ಗೋವಾ ಕುತಂತ್ರಕ್ಕೆ ಬ್ರೇಕ್, ಸಾಹುಕಾರ್ ನಿರಾಳ….!!

ಬೆಳಗಾವಿ- ಕರ್ನಾಟಕ ಸರ್ಕಾರ ಮಹಾದಾಯಿ ನದಿ ನೀರನ್ನು ಡೈವೋರ್ಟ್ ಮಾಡಿದೆ ಎಂದು ಸುಳ್ಳು ಆಪಾದನೆ ಮಾಡಿ ಯೋಜನೆ ಇನ್ನಷ್ಟು ವಿಳಂಬವಾಗಬೇಕು ಎನ್ನುವ ಗೋವಾ ಸರ್ಕಾರದ ಕುತಂತ್ರಕ್ಕೆ ಮಾನ್ಯ ಸರ್ವೋಚ್ಛ ನ್ಯಾಯಾಲಯ ಬ್ರೇಕ್ ಹಾಕಿರುವ ಹಿನ್ನಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈಗ ನಿರಾಳವಾಗಿದ್ದಾರೆ.

ಸತ್ಯ ಅರಿಯಲು ಕರ್ನಾಟಕ,ಮಹಾರಾಷ್ಟ್ರ ,ಮತ್ತು ಗೋವಾ ಮೂರು ರಾಜ್ಯಗಳ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ನ್ಯಾಯಾಲಯಕ್ಕೆ ವರದಿ ಸೂಚಿಸುವಂತೆ ಆದೇಶಿಸಿರುವದರಿಂದ ಗೋವಾ ಸರ್ಕಾರಕ್ಕೆ ಸೆಟ್ ಬ್ಯಾಕ್ ಆಗಿರುವದು ಸತ್ಯ.

ಮಹಾದಾಯಿ ನದಿ ನೀರು ಬಳಕೆಗೆ ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿ ಫೆಬ್ರುವರಿ 27 ಕ್ಕೆ ಬರೊಬ್ಬರಿ ಒಂದು ವರ್ಷವಾಗುತ್ತದೆ.ಆದ್ರೆ ಗೋವಾ ತಗಾದೆಯಿಂದ ಪರಿಸರ,ಮತ್ತುಅರಣ್ಯ ಇಲಾಖೆಯ ಅನುಮತಿ ಸಿಗದೇ ಇರುವದರಿಂದ ಗೆಜೆಟ್ ಪ್ರಕಾರ ಕಾಮಗಾರಿ ಆರಂಭಿಸಲು ವಿಳಂಬವಾಗಿತ್ತು…

ಏನಾದರೂ ಆಗಲಿ ಒಂದು ಕೈ ನೋಡೇ ಬಿಡೋಣ ಎಂದು ಪ್ರತಿಜ್ಞೆ ಮಾಡಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ,ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು,ಮತ್ತು ಕಾನೂನು ತಜ್ಞರ ತಂಡದೊಂದಿಗೆ ಎರಡು ದಿನದ ಹಿಂದೆ ದೆಹಲಿಗೆ ಹೋಗಿ ಅಲ್ಲಿಯೇ ಠಿಖಾನಿ ಹೂಡಿರುವ ಸಾಹುಕಾರ್ ರಮೇಶ್ ಜಾರಕಿಹೊಳಿ‌ ಮಹಾದಾಯಿ ಕಾಮಗಾರಿ ಆರಂಭಿಸಲು ಎದುರಾಗಿರುವ ಎಲ್ಲ ತೊಡಕುಗಳ ನಿವಾರಣೆಗೆ ಪಟ್ಟು ಹಿಡಿದು ಕೇಂದ್ರದ ಮಂತ್ರಿಗಳನ್ನು ನಿರಂತರವಾಗಿ ಭೇಟಿ ಮಾಡುತ್ತಲೇ ಇದ್ದಾರೆ.

ಇಂದು ಬಿಡುವಿನ ಸಮಯದಲ್ಲಿ ರಾಜಸ್ಥಾನದ ಪುಷ್ಕರ್ ಗೆ ಹೋಗಿ ಬರುವಾಗ ದಾರಿಮದ್ಯದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಚಹಾ ಸೇವಿಸಿ ರಿಲ್ಯಾಕ್ಸ್ ಆದರು..

ಒಮ್ಮೆ ರಮೇಶ್ ಸಾಹುಕಾರ ಯಾವುದೇ ವಿಷಯಕ್ಕೆ ಹಠ ಮಾಡಿದ್ರೆ ಅದು ಪೂರ್ಣಗೊಳ್ಳುವವರೆಗೂ ಸುಮ್ಮನೇ ಕುಳಿತುಕೊಳ್ಳುವದಿಲ್ಲ ,ಎನ್ನುವದನ್ನು ಹಲವಾರು ಬಾರಿ ಸಾಭೀತು ಮಾಡಿ ತೋರಿಸಿದ್ದಾರೆ.

ಮಹಾದಾಯಿ ತೊಡಕು ನಿವಾರಣೆಗೆ ಸಂಕಲ್ಪ ಮಾಡಿರುವ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರ ಪ್ರಯತ್ನ ಫಲಕಾರಿಯಾಗಲಿ ಅನ್ನೋದಷ್ಟೇ ನಮ್ಮ ಹಾರೈಕೆ…

Check Also

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರ ಸದಸ್ಯತ್ವ ರದ್ದು……!!!

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಂದು ಕಡೆ ಅಧಿಕಾರಿಗಳ ನಡುವೆ ತಿಕ್ಕಾಟ ಇನ್ನೊಂದು ಕಡೆ ಪಾಲಿಕೆ ಆಯುಕ್ತರನ್ನೇ ವರ್ಗಾವಣೆ ಮಾಡುವಂತೆ ಪಾಲಿಕೆ …

Leave a Reply

Your email address will not be published. Required fields are marked *