Breaking News

ಅನುಮತಿ ಕೊಡೋದಿಲ್ಲ ಎಂದು ನೇರವಾಗಿ ಹೇಳಿದ ಏಕೈಕ ಜಿಲ್ಲಾಧಿಕಾರಿ….

ಬೆಳಗಾವಿ-ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಮಾಡಲು ಅನುಮತಿ ಕೊಡೋದಿಲ್ಲ ಎಂದು ನೇರವಾಗಿ,ಬಹಿರಂಗವಾಗಿ ಹೇಳಿದ ಮೊದಲ ಜಿಲ್ಲಾಧಿಕಾರಿ ಹಿರೇಮಠ ಇದರಲ್ಲಿ ಎರಡು ಮಾತಿಲ್ಲ.

ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ‌.ಜಿ ಹಿರೇಮಠ ಅವರು ಈಬಾರಿ ರಾಜ್ಯೋತ್ಸವದ ದಿನ ಎಂಈಎಸ್ ಗೆ ಕಪ್ಪು ದಿನ ಆಚರಿಸಲು ಅನುಮತಿ ಕೊಡೋದಿಲ್ಲ ಎಂದು ನೇರವಾಗಿ ಹೇಳುವ ಮೂಲಕ ಗಡಿನಾಡಿನ ಹೋರಾಟದಲ್ಲಿ ಹೊಸ ದಾಖಲೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಕಳೆದ ಐದು ದಶಕಗಳಿಂದ ನಾಡವಿರೋಧಿ ಎಂಈಎಸ್ ನಾಯಕರು ರಾಜ್ಯೋತ್ಸವದ ದಿನ ಕಪ್ಪು ದಿನ ಆಚರಿಸುತ್ತಲೇ ಬಂದಿದ್ದಾರೆ.ಇದಕ್ಕೆ ಎಲ್ಲ ಸರ್ಕಾರಗಳು,ಈ ಕಾಲಾವಧಿಯಲ್ಲಿ ಇದ್ದ ಎಲ್ಲ ಜಿಲ್ಲಾಧಿಕಾರಿಗಳು ಕಪ್ಪು ದಿನಕ್ಕೆ ಅನುಮತಿ ಕೊಡುತ್ತಲೇ ಬಂದಿದ್ದು ಜಿಲ್ಲಾಧಿಕಾರಿ ಎಂಜಿ ಹಿರೇಮಠ ಅವರು ಇದಕ್ಕೆ ಬ್ರೇಕ್ ಹಾಕುವ ಮೂಲಕ ಸಮಸ್ತ ಕನ್ನಡಿಗರ ಮೆಚ್ವುಗೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಕನ್ನಡಪರ ಸಂಘಟನೆಗಳು ಕಪ್ಪು ದಿನ ಆಚರಿಸಲು,ಅಂದು ನಡೆಯುವ ಸೈಕಲ್ ರ್ಯಾಲಿ ನಡೆಸಲು ಎಂಈಎಸ್ ನಾಯಕರಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದಾಗ,ಈ ಬಗ್ಗೆ ಪರಶೀಲನೆ ಮಾಡ್ತೀವಿ,ಸರ್ಕಾರದ ಗಮನಕ್ಕೆ ತರ್ತಿವಿ,ಈಬಗ್ಗೆ ವಿಚಾರ ಮಾಡ್ತೀವಿ ಎಂದು ಭರವಸೆ ನೀಡಿ,ನಂತರ ರಾಜ್ಯೋತ್ಸವದ ಮುನ್ನಾದಿನ ಮದ್ಯರಾತ್ರಿ ಕಪ್ಪು ದಿನಾಚರಣೆಗೆ ಅನುಮತಿ ಕೊಡುತ್ತಲೇ ಬಂದಿದ್ದರು.ಆದ್ರೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಅನುಮತಿ ಕೊಡೋದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಗಡಿಭಾಗದ ಕನ್ನಡಿಗರ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲಾಧಿಕಾರಿಗಳ ಹೇಳಿಕೆಗೆ ಸಮ್ಮತಿ ಸೂಚಿಸುವ ಮೂಲಕ ತಾವು ಕನ್ನಡದ ಮುಖ್ಯಮಂತ್ರಿ ಎಂದು ಸಾಭೀತುಪಡಿಸಲು ಇದೊಂದು ಸುವರ್ಣಾವಕಾಶ.

Check Also

ಕ್ಯಾಂಟೋನ್ ಮೆಂಟ್ ವಸತಿ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರ ಕುರಿತು ಸಭೆ

15 ದಿನಗಳಲ್ಲಿ ಸಮೀಕ್ಷಾ ವರದಿ‌ ಸಲ್ಲಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಬೆಳಗಾವಿ ನಗರದ ಪ್ರದೇಶದ ಕ್ಯಾಂಟೋನಮೆಂಟ್ …

Leave a Reply

Your email address will not be published. Required fields are marked *