ಬೆಳಗಾವಿ- ಚುನಾವಣಾ ಆಯೋಗದ ನಿಯಮ ಉಲ್ಲಂಘಿಸಿ ಸರದಿಯಲ್ಲಿ ನಿಂತು ಮತ ಚಲಾಯಿಸದೇ ನೇರವಾಗಿ ಮತಗಟ್ಟೆ ಪ್ರವೇಶ ಮಾಡಿ ಹಕ್ಕು ಚಲಾಯಿಸಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಹಾಗೂ ಐದು ಜನ ಬಬಲಿಗರ ವಿರುದ್ಧ FIR ದಾಖಲಾಗಿದೆ.
ಶಾಸಕ ಅನಿಲ್ ಬೆನಕೆ ಹಾಗೂ ಐದು ಜನ ಬೆಂಬಲಿಗರ ವಿರುದ್ಧ FIR ದಾಖಲಾಗಿದೆ.ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ಹಿನ್ನೆಲೆ.
ನಿಯಮ ಉಲ್ಲಂಘನೆ ಮಾಡಿ ಮತಗಟ್ಟೆ ಪ್ರವೇಶ ಮಾಡಿದ ಶಾಸಕ ಹಾಗೂ ಐದು ಜನ ಬೆಂಬಲಿಗರು,
ಬೆಳಗಾವಿ ವಿಶ್ವೇಶ್ವರಯ್ಯ ನಗರದ ಬೂತ್ ಸಂಖ್ಯೆ 26ರಲ್ಲಿ ಸರದಿಯಲ್ಲಿ ನಿಂತುಕೊಳ್ಳದೇ ನೇರವಾಗಿ ಮತಗಟ್ಟೆ ಪ್ರವೇಶ ಮಾಡಿದ್ದರು.
ಶಾಸಕ ಅನಿಲ್ ಬೆನಕೆ, ಪಾಲಿಕೆ ಸದಸ್ಯ ಶ್ರೇಯಸ್, ಪ್ರವೀಣ್ ಪಾಟೀಲ್, ಸಂದೀಪ್, ಮೋಹನ್ ಹೂಗಾರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು,ಮತಗಟ್ಟೆ ಪ್ರವೇಶ ಮಾಡಿ ಫೋನ್ ಬಳಕೆ ಮಾಡಿದ್ದ ಶಾಸಕ ಅನೀಲ ಬೆನಕೆ ಟೀಕೆಗೆ ಗುರಿಯಾಗಿದ್ದರು.