Breaking News
Home / Breaking News / ಬೆಳಗಾವಿ ಡಿಸಿ ಬಸ್ಸಿನಲ್ಲಿ ಹಳ್ಳಿಗೆ ಹೋಗ್ತಾರಂತೆ…!!!

ಬೆಳಗಾವಿ ಡಿಸಿ ಬಸ್ಸಿನಲ್ಲಿ ಹಳ್ಳಿಗೆ ಹೋಗ್ತಾರಂತೆ…!!!

ಜಿಲ್ಲಾಧಿಕಾರಿ-ತಹಶೀಲ್ದಾರರ ನಡೆ; ಹಳ್ಳಿ ಕಡೆ ಕಾರ್ಯಕ್ರಮ

ಬೆಳಗಾವಿ, – ಜನರ ಮನೆಬಾಗಿಲಿಗೆ ಕೊಂಡೊಯ್ಯಬೇಕು ಎಂಬ ಸರಕಾರದ‌ ಆಶಯದಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಶನಿವಾರ (ಅ.16) ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ಭೇಟಿ ನೀಡಲಿದ್ದು, ಜನರ ಅಹವಾಲುಗಳನ್ನು ಆಲಿಸಿ‌ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.

ಗ್ರಾಮ ಭೇಟಿ ಕಾಲದಲ್ಲಿ ರೈತರಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸೇವೆಗಳ ಕುರಿತು ಪರಿಶೀಲಿಸಿ, ಸಮಸ್ಯೆಗಳಿದ್ದರೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಅಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಜಿಲ್ಲಾಧಿಕಾರಿ ಕಚೇರಿಯ ಆವರಣದಿಂದ ಬಸ್ ಮೂಲಕ ವೀರಾಪುರ ಗ್ರಾಮಕ್ಕೆ ತೆರಳಲಿದ್ದಾರೆ.

ಬೆಳಿಗ್ಗೆ 10 ಗಂಟೆಯಿಂದ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ, ಚರ್ಚೆ ನಡೆಸಲಿದ್ದಾರೆ.

ಜಿಲ್ಲಾಧಿಕಾರಿ ಭೇಟಿ ಸಂದರ್ಭದಲ್ಲಿ ಕಂದಾಯ, ಭೂ ಮಾಪನ ಹಾಗೂ ಭೂ ದಾಖಲೆಗಳ ಇಲಾಖೆ, ಕೃಷಿ, ತೋಟಗಾರಿಕೆ, ಆಹಾರ, ಲೋಕೋಪಯೋಗಿ, ಹೆಸ್ಕಾಂ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರುವರು.

ಆಯಾ ತಹಶೀಲ್ದಾರರು ಗ್ರಾಮ ಭೇಟಿ:

ಸರಕಾರದ ನಿರ್ದೇಶನದಂತೆ ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಒಂದು ಗ್ರಾಮಕ್ಕೆ ಭೇಟಿ ನೀಡಿ ಜನರ‌ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿದ್ದಾರೆ.
ಅದೇ ರೀತಿ ಆಯಾ ತಾಲ್ಲೂಕಿನ ತಹಶೀಲ್ದಾರರು ಕೂಡ ಅದೇ ದಿನ ತಮ್ಮ ತಾಲ್ಲೂಕಿನ ವ್ಯಾಪ್ತಿಯ ಒಂದು ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಪರಿಹರಿಸಲಿದ್ದಾರೆ.

ಜಿಲ್ಲಾಧಿಕಾರಿಗಳು ಭೇಟಿ ನೀಡಲಿರುವ ಕಿತ್ತೂರು ಹೊರತುಪಡಿಸಿ ಜಿಲ್ಲೆಯ ಉಳಿದ 13 ತಾಲ್ಲೂಕುಗಳ ತಹಶೀಲ್ದಾರರು ‌ಕೂಡ ಶನಿವಾರ (ಅ.16) ಆಯಾ ತಾಲ್ಲೂಕಿನ ಒಂದು‌ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ತಹಶೀಲ್ದಾರರು ಭೇಟಿ ನೀಡಲಿರುವ ಗ್ರಾಮಗಳ ವಿವರ‌:

ಬೆಳಗಾವಿ (ಸೋನಟ್ಟಿ), ಖಾನಾಪುರ(ಯಡೋಗಾ), ಹುಕ್ಕೇರಿ (ಮೊದಗೆ), ಬೈಲಹೊಂಗಲ (ವಕ್ಕುಂದ), ರಾಮದುರ್ಗ (ಮುದಕವಿ), ಸವದತ್ತಿ (ಶಿರಸಂಗಿ), ಗೋಕಾಕ(ರಡೇರಹಟ್ಟಿ), ಮೂಡಲಗಿ(ಸಂಗನಕೇರಿ), ಚಿಕ್ಕೋಡಿ(ಶಮನೇವಾಡಿ), ಅಥಣಿ(ಕಕಮರಿ), ರಾಯಬಾಗ(ಜೋಡಟ್ಟಿ), ನಿಪ್ಪಾಣಿ (ಶೇಂಡೂರ) ಹಾಗೂ ಕಾಗವಾಡ(ಮಂಗಸೂಳಿ).
ತಹಶೀಲ್ದಾರರು ಈ ಗ್ರಾಮಗಳಲ್ಲಿ ಜನರ ಅಹವಾಲುಗಳನ್ನು ಆಲಿಸಿ, ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.
*****

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *