ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಆಗಬೇಕು ಎಂದು ಪಟ್ಟು ಹಿಡಿದು ಚುನಾವಣೆ ಮಾಡಿಸಿದ್ದೇವೆ.35 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ.ಬೆಳಗಾವಿ ಪಾಲಿಕೆ ಈಗ ನಮ್ಮ ಹಿಡಿತದಲ್ಲಿದ್ದು,ದಸರಾ ಹಬ್ಬ ಮುಗಿದ ಬಳಿಕ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಶಾಸಕ ಅನೀಲ ಬೆನಕ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಯಾರದೋ ಕಂಟ್ರೋಲ್ ಇರೋದು ಬೇಡ,ನಗರಸೇವಕರು ತಮ್ಮ,ತಮ್ಮ ವಾರ್ಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಈ ವಿಚಾರದಲ್ಲಿ ಯಾರೂ ಹಸ್ತಕ್ಷೇಪ ಮಾಡೋದಿಲ್ಲ,ದಸರಾ ಮುಗಿದ ಬಳಿಕ ಮೂರು ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಒಟ್ಟಿಗೆ ಚುನಾವಣೆ ನಡೆಯಬಹುದು ಅನ್ನೋದು ನನ್ನ ಅನಿಸಿಕೆ ಎಂದು ಶಾಸಕ ಅನೀಲ ಬೆನಕೆ ಹೇಳಿದರು.
ಬುಡಾದಲ್ಲಿ ಮೀಟೀಂಗ್ ಇರೋ ವಿಷಯ ನಮಗೆ ಗೊತ್ತೇ ಇರಲಿಲ್ಲ.ಬುಡಾ ಮೀಟೀಂಗ್ ನಡೆಯುವಾಗ ನಾವು ಬೆಂಗಳೂರಿನಲ್ಲಿ ನಡೆದ ಮೀಟೀಂಗ್ ನಲ್ಲಿ ಭಾಗವಹಿಸಿದ್ದೇವು,ನಾವು ಯಾವಾಗ ಪ್ರೀ ಇರ್ತೇವು ಆ ದಿವಸ ಮೀಟೀಂಗ್ ಮಾಡಿದ್ರೆ ಖಂಡಿತ ಭಾಗವಹಿಸುತ್ತೇವೆ.ಎಂದು ಬೆನಕೆ ತಿಳಿಸಿದರು.