೀಡಲು ಹೋದವರ ವಿರುದ್ಧವೇ ಕೇಸು ದಾಖಲಿದಸಿ ಗುಂಡಾಗಿರಿ ಮಾಡುತ್ತಿದ್ದಾರೆ ಪಿಎಸ್ಐ ಖಾನಾಪೂರದಲ್ಲಿ ಮಟಕಕಾ ಜೂಜಾಟ,ಆಕ್ರಮ ಮರಳು ದಾಸ್ತಾನು ಸೇರಿದಂತೆ ಅನೇಕ ಆಕ್ರಮ ಚಟುವಟಿಕೆಗಳಿಗೆ ಅನಕೂಲ ಮಾಡಿ ಕೊಟ್ಡಿದ್ದು ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಶಯಿಸಿದರು

ಜಿಲ್ಲಾಧಿಕಾರಿ ಜಯರಾಂ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿದರು ಪ್ರಕರಣವನ್ನು ಪರಶೀಲಿಸಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *