ಖಾನಾಪೂರ ಕ್ಷೇತ್ರದಲ್ಲಿ ಅಮ್ಮನ ಪಾತ್ರ ನಿಭಾಯಿಸುತ್ತಿರುವ ಅಂಜಲಿ ತಾಯಿ
ಬೆಳಗಾವಿ- ಅಂಜಲಿ ಎಂಬ ಹೆಸರಿನೊಂದಿಗೆ ತಾಯಿ ಎಂಬ ಬಿರುದು ಸೇರಿಕೊಂಡು ಅಂಜಲಿತಾಯಿ ಎಂದೇ ಜನಾನುರಾಗಿರುವ ಈ ಅಂಜಲಿ ತಾಯಿ ಖಾನಾಪೂರ ಶಾಸಕರಾಗಿದ್ದು, MBBS ಪದವಿಯನ್ನೂ ಪಡೆದು ಡಾ!! ಅಂಜಲಿಯಾಗಿದ್ದಾರೆ.
ಡಾಕ್ಟರ್ ಆಗಿರುವ ಈ ಅಂಜಲಿತಾಯಿ ನಿಂಬಾಳ್ಕರ್ ಖಾನಾಪೂರ ಕ್ಷೇತ್ರದಲ್ಲಿ ತಾಯಿ ಪಾತ್ರವನ್ನೂ ನಿಭಾಯಿಸುತ್ತಿದ್ದಾರೆ ಮಹಿಳಾ ಪ್ರತಿನಿಧಿಯಾಗಿ ಒಬ್ಬ ಮಹಿಳೆಯರ ಆರೋಗ್ಯದ ಕುರಿತು ಖಾನಾಪೂರ ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳಲ್ಲಿ ವಿಶೇಷವಾಗಿ ವಿಧ್ಯಾರ್ಥಿನಿಯರ ಜೊತೆ ವೈದ್ಯಕೀಯ ಸಂವಾದ ನಡೆಸಿ ಈ ಅಂಜಲಿತಾಯಿ ಖಾನಾಪೂರ ಕ್ಷೇತ್ರದಲ್ಲಿ ಅಮ್ಮನ ಪಾತ್ರ ನಿಭಾಯಿಸಿ ಇತರ ಮಹಿಳಾ ಪ್ರತಿನಿಧಿಗಳಿಗೆ ಮಾದರಿಯಾಗುತ್ತಿದ್ದಾರೆ ಖಾನಾಪೂರದ ಶಾಸಕಿ ಅಂಜಲಿ ತಾಯಿ ನಿಂಬಾಳ್ಕರ್
ಖಾನಾಪೂರ ತಾಲೂಕಿನ ಬೀಡಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ವೈದ್ಯಕೀಯ ಸಂವಾದ ನಡೆಸಿ ಮುಟ್ಟಿನ ನೈರ್ಮಲ್ಯದ ಕುರಿತು ಉಪನ್ಯಾಸ ನೀಡಿರುವ ಅಂಜಲಿತಾಯಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಮಹಿಳೆಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ ಡಾಕ್ಟರ್ ಪದವಿಯ ಸೇವೆಯನ್ನು ಒದಗಿಸುತ್ತಿರುವದು ಪ್ರಶಂಸನೀಯ
ಹಣ್ಣೊಂದು ಕಲಿತರೆ ಶಾಲೆಯೊಂದು ತೆರೆದೆಂತೆ ಎನ್ನುವ ಮಾತಿದ್ದು ಕಲಿತ ಹೆಣ್ಣು ಸಮಾಜದ ಒಳಿತಿಗಾಗಿ ಹಿಗೂ ಸೇವೆ ಮಾಡಬಹುದು ಎಂದು ಖಾನಾಪೂರದ ಶಾಸಕಿ ಡಾ ಅಂಜಲಿ ತಾಯಿ ನಿಂಬಾಳ್ಕರ್ ತೋರಿಸಿ ಕೊಟ್ಟಿದ್ದಾರೆ.
ಪ್ರಚಾರದ ಹುಚ್ಚು ಇವರಿಗಿಲ್ಲ ,ಪ್ರಚಾರಕ್ಕಾಗಿ ಈ ಅಂಜಲಿ ತಾಯಿ ಎಂದಿಗೂ ಪೋಜು ಕೊಟ್ಟಿಲ್ಲ ಪ್ರಚಾರದ ಹಂಗಿಲ್ಲದೇ ಈ ಅಂಜಲಿ ತಾಯಿ ಖಾನಾಪೂರ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದಾರೆ.