Breaking News
Home / Breaking News / ಬೆಳಗಾವಿ ಟಿಕೆಟ್ ಗಾಗಿ ಅಮೇರಿಕಾದಿಂದಲೂ ಆನ್ ಲೈನ್ ಅರ್ಜಿ…!!

ಬೆಳಗಾವಿ ಟಿಕೆಟ್ ಗಾಗಿ ಅಮೇರಿಕಾದಿಂದಲೂ ಆನ್ ಲೈನ್ ಅರ್ಜಿ…!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆ ಘೋಷಣೆ ಆಗಿಲ್ಲ ಆದರೂ,ಈ ಚುನಾವಣೆ ವಿಶ್ವವ್ಯಾಪಿ ಚರ್ಚೆ ಆಗುತ್ತಿರುವದು ಸತ್ಯ….

ಬೆಳಗಾವಿ ಎಂಪಿ ಟಿಕೆಟ್ ಗಾಗಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.ಈ ಪಟ್ಟಿಯಲ್ಲಿ ಅಮೇರಿಕಾದ ಹೆಸರೊಂದು ಸೇರ್ಪಡೆಯಾಗಿದೆ,ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹುಳ್ಳೂರ ಗ್ರಾಮದ ವ್ಯಕ್ತಿಯೊಬ್ಬ ಅಮೇರಿಕಾದಲ್ಲಿ ಸೆಟಲ್ ಆಗಿದ್ದು ಈತ ಎನ್ ಆರ್ ಐ ಅಂದ್ರೆ ವಿದೇಶಿ ಕೋಟಾದಲ್ಲಿ ಬಿಜೆಪಿ ಟಿಕೆಟ್ ಕೊಡುವಂತೆ ಆನ್ ಲೈನ್ ಅರ್ಜಿ ಹಾಕಿದ್ದಾನೆ..

ಸೂರ್ಯಕಾಂತ ಸಂತ್ರೆ ಎಂಬಾತ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹುಳ್ಳೂರ ಗ್ರಾಮದವನಾಗಿದ್ದು ಈತ ಜಪ್ನೀಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಈಗ ಅಮೇರಿಕಾದ ವಾಶಿಂಗ್ಟನ್ ನಲ್ಲಿ ವಾಸವಾಗಿದ್ದು,ಈತ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ದಿಸಲು ಬಿಜೆಪಿ ಟಿಕೆಟ್ ಕೊಡುವಂತೆ,ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ,ಅಮೀತ ಶಾ ಮತ್ತು ಸಂತೋಷ ಜೀ ಅವರಿಗೆ ಈ ಮೇಲ್ ಮಾಡಿ ಬಿಜೆಪಿ ಟಿಕೆಟ್ ಕೊಡುವಂತೆ ಆನ್ ಲೈನ್ ಅರ್ಜಿ ಸಲ್ಲಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ದೆಹಲಿಯ ಬಿಜೆಪಿ ಕಚೇರಿಯ ಪ್ರಮುಖರು ಸೂರ್ಯಕಾಂತ ಸಂತ್ರೆ ಅವರನ್ನು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಂಡಿದ್ದು ಬಿಜೆಪಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಅಮೇರಿಕಾ ನಿವಾಸಿಯ ಹೆಸರೂ ಸೇರಿಕೊಂಡಿದ್ದು,ಈ ಪಟ್ಟಿಗೆ ಈಗ ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಂತಾಗಿದೆ….

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *