ಬೆಳಗಾವಿ- ಬೆಳಗಾವಿ ಜಿಲ್ಲೆಯ ಖಾನಾಪೂರ ವಿಧಾನಸಭಾ ಕ್ಷೇತ್ರ ಶೇ 80% ರಷ್ಟು ಅರಣ್ಯ ಪ್ರದೇಶದಲ್ಲಿ ವಿಸ್ತರಿಸಿದೆ. ಇಲ್ಲಿಯ ಅರಣ್ಯರೋಧನ ಕೇಳಲು ಈ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಜರ್ ಸಾಕ್ಷಾತ್ ತಾಯಿಯಾಗಿ ಅವತರಿಸಿದ್ದಾರೆ ಎನ್ನುವದಕ್ಕೆ ಅವರು ಮಾಡುತ್ತಿರುವ ಮಹತ್ಕಾರ್ಯಗಳೇ ಅದಕ್ಕೆ ಸಾಕ್ಷಿಯಾಗಿವೆ…
ಖಾನಾಪೂರ ಕ್ಷೇತ್ರದ ಅತ್ಯಂತ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕಾಡು ಪ್ರದೇಶದ ಜನರಿಗೆ ಅಂಜಲಿ ನಿಂಬಾಳ್ಕರ್ ಧ್ವನಿಯಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಈ ಕ್ಷೇತ್ರದ ಯಾವುದೇ ಒಬ್ಬ ನಾಯಕ ಮಾಡಿದಂತಹ ಕೆಲಸಗಳನ್ನು ಅಂಜಲಿ ನಿಂಬಾಳ್ಕರ್ ಮಾಡುತ್ತಿದ್ದಾರೆ. ಯಾವೊಬ್ಬ ನಾಯಕ ಕಾಲಿಡದ ಗ್ರಾಮಗಳಿಗೆ ಅಂಜಲಿ ಹೋಗುತ್ತಿದ್ದಾರೆ.ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ನಾನೊಬ್ಬ ಅಸಲಿ ನಾಯಕಿ ಎನ್ನುವ ವಿಶ್ವಾಸವನ್ನು ಅವರು ಗಳಿಸುತ್ತಿದ್ದಾರೆ.
ಖಾನಾಪೂರ ಕ್ಷೇತ್ರದ ಇಂದಿರಾನಗರ ಎಂಬ ಗ್ರಾಮದ ಜನ ಕಳೆದ ಮೂವತ್ತು ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಲ್ಲಿಯೇ ಬದುಕು ಸಾಗಿಸುತ್ತಿದ್ದರು.ಅಂಜಲಿ ನಿಂಬಾಳ್ಕರ್ ಈ ಇಂದಿರಾ ನಗರ ಎಂಬ ಗ್ರಾಮದಲ್ಲಿ ಬೆಳಕು ಹರಿಸಿ ಈ ಗ್ರಾಮದಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ.
ಈ ಗ್ರಾಮದಲ್ಲಿ ಲೈಟ್ ಆನ್ ಆಗುತ್ತಿದ್ದಂತೆಯ ಈ ಗ್ರಾಮದ ಜನ ಖುಷಿಪಟ್ಟಿರುವ ಪರಿಯನ್ನು ಊಹೆ ಮಾಡಲೂ ಸಾಧ್ಯವಿಲ್ಲ.
ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಸದ್ದಿಲ್ಲದೆ, ಪ್ರಚಾರದ ಹಂಗಿಲ್ಲದೇ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರು ಇಂದಿರಾ ನಗರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟ ಮಾಹಿತಿಯನ್ನು ಅದೇ ಗ್ರಾಮದ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ.
ಖಾನಾಪೂರ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸುತ್ತಿರುವ ಅಂಜಲಿ ನಿಂಬಾಳ್ಕರ್ ಖಾನಾಪೂರ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ಧಾಣ ನಿರ್ಮಿಸುತ್ತಿದ್ದಾರೆ….