Breaking News
Home / Breaking News / ಚೀಲ.ಕೊಟ್ಟಿದ್ದರೆ, ಬೆಳಗಾವಿ ಚಾರ್ಲಿಯ ಜೀವ ಉಳಿಯುತ್ತಿತ್ತು…..!!!

ಚೀಲ.ಕೊಟ್ಟಿದ್ದರೆ, ಬೆಳಗಾವಿ ಚಾರ್ಲಿಯ ಜೀವ ಉಳಿಯುತ್ತಿತ್ತು…..!!!

ಬೆಳಗಾವಿ- ಪರದೆಯ ಮೇಲೆ ಚಾರ್ಲಿ ಸಿನಿಮಾ ಸದ್ದು ಮಾಡುತ್ತಿದೆ.ಅದೇ ಮಾದರಿಯ ಘಟನೆಯೊಂದು ಕುಂದಾ ನಗರಿ ಬೆಳಗಾವಿಯಲ್ಲಿ ನಡೆದಿದೆ. ನಾಯಿಯ ಜೀವ ಉಳಿಸಲು ಪಾಲಕ ಅಲೆದಾಡಿದರೂ ಆ ನಾಯಿ ಬದುಕಲಿಲ್ಲ,

ಬೆಳಗಾವಿ ಚಾರ್ಲಿಯ ಕಥೆ

ಇದು ಆರು ಮಕ್ಕಳ ತಾಯಿಯೊಬ್ಬಳ ಕರುಣಾಜನಿಕ ಕಥೆ.ಮಕ್ಕಳ ಹೆತ್ತು ಹೊತ್ತು ದೊಡ್ಡವರನ್ನಾಗಿ ಮಾಡಿದ ಆ ಮಹಾತಾಯಿ ಮತ್ತೆ ಮೇಲೆ ಏಳಲೇ ಇಲ್ಲ. ರಕ್ತ ಹೀನತೆಯಿಂದ ಬಳಲುತ್ತಿದ್ದ ತಾಯಿಗೆ ರಕ್ತ ನೀಡಿ ಮತ್ತೆ ಎಂದಿನಂತೆ ಓಡಾಡಬೇಕೆಂಬ ಪ್ರಾಣಿ ಪ್ರೀಯರ ಬಯಕೆ ಕೈಗೂಡಲೇ ಇಲ್ಲ.ಒಂದು ಮೂಕ ಪ್ರಾಣಿ ಉಳಿಸಿಕೊಳ್ಳಲು ನಮ್ಮೆಲ್ಲ ಸರ್ಕಾರಿ, ಖಾಸಗಿ ವ್ಯವಸ್ಥೆಗಳು ಸಹಾಯಕ್ಕೆ ಬಾರದೇ ಇರುವುದು ದುರಂತವೇ ಸರಿ.

ಹೀಗೆ ಮುದ್ದು ಮುದ್ದಾಗಿರುವ ನಾಯಿ ಮರಿಗಳಿಗೆ ಜನ್ಮ ನೀಡಿದ ಈ ಮುದ್ದು ನಾಯಿಯ ಹೆಸರು ಸೋನಿ.Labradorಜಾತಿಗೆ ಸೇರಿದ ಈ ನಾಯಿಯನ್ನು ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ಪಾಟೀಲ್ ಎಂಬುವವರು ಸಾಕಿ ಸಲುವಿದ್ದರು. ಅದೇನಾಯಿತೋ ಗೊತ್ತಿಲ್ಲ ಮುದ್ದಿನ ನಾಯಿ ರಕ್ತ ಹೀನತೆಯಿಂದ ಬಳಲು ಪ್ರಾರಂಭಿಸಿತು.ಕಾಕತಿ ಗ್ರಾಮದ ಪಶು ವೈದ್ಯರ ಬಳಿ ತೋರಿಸಿದ್ದರು. ಆದರೆ ರಕ್ತ ಹೀನತೆಯಿಂದ ಬಳಲುತ್ತಿದೆ ಅಂತ ಗೊತ್ತಾದ ನಂತರ ಎರಡು ದಿನಗಳ ಮೂರು ದಿನಗಳ ಹಿಂದೆ ಇದಕ್ಕೆ ರಕ್ತ ಹಾಕಬೇಕು.ರಕ್ತ ಹಾಕಿದರೆ ಜೀವ ಉಳಿಯುತ್ತೆ ಅಂತ ವೈದ್ಯರು ಸಲಹೆ ನೀಡಿದ ನಂತರ ಪ್ರಾಣಿ ರಕ್ಷಣೆಯಲ್ಲಿ ತೊಡಗಿದ್ದ ವಿನಾಯಕ್ ಕಾಳಸ್ಕರ್ ಎಂಬುವವರು ಬೇರೆಡೆ ರಕ್ತದ ವ್ಯವಸ್ಥೆ ಮಾಡಿದರು.ಆದರೆ ದುರಂತ ನೋಡಿ ಎರಡು ದಿನ ನಗರದ ವಿವಿಧ ಖಾಸಗಿ ರಕ್ತಬಂಢಾರ, ಆಸ್ಪತ್ರೆ ಹಾಗೂ ಪಶು ವೈದ್ಯರ ಬಳಿ ಅಲೆದಾಡಿದ್ದೇ ಬಂತು.ರಕ್ತ ಸಂಗ್ರಹದ ಚೀಲ ಸಿಗಲೇ ಇಲ್ಲ.ಬೇರೆ ಮಾರ್ಗವಿಲ್ಲದೇ ಕೊನೆಯ ಪ್ರಯತ್ನವಾಗಿ ಮೂತ್ರಿಗೆ ಹಾಕುವ ಚೀಲವನ್ನೇ ರಕ್ತ ವರ್ಗಾವಣೆಗೆ ಬಳಿಸಿದ್ದಾಗ ರಕ್ತ ಹೆಪ್ಪು ಗಟ್ಟಿ ವರ್ಗಾವಣೆ ಆಗಲೇ ಇಲ್ಲ. ಕೊನೆಗೆ ಮುದ್ದಿನ ನಾಯಿ ರಕ್ತ ಸಿಗದೇ ಒದ್ದಾಡಿ ಪ್ರಾಣಬಿಟ್ಟಿದೆ.

ಪ್ರಾಣಿಗಳ ರಕ್ಷಣೆಗೆ ಕೆಲವೊಂದು ಬಾರಿ ರಕ್ತದ ಅವಶ್ಯಕತೆ ಇರುತ್ತದೆ. ಆದರೆ ರಕ್ತ ಹಾಕಲು ರಾಜ್ಯದ ಯಾವುದೇ ಪಶು ಆಸ್ಪತ್ರೆಯಲ್ಲಿ ರಕ್ತ ಹಾಕುವ ಕಿಟ್ ಗಳೇ ಇಲ್ಲ ಎನ್ನುವುದು ದುರಂತ.ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ನಿತ್ಯ ಸಾವಿರಾರು ಪ್ರಾಣಿಗಳು ಸಕಾಲಕ್ಕೆ ರಕ್ತ ಹಾಕದ ಕಾರಣ ಸಾವನ್ನಪ್ಪುತ್ತಿವೆ.ಇಲ್ಲಿಯೂ ಸಹ ಈ ಮುದ್ದು ನಾಯಿಗೆ ರಕ್ತ ವರ್ಗಾವಣೆ ಮಾಡುವ ಚೀಲ ಸಿಗದೇ ಇರುವುದಕ್ಕೆ ಸಾವನ್ನಪ್ಪಿದೆ. ವೈದ್ಯರ ಪತ್ರ ಹಿಡಿದು ರಕ್ತ ಸಂಗ್ರಹ ಚೀಲ ನೀಡುವಂತೆ ರಕ್ತ ಕೇಂದ್ರ, ಆಸ್ಪತ್ರೆ, ಮೆಡಿಕಲ್ ಶಾಪ್ ಗಳಿಗೆ ಅಲೆದರೂ ಹೊರಗಡೆ ಹೊಡಲು ಬರುವುದಿಲ್ಲ ಎಂದು ನಿರಾಕರಿಸಿದರು…ಯಾರೊಬ್ಬರೂ‌ ಮಾನವೀಯತೆ ತೋರಲಿಲ್ಲ.ಇದೇ ಕಾರಣಕ್ಕಾಗಿ ಈ ನಾಯಿ ಸಾವು ಉದಾಹರಣೆ ಅಷ್ಠೇ

ಪಶು ಸಂಗೋಪನಾ ಸಚಿವರು ನಮ್ಮ ಇಲಾಖೆ ಹೈಟೆಕ್ ಮಾಡಿದ್ದೀವಿ ಅಂತ ಹೇಳುತ್ತಾರೆ. ಮೊಬೈಲ್ ಅಂಬ್ಯುಲೆನ್ಸ್ ಸಹ ಬಿಡುಗಡೆ ಮಾಡಿದ್ದಾರೆ. ಆದರೆ ಒಂದು ಪ್ರಾಣಿ ಉಳಿಸಲು ರಾಜ್ಯದ ಪಶು ಆಸ್ಪತ್ರೆಗಳಿಂದ ಸಾಧ್ಯವಿಲ್ಲ ಎನ್ನುವುದಾದರೆ ನಮ್ಮ ವ್ಯವಸ್ಥೆಗೆ ಛೀಮಾರಿ ಹಾಕಲೇ ಬೇಕು.ಇನ್ನಷ್ಟು ಪಶು ಪ್ರಾಣಿಗಳ ಜೀವ ಹಾರುವ ಮುನ್ನ ಪಶು ಸಂಗೋಪನಾ ಸಚಿವರು ಎಚ್ಚೆತ್ತು ಪ್ರಾಣಿಗಳ ಜೀವ ಉಳಿಸಲು ಮುಂದಾಗಬೇಕಿದೆ.

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *