ಬೆಳಗಾವಿ-ಗಣೇಶ ಉತ್ಸವ ಹಾಗೂ ಬಕ್ರಿದ್ ಹಬ್ಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಬೆಳಗಾವಿ ಜಿಲ್ಲಾ ವ್ಯಾಪ್ತಿಯ ರೌಡಿ ಪರೇಡ್ ನಡೆಯಿತು. ನಗರದ ಪೊಲೀಸ್ ಮೈದಾನದಲ್ಲಿ ಜಿಲ್ಲೆಯ 734 ರೌಡಿ ಶೀಟರ್ ಗಳನ್ನು ಕರೆದು ಹಬ್ಬ ವೇಳೆಯಲ್ಲಿ ಯಾವುದೇ ರೀತಿಯ ಶಾಂತಿಭಂಗಕ್ಕೆ ಯತ್ನ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಲಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1300 ಜನ ರೌಡಿ ಶೀಟರ್ ಇದ್ದಾರೆ. ಈ ಪೈಕಿನ 734 ಜನ ರೌಡಿ ಶೀಟರ್ ಗಳು ಇಂದು ಪರೇಡಗೆ ಹಾಜರಾಗಿದ್ದರು. ಇನ್ನೂ ರೌಡಿ ಶೀಟರ್ ಲಿಸ್ಟ್ ನಿಂದ 116 ಜನರ ಹೆಸರನ್ನು ತೆಗೆದು ಹಾಕಲಾಗಿದೆ. ಪರಿವರ್ತನೆ ಆದ ರೌಡಿ ಶೀಟರ್ ಗಳಿಗೆ ಪೊಲೀಸ್ ಸಬ್ ಬೀಟ್ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾವುದು ಎಂದು ಎಸ್ಪಿ ರವಿಕಾಂತೇಗೌಡ ಹೇಳಿದ್ದಾರೆ. ಇನ್ನೂ ರೌಡಿ ಪರೇಡ್ ಗೆ ಗೈರು ಹಾಜರಾದ ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾವುದು ಎಂದರು.
Check Also
ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?
ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …