ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಸರಳ ವ್ಯಕ್ತಿತ್ವದ ನಾಯಕರು.ಅವರ ಬಳಿ ಯಾರೇ ಹೋದರೂ ವಿನಯಯದಿಂದ ಮಾತನಾಡಿ ಸರ್ವರ ಸಮಸ್ಯೆ ಆಲಿಸುವ ಅವರು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಸದ್ದಿಲ್ಲದೇ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಬೆಳಗಾವಿಯ ರೇಲ್ವೇ ನಿಲ್ಧಾಣದ ಎದುರಲ್ಲಿದ್ದ ಬಸ್ ನಿಲ್ದಾಣ ಅತ್ಯಂತ ಹಳೆಯದಾಗಿತ್ತು,,ಈ ನಿಲ್ಧಾಣವನ್ನು ಬೆಳಗಾವಿಯ ಜನ ಗೋವಾ ನಿಲ್ಧಾಣ ಎಂದು ಕರೆಯುತ್ತಿದ್ದರು,ಬೆಳಗಾವಿಯಿಂದ ಗೋವಾಕ್ಕೆ ಹೋಗುವ ಬಸ್ ಗಳು ಈ ನಿಲ್ಧಾಣಕ್ಕೆ ಬಂದೇ ಹೋಗುತ್ತವೆ.ಗೋವಾದಿಂದ ಬೆಳಗಾವಿಗೆ ಬರುವ ಬಸ್ ಗಳು ರೇಲ್ವೆ ಸ್ಟೇಶನ್ ಎದರಲ್ಲಿರುವ ಬಸ್ ನಿಲ್ಧಾಣಕ್ಕೆ ಎಂಟ್ರಿ ಕೊಟ್ಟ ನಂತರವೇ ಕೇಂದ್ರ ಬಸ್ ನಿಲ್ಧಾಣಕ್ಕೆ ಹೋಗುತ್ತವೆ.
ಈ ಬಸ್ ನಿಲ್ಧಾಣ ಶಿಥಿಲಗೊಂಡಿದ್ದನ್ನು ಗಮನಿಸಿದ ಶಾಸಕ ಅನೀಲ ಬೆನಕೆ ಕಳೆದ ವರ್ಷ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಹೈಟೆಕ್ ಬಸ್ ನಿಲ್ಧಾಣದ ಕಾಮಗಾರಿಗೆ ಚಾಲನೆ ನೀಡಿದ್ದರು,ಕೇವಲ 11 ತಿಂಗಳ ಅವಧಿಯಲ್ಲೇ ಹೈಟೆಕ್ ಬಸ್ ನಿಲ್ಧಾಣ ನಿರ್ಮಾಣಗೊಂಡಿದ್ದು,ಶಾಸಕ ಅನೀಲ ಬೆನಕೆ ಇಂದು ಕಾಮಗಾರಿಯನ್ನು ಪರಶೀಲಿಸಿದರು.
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಶಾಸಕ ಅನೀಲ ಬೆನಕೆ,ನಿಗದಿತ ಸಮಯದಲ್ಲಿ ಹೈಟೆಕ್ ಬಸ್ ನಿಕ್ಧಾಣ ನಿರ್ಮಾಣಗೊಂಡಿದೆ.ಈ ಬಸ್ ನಿಲ್ಧಾಣ ಹಾಗೂ ಮಹಾನಗರ ಪಾಲಿಕೆ ಎದುರಲ್ಲಿ ನಿರ್ಮಿಸಿರುವ ಪಾಲಿಕೆ ಆಡಳಿತ ಕಚೇರಿ ಕಟ್ಟಡ,ಜೊತೆಗೆ ನೆಹರು ನಗರದಲ್ಲಿ ನಿರ್ಮಿಸಿರುವ ಸ್ಪೋರ್ಟ್ ಕಾಂಪ್ಲೆಕ್ಸ್ ಈ ಮೂರು ಹೊಸ ಕಟ್ಟಡಗಳನ್ನು ಹದಿನೈದು ದಿನದಲ್ಲಿ ಮುಖ್ಯಮಂತ್ರಿಗಳ ಹಸ್ತದಿಂದ ಲೋಕಾರ್ಪಣೆ ಮಾಡುವದಾಗಿ ಅನೀಲ ಬೆನಕೆ ತಿಳಿಸಿದರು.