Breaking News

ಪೋತದಾರ್…ಬರುತ್ತಿದ್ದಾರೆ…ಖಬರ್ ದಾರ್….!

ಬೆಳಗಾವಿ-ಹಲವಾರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಪಳಗಿರುವ ಕಾಂಗ್ರೆಸ್ ಮುಖಂಡ ಅನೀಲ ಪೋತದಾರ ಅವರ ಮುಂದಿನ ರಾಜಕೀಯ ನಡೆ ಏನು ಅನ್ನೋದರ ಬಗ್ಗೆ ನಗರದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ
ಇತ್ತೀಚಿಗೆ ಅನೀಲ ಪೋತದಾರ ಯಾಕೋ ಏನೋ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದಾರೆ ಕೆಲವರು ಅವರ ರಾಜಕೀಯ ಮುಂದಿನ ನಡೆ ಕುರಿತು ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.
ಕೆಲವರು ಪೋತದರ್ ಕಾಂಗ್ರೆಸ್ ಪಕ್ಷವನ್ನು ತ್ಯೆಜಿಸಿ ಪಕ್ಷಾಂತರ ಮಾಡಬಹುದೆಂದು ಲೆಕ್ಕ ಹಾಕಿದರೆ ಇನ್ನು ಕೆಲವರು ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದುಕೊಂಡು ಕ್ರಿಯಾಶೀಲರಾಗಿ ರಾಜಕಾರಣ ಮಾಡಬಹುದೆಂದು ನಿರಿಕ್ಷೆ ಮಾಡಿದ್ದಾರೆ
ಬಲ್ಲ ಮೂಲಗಳ ಪ್ರಕಾರ ಅನೀಲ ಪೋತದಾರ ಅವರನ್ನು ಬಿಜೆಪಿಗೆ ಕರೆತಂದು ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಾಯಕರು ರಣತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ
ಆದರೆ ಅನೀಲ ಪೋತದಾರ ಅವರ ರಾಜಕೀಯ ನಡೆ ನಿಘೂಡವಾಗಿದ್ದು ಅವರ ಬೆಂಬಲಿಗರು ಮಾತ್ರ ಪೋತದಾರ ಬರುತ್ತಿದ್ದಾರೆ ಖಬರ್ ದಾರ್ ಎಂದು ಅವರ ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ನೀಡುತ್ತರುವದಂತೂ ಸತ್ಯ ಸಂಗತಿಯಾಗಿದೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *