ಬೆಳಗಾವಿ: ಬೆಳಗಾವಿಯ ಕಾಲೇಜು ರಸ್ತೆಯ ಸರ್ಕಾರಿ ಸರ್ದಾರ ಪ್ರೌಢಶಾಲೆಯ ಮೈದಾನದಲ್ಲಿ ನಡೆಯುತ್ತಿರುವ ಎಂಎಲ್‌ಎ ಶ್ರೀ ಅನಿಲ್ ಎಸ್.ಬೆನಕೆ ಟ್ರೋಫಿ- ೨೦೨೩ ಅಂತಾರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ ಒಂದೆಡೆ ರಾಷ್ಟ್ರ ಮಟ್ಟದ ಗಮನ ಸೆಳೆಯುತ್ತಿದ್ದರೆ,
ಇನ್ನೊಂದೆಡೆ ಕ್ರಿಕೆಟ್ ಆಟ ಆಡಿಸುತ್ತಲೇ ತಮ್ಮ ರಾಜಕೀಯ ಕಾರ್ಯವೈಖರಿ ಮೂಲಕ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಅವರು ಕ್ಷೇತ್ರದ ಮತದಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಅಂತಾರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ ಆಯೋಜಿಸಿದ್ದೇನೆ ಎಂದು ಶಾಸಕ ಅನಿಲ ಬೆನಕೆ ಅವರು ತಮ್ಮ ರಾಜಕೀಯ ಚಟುವಟಿಕೆಗಳಿಂದ ದೂರು ಸರಿದಿಲ್ಲ. ಆಟ ಆಡಿಸುವುದಕ್ಕೂ ಸೈ, ರಾಜಕೀಯ ಕಾರ್ಯಚಟುವಟಿಕೆಗೂ ಸೈ ಎನಿಸಿಕೊಂಡಿರುವ ಅನಿಲ್ ಬೆನಕೆ ಅವರ ಸದ್ಯದ ವಿಳಾಸ್ ಕೇರ್‌ಆಪ್ ಸರ್ದಾರ್ ಗ್ರೌಂಡ್ ಎನ್ನುವಂತಾಗಿದೆ.
ಹೌದು, ಶಾಸಕ ಅನಿಲ್ ಬೆನಕೆ ಅವರು ತಮ್ಮ ಹೆಸರಿನಲ್ಲೇ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ ಆಯೋಜಿಸಿದ್ದಾರೆ. ಈ ಪಂದ್ಯದಲ್ಲಿ ದೇಶದ ನಾನಾ ಮೂಲೆಗಳಿಂದ ಕ್ರಿಕೆಟ್ ತಂಡಗಳು ಪಾಲ್ಗೊಳ್ಳುತ್ತಿವೆ. ಕ್ರಿಕೆಟ್ ಎಂದರೆ ಯಾರಿಗೆ ತಾನೇ ಇಷ್ಟಇಲ್ಲ ಹೇಳಿ. ಕ್ರಿಕೆಟ್ ಪಂದ್ಯ ಮಾತ್ರ ಅನಿಲ್ ಬೆನಕೆ ಅವರ ರಾಜಕೀಯ ಕಾರ್ಯಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ. ಈಗ ಅವರು ಸರ್ದಾರ ಮೈದಾನವೇ ಅವರ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವನ್ನಾಗಿಸಿಕೊಂಡಿದ್ದಾರೆ.
ಶಾಸಕ ಅನಿಲ ಬೆನಕೆ ಅವರು ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿಯೂ ಯಶಸ್ಸಿಯಾಗಿದ್ದಾರೆ. ಅಧಿಕಾರಿಗಳು ಕೂಡ ಶಾಸಕರಿದ್ದಲ್ಲಿಗೆ ಬಂದು, ಅಭಿವೃದ್ಧಿ ವಿಚಾರವಾಗಿ ಅವರೊಂದಿಗೆ ಮಾತುಕತೆ, ಸಭೆಗಳನ್ನೂ ಮಾಡತೊಡಗಿದ್ದಾರೆ. ಜನತೆಗೂಕೂಡ ಸುಲಭವಾಗಿ ಲಭ್ಯವಾಗಿದ್ದಾರೆ. ಅನಿಲ ಬೆನಕೆ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.