Breaking News

ಶಾಸಕ ಅನೀಲ ಬೆನಕೆ ಪ್ರಯತ್ನ, ಬೆಳಗಾವಿಗೆ ಬಂತು ಭಂಪರ್ ಲಾಟರಿ!

ಅಂಬೇಡ್ಕರ್ ಉದ್ಯಾನದಲ್ಲಿ ಸ್ಟಡಿ ಸೆಂಟರ್ ನಿರ್ಮಾಣ: ಶಾಸಕಾ ಅನಿಲ ಬೆನಕೆ

ಬೆಳಗಾವಿ: ಶಾಸಕ ಅನಿಲ ಬೆನಕೆ ಅವರ ವಿಷೇಶವಾದ ಪ್ರಯತ್ನದಿಂದ 1.30 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಗ್ರಂಥಾಲಯ ಸೇರಿದಂತೆ ಕೋಚಿಂಗ್ ಸೆಂಟರ್ ಗಳ ನಿರ್ಮಾಣ ಆಗಲಿದೆ.‌

ಇಂದು ಬೆಳಗಾವಿ ಮಹಾನಗರ ಮಾಲಿಕೆಯಲ್ಲಿ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ, ಪಾಲಕೆ ಕಮಿಷನರ್ ರುದ್ರೇಶ ಗಾಳಿ ಸೇರಿದಂತೆ ಅನೇಕ ದಲಿತ ಮುಖಂಡರು ಸಭೆ ನಡೆಸಿ, ಡಾ.ಬಾಬಾಸಾಹೇಬ್ ಉದ್ಯಾನವನದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ, ಸಾಂಸ್ಕೃತಿಕ ಭವನ, ಐಎಎಸ್, ಐಪಿಎಸ್ ಕೆಎಎಸ್ ಟ್ರೇನಿಂಗ್ ಸೆಂಟರ್ ಮಾಡಲು ಕುರಿತು ಚರ್ಚೆ ನಡೆಸಲಾಯಿತು. ‌

ಚರ್ಚೆ ಬಳಿಕ ಮಾಹಿತಿ ನೀಡಿದ ಶಾಸಕ ಅನಿಲ ಬೆನಕೆ ಅವರು, ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆ ಎದುರುಗಡೆ ಇರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ, ರಾಜ್ಯ ಸರ್ಕಾರದ ವತಿಯಿಂದ 1.30 ಕೋಟಿ ಅನುದಾನ ಮಂಜುರಾಗಿದ್ದು, ಉದ್ಯಾನವನದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ, ಸಾಂಸ್ಕೃತಿಕ ಭವನ, ಐಎಎಸ್, ಐಪಿಎಸ್ ಕೆಎಎಸ್ ಟ್ರೇನಿಂಗ್ ಸೆಂಟರ್ ಮಾಡಲು ಅವಕಾಶ ಇದೆ. ಈ ಎಲ್ಲಾ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಇದೆ ಶುಕ್ರವಾರ ನಡೆಯಲಿದೆ ಎಂದು ತಿಳಿಸಿದರು. ‌

ಇದೇ ವೇಳೆ ಮಾತನಾಡಿದ ದಲಿತ ಸಂಘಟನೆಯ ಮುಖಂಡ ಮಲ್ಲೇಶ ಚೌಗಲೆ ಅವರು, ಇವತ್ತು ಬೆಳಗಾವಿ ಇತಿಹಾಸದಲ್ಲಿ ಯುವಕರಿಗೆ, ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ದೊಡ್ಡ ಕೊಡುಗೆ ನೀಡಿದೆ. ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರ ವಿಷೇಶ ಪ್ರಯತ್ನದಿಂದ 1.30 ಕೋಟಿ ರೂಪಾಯಿಗಳ ಅನುದಾನದಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಕೋಚಿಂಗ್ ಸೆಂಟರ್, ಡಿಜಿಟಲ್ ಗ್ರಂಥಾಲಯ ಸೇರಿದಂತೆ ಸಾಂಸ್ಕೃತಿಕ ಭವನ ನಿರ್ಮಾಣ ಆಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅನುದಾನ ಬಿಡುಗಡೆ ಆಗಿದಕ್ಕೆ ವಿವಿಧ ಸಂಘಟನೆಗಳಿಂದ ಶಾಸಕ ಅನಿಲ ಬೆನಕೆ ಅವರಿಗೆ ಸನ್ಮಾನಿಸಲಾಯಿತು. ಬಳಿಕ ಪಾಲಿಕೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.‌

ಈ ವೇಳೆ ನಗರ ಸೇವಕ‌ ಜೀರ್ಗೆಹಾಳ ಸೇರಿದಂತೆ ಪಾಲಿಕೆ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *