ಬೆಳಗಾವಿ: ಇಲ್ಲಿನ ವಿಧಾನಸೌಧದ ಸೆಂಟ್ರಲ್ ಹಾಲ್.ನಲ್ಲಿ 4 ದಿನಗಳ ಕಾಲ ನಡೆದ ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ ಮತ್ತು ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರ ಶುಕ್ರವಾರ ಸಂಪನ್ನಗೊಂಡಿತು.
ಶಿಬಿರದಲ್ಲಿ ಸಾಧಕ 21 ವಿದ್ಯಾರ್ಥಿಗಳು ಹಾಗೂ ವಿಶೇಷ ಸಾಧಕ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗಣ್ಯರು ವಿತರಿಸಿದರು.
ಬಾಲಭವನದ ಅಧ್ಯಕ್ಷೆ ಅಂಜಲಿತಾಯಿ ನಿಂಬಾಳ್ಕರ್, ಈ ವರ್ಷ ಅಂಗವಿಕಲರಲ್ಲೂ ಪ್ರೋತ್ಸಾಹ ತುಂಬುವ ಸಲುವಾಗಿ ವಿಶೇಷ ಪ್ರಶಸ್ತಿ ನೀಡುತ್ತಿದ್ದೇವೆ. ಮುಂದಿನ ವರ್ಷದಿಂದ ಅಂಗವಿಕಲರಿಗಾಗಿಯೇ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗುವುದು ಎಂದರು.
ಬಳ್ಳಾರಿಯ ವಿದ್ಯಾರ್ಥಿನಿ ಕೀರ್ತಿಕಾ, ಅಧಿಕಾರ ವರ್ಗದವರು ನಮ್ಮ ಬಗ್ಗೆ ಪ್ರೀತಿ ತೋರಿದ್ದಾರೆ. ಕಾಳಜಿ ವಹಿಸಿದ್ದಾರೆ. 4 ದಿನಗಳ ಶಿಬಿರದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಕಲಿತೆ. ಅರಣ್ಯ ಹಾಗೂ ದೇಶಭಕ್ತಿ ಇತಿಹಾಸದ ಬಗ್ಗೆ ಗೊತ್ತಾಯಿತು. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿಯುವಂತಾಯಿತು ಎಂದರು.
ಜಿಲ್ಲಾಧಿಕಾರಿ ಎನ್.ಜಯರಾಮ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಮಚಂದ್ರನ್, ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಇದ್ದರು.