Home / Breaking News / ಮೂರಾಬಟ್ಟೆಯಾದ ಬೆಳಗಾವಿ ತರಕಾರಿ ಮಾರುಕಟ್ಟೆ…!

ಮೂರಾಬಟ್ಟೆಯಾದ ಬೆಳಗಾವಿ ತರಕಾರಿ ಮಾರುಕಟ್ಟೆ…!

ಬೆಳಗಾವಿ- ನಗರದ ಹೃದಯ ಭಾಗದಲ್ಲಿರುವ ಹೋಲ್ ಸೇಲ್ ತರಕಾರಿ ಮಾರುಕಟ್ಟೆ ಮೂರಾಬಟ್ಟೆಯಾಗಿದೆ ಕಾಂಟೋನ್ಮೆಂಟ ಪ್ರದೇಶದಲ್ಲಿರುವ ಈ ಮಾರುಕಟ್ಟೆಯ ಲೀಜ್ ಅವಧಿ ಮುಗಿದು ಎರಡು ವರ್ಷವಾದರೂ ಇನ್ನುವರೆಗೆ ಈ ಮಾರುಕಟ್ಟೆ ಸ್ಥಳಾಂತರಗೊಂಡಿಲ್ಲ

ಬೆಳಗಾವಿಯ ಕಾಂಟೋನ್ಮೆಂಟ ಅಧಿಕಾರಿಗಳು ಈ ಮಾರುಕಟ್ಟೆಯ ಲೀಜ್ ಅವಧಿಯನ್ನು ಮುಂದುವರೆಸುವದಿಲ್ಲ ಎಂದು ಹೇಳಿದ್ದರು ಆದರೆ ಈಗ ಲೀಜ್ ಅವಧಿ ಮುಗಿದು ಎರಡು ವರ್ಷ ಕಳೆದರೂ ಈ ಮಾರುಕಟ್ಟೆ ಸ್ಥಳಾಂತರಗೊಂಡಿಲ್ಲ

ಹೋಲ್ ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಎರಡು ವ್ಯಾಪಾರಿ ಸಂಘಟನೆಗಳು ಇವೆ ಒಂದು ಯೂನಿಯನ್ ನಗರದ ಗಾಂಧಿ ನಗರದ ಬಳಿ ನ್ಯಾಶನಲ್ ಹಾಯವೇ ಗೆ ಹೊಂದಿಕೊಂಡು ಅನಧೀಕೃತವಾಗಿ ಹೊಸ ಮಾರುಕಟ್ಟೆ ನಿರ್ಮಾಣ ಮಾಡುತ್ತಿದೆ ಸರ್ಕಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಇನ್ನೊಂದು ಮಾರುಕಟ್ಟೆಯನ್ನು ನಿರ್ಮಿಸುತ್ತಿದೆ

ಹೀಗಾಗಿ ಈ ಮಾರುಕಟ್ಟೆ ಸ್ಥಳಾಂತರ ಗೊಳ್ಳದೇ ನಿಖರವಾದ ಪರ್ಯಾಯ ಸ್ಥಳವನ್ನು ನಿಗದಿ ಮಾಡದೇ ಮಾರುಕಡ್ಟೆ ಮೂರಾಬಟ್ಟೆಯಾಗಲಿದೆ ತರಕಾರಿ ಮಾರುಕಟ್ಟೆಯಲ್ಲಿ ಒಟ್ಟು ಎರಡು ಯೂನಿಯನ್ ಗಳು ಇವೆ ಒಂದು ಯೂನಿಯನ್ನ್ ಅನಧೀಕೃತವಾಗಿ ಮಾರುಕಟ್ಟೆ ನಿರ್ಮಾಣ ಮಾಡುತ್ತಿದೆ ಇನ್ನೊಂದು ಯೂನಿಯನ್ ಎಪಿಎಂಸಿ ಮಾರುಕಟ್ಟೆಗೆ ಹೋಗಲು ಸಿದ್ಧವಿದೆ ವ್ಯಾಪಾರಿಗಳಲ್ಲಿ ಭಿನ್ನಮತ ಭುಗಿಲೆದ್ದ ಕಾರಣ ಅನಧೀಕೃತವಾಗಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆಗೂ ಪಾಲಿಕೆ ಬ್ರೇಕ್ ಹಾಕಿದೆ

ಕಾಂಟೋನ್ಮೆಂಟ ಪ್ರದೇಶದಲ್ಲಿರುವ ತರಕಾರಿ ಮಾರುಕಟ್ಟೆ ಎಪಿಎಂಸಿಗೆ ಶಿಪ್ಟ ಆಗಬೇಕು ಎನ್ನುವದು ಬಹುದಿನಗಳ ಬೇಡಿಕೆಯಾಗಿದೆ ಎಪಿಎಂಸಿಗೆ ಹೋದರೆ ನಮ್ಮ ಆಟ ನಡೆಯುವದಿಲ್ಲ ಎಂದು ಹೆದರಿ ಹೋಲ್ ಸೇಲ್ ವ್ಯಾಪಾರಿಗಳು ಗಾಂಧಿ ನಗರದ ಬಳಿ ಪಾಲಿಕೆಯಿಂದ ಅನುಮತಿ ಪಡೆಯದೇ ತಮ್ಮದೇ ಆದ ಸ್ವಂತ ಮಾರುಕಟ್ಟೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ

ಹಾಗಾದರೆ ತರಕಾರಿ ಮಾರುಕಟ್ಟೆ ಸರಕಾರದ ಆಧೀನದಲ್ಲಿ ಇಲ್ಲವೇ ಬೆಳಗಾವಿಯಲ್ಲಿ ಎಪಿಎಂಸಿ ಮಾರುಕಟ್ಟೆ ಇರುವಾಗ ಮತ್ತೊಂದು ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡಿದವರು ಯಾರು ? ಖಾಸಗಿ ಮಾರುಕಟ್ಟೆಗೆ ಲಗಾಮು ಹಾಕಿ ಜಿಲ್ಲಾಧಿಕಾರಿಗಳು ಹೋಲ್ ಸೇಲ್ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಗೆ ಶಿಪ್ಟ ಮಾಡುವದು ಅತ್ಯಗತ್ಯವಾಗಿದೆ

Check Also

ಬೆಳಗಾವಿಯ 22 ಶಾಲೆಗಳಿಗೆ ಶನಿವಾರವೂ ಚಿರತೆ,ರಜೆ…

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಚಿರತೆ ಆತಂಕ ಮುಂದುವರೆದಿದ್ದು,ನಾಳೆ ಶನಿವಾರವೂ,ಬೆಳಗಾವಿಯ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿಯ ಹನುಮಾನ ನಗರದ …

Leave a Reply

Your email address will not be published. Required fields are marked *