Breaking News
Home / Breaking News / ಈಜಲು ಹೋಗಿ ನೀರು ಪಾಲಾದ ಯುವಕ..

ಈಜಲು ಹೋಗಿ ನೀರು ಪಾಲಾದ ಯುವಕ..

ಬೆಳಗಾವಿ- ಬೆಳಗಾವಿ ನಗರದ ಮರಾಠಾ ಮಂಡಳ ಕಾಲೇಜಿನ ವಿಧ್ಯಾರ್ಥಿಯೊಬ್ಬ ಸುವರ್ಣ ಸೌಧದ ಹಿಂದಿರುವ ಕಲ್ಲಿನ ಕ್ವಾರಿ ಹೊಂಡದಲ್ಲಿ ಈಜಲು ಹೋಗಿ ನೀರು ಪಾಲದ ಘಟನೆ ನಡೆದಿದೆ

ಬೆಳಗಾವಿ ಸಮೀಪದ ಹಂದಿಗನೂರ ಗ್ರಾಮದ ನಿವಾಸಿ ಅಮರ ಪೀರಾಜಿ ಮಾವುತ (18) ಮೃತ ದುರ್ದೈವಿಯಾಗಿದ್ದಾನೆ ಶುಕ್ರವಾರದಂದು ಈತ ತನ್ನ ಗೆಳೆಯರೊಂದಿಗೆ ಸೇರಿಕೊಂಡು ನೀಲಜಿ ಗ್ರಾಮದಲ್ಲಿರುವ ಮತ್ತೊಬ್ಬ ಗೆಳೆಯನ ಮನೆಗೆ ಉಟಕ್ಕೆ ಹೊರಟಿದ್ದ ಇಲ್ಲಿ ಹೋಗುವಾಗ ಸುವರ್ಣ್ ಸೌಧದ ಹಿಂದೆ ಇರುವ R N ಶೆಟ್ಟಿಯ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದಾನೆ

ಶುಕ್ರವಾರ ಮಧ್ಯಾಹ್ನ ಈಜುವ ಸಂಧರ್ಭದಲ್ಲಿ ಈತ ನೀರಿನಲ್ಲಿ ಮುಳುಗಿದ್ದ ಶುಕ್ರವಾರ ಸಂಜೆಯಿಂದ ಪೋಲೀಸರು ಇತನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು ಆದರೆ ಶನಿವಾರ ಬೆಳಿಗ್ಗೆ ಈತನ ಶವ ಪತ್ತೆಯಾಗಿದೆ

ಮೃತ ಅಮರ ಪೀರಾಜಿ ಮಾವುತ ಇತ್ತಿಚಿಗಷ್ಟೆ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಬರೆದು ರಿಲ್ಯಾಕ್ಸ ಆಗಿದ್ದ ಇತನ ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು ತಂದೆ ಜನಜಾಗರಣ ಸಂಸ್ಥೆಯ ಕಾರ್ಯಕರ್ತನಾಗಿದ್ದಾನೆ

ಹಿರೇಬಾಗೇವಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

About BGAdmin

Check Also

ಬರ ಪರಿಹಾರ ಕಾಮಗಾರಿ,ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ದೇಶಪಾಂಡೆ

ಬೆಳಗಾವಿ ಬರಗಾಲ‌ ಬಿದಿದ್ದಿದೆ. ಅಧಿಕಾರಿಗಳು ಧನ ಕಾಯ್ತಿರೋ ಅಥವಾ ಕೆಲಸ ಮಾಡುತ್ತಿರೋ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ದೇಶಪಾಂಡೆ ತರಾಟೆಗೆ …

Leave a Reply

Your email address will not be published. Required fields are marked *