ಬೆಳಗಾವಿ- ಬಿಜೆಪಿಯ ಚಾಣಕ್ಯರಂದೇ ಪ್ರಸಿದ್ಧಿ ಪಡೆದಿರುವ ಕೇಂದ್ರದ ಗೃಹ ಸಚಿವ ಅಮೀತ ಶಾ ಅವರು ಜನೇವರಿ 17 ರಂದು ಬೆಳಗಾವಿಗೆ ಆಗಮಿಸುತ್ತಿದ್ದು,ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಆಕಾಂಕ್ಷಿಗಳಲ್ಲಿ ಹೊಸ ಹುರುಪು ಬಂದಿದೆ
ಅಮೀತ ಶಾ ಅವರು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಸಂಧರ್ಭದಲ್ಲಿ ಬೆಳಗಾವಿಗೆ ಆಗಮಿಸುತ್ತಿರುವದು ವಿಶೇಷವಾಗಿದ್ದು,ಅಂದು ಅವರು ಬೆಳಗಾವಿಯ ಬಿಜೆಪಿ ಅಭ್ಯರ್ಥಿಯನ್ನು ಫೈನಲ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅಮೀತ ಶಾ ಅವರು ಬೆಳಗಾವಿಗೆ ಬಂದು ಹೋದ ಬಳಿಕ ಉಪ ಚುನಾವಣೆಯ ದಿನಾಂಕವೂ ಪ್ರಕಟವಾಗುತ್ತದೆ ಎಂದು ಹೇಳಲಾಗಿದ್ದು ಅಮೀತ ಶಾ ಅವರ ಬೆಳಗಾವಿಯ ಪ್ರವಾಸ ಬಿಜೆಪಿಯ ಅಗಣಿತ ಆಕಾಂಕ್ಷಿಗಳಲ್ಲಿ ಚೈತನ್ಯ ಮೂಡಿಸಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಲು ಬಿಜೆಪಿ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆದಿದೆ.ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ 70 ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವದು ಬೆಳಗಾವಿ ಜಿಲ್ಲೆಯಲ್ಲಿ ಹೊಸ ದಾಖಲೆ ಸೃಷ್ಠಿಸಿದೆ.17 ರಂದು ಅಮೀತ ಶಾ ಬೆಳಗಾವಿಗೆ ಬಂದಾಗ ಟಿಕೆಟ್ ಫೈನಲ್ ಮಾಡಿಯೇ ಹೋಗ್ತಾರೆ,ಎನ್ನುವ ಸುದ್ಧಿ ಈಗ ಸಾಕಷ್ಟು ಪ್ರಚಾರ ಪಡೆದಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೀಗೀದೆ….
1) ಡಾ. ರವಿ ಪಾಟೀಲ
2) ಸಂಜಯ ಪಾಟೀಲ
3) ಎಂ.ಬಿ ಝಿರಲಿ
4) ರಮೇಶ್ ಕತ್ತಿ
5)ವಿಶ್ವನಾಥ ಪಾಟೀಲ
6) ಜಗದೀಶ್
ಮೆಟಗುಡ್
7)ಅಮೀತ ಕೋರೆ
8) ರಾಜೀವ ಟೋಪಣ್ಣವರ
9) ಡಾ ಸೋನವಾಲಕರ
10) ಭಾರತಿ ಮಗದುಮ್
11) ಶಂಕರಗೌಡ ಪಾಟೀಲ112) ರುದ್ರಣ್ಣಾ ಚಂದರಗಿ ಸೇರಿದಂತೆ ಸುಮಾರು 70 ಕ್ಕೂ ಹೆಚ್ವು ಆಕಾಂಕ್ಷಿಗಳು ಬಿಜೆಪಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಸುರೇಶ ಅಂಗಡಿ ಕುಟುಂಬದ ಕುರಿತು ಎಲ್ಲ ನಾಯಕರ ಸಾಫ್ಟ್ ಕಾರ್ನರ್
ಸುರೇಶ ಅಂಗಡಿ ಅವರ ನಿಧನದಿಂದಾಗಿ ತೆರವು ಆಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಸ್ಥಾನ ತುಂಬಲು ಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎನ್ನುವದು ಬಿಜೆಪಿ ನಾಯಕರ,ಮುತ್ತು ಬಿಜೆಪಿ ಕಾರ್ಯಕರ್ತರ ಒತ್ತಾಯವಾಗಿದೆ ಸುರೇಶ ಅಂಗಡಿ ಅವರ ಪುತ್ರಿ ಶ್ರದ್ಧಾ ಶೆಟ್ಟರ್ ಈಗ ಬಿಜೆಪಿಯಲ್ಲಿ ಸಕ್ರೀಯವಾಗುತ್ತಿದ್ದು,ಬೆಳಗಾವಿ ಜಿಲ್ಲೆಯ ಬಹುತೇಕ ಜಿಲ್ಲೆಯ ನಾಯಕರು ಸುರೇಶ್ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎನ್ನುವ ಅಭಿಪ್ರಾಯ ವ್ಯೆಕ್ತ ಪಡಿಸಿದ್ದಾರೆ.ಕೇಂದ್ರ ಗೃಹ ಸಚಿವ ಅಮೀತ ಶಾ ಅವರು ಬೆಳಗಾವಿಗೆ ಬಂದ ಸಂಧರ್ಭದಲ್ಲಿ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಾಧ್ಯತೆ ಇದೆ.