Breaking News

ಅಪಪ್ರಚಾರಕ್ಕೆ ಅವಕಾಶ ಕೊಡದೇ, ಕೊರೊನಾ ಬಿಕ್ಕಟ್ಟನ್ನು ಒಗ್ಗಟ್ಟಿನಿಂದ ಎದುರಿಸೋಣ : ರಾಜು ಸೇಠ

 

ಬೆಳಗಾವಿ-ಕೊರೊನಾ ಇಡೀ ಜಗತ್ತನ್ನೇ ಸಾವು ನೋವುಗಳಿಂದ ತಲ್ಲಣಿಸಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಅಪಪ್ರಾಚರಕ್ಕೆ ಅವಕಾಶ ನೀಡದೇ ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಭೇದ ಮರೆತು ಒಗ್ಗಟ್ಟಿನಿಂದ ಹೋರಾಟ ನಡೆಸಿ ಕೋವಿಡ್ ನಿವಾರಣೆಗೆ ಶ್ರಮಿಸೋಣ ಎಂದು ಅಂಜುಮನ್ –ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಆಸೀಫ್ (ರಾಜು) ಸೇಠ ಅವರು ಕರೆಕೊಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊರೊನಾದಿಂದ ದೇಶದ ಜನರು ತೀವ್ರ ಸಂಕಷ್ಟುಕ್ಕೆ ಒಳಗಾಗಿದ್ದಾರೆ. ಇದರಿಂದ ಮುಕ್ತಿಸಾಧಿಸಲು ವೈದ್ಯರು, ಪೊಲೀಸರು ಮತ್ತು ಸರ್ಕಾರ ಶ್ರಮಿಸುತ್ತಿರುವಾಗ ಅವರೊಂದಿಗೆ ಕೈಜೊಡಿಸಿ ಸಹಕರಿಸಬೇಕಾಗದ ಅಗತ್ಯವಿದೆ. ಇಂಥ ಸಂದರ್ಭದಲ್ಲಿ ಅತೀಯಾದ ಧಾರ್ಮೀಕ ಶ್ರದ್ಧೆಯುಳ್ಳ ಮೂಲಭೂತವಾದಿಗಳು ಧರ್ಮ ಜಾತಿಯ ಹೆಸರಿನಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಳೆದ 25 ದಿನಗಳಿಂದ ದೇಶದಲ್ಲಿ ನಡೆದಿರುವ ಘಟನೆಗಳು ಸಾಕ್ಷಿಕರಿಸುತ್ತವೆ. ಇಂಥ ಮೂಲಭೂತವಾದಿಗಳು ಎಲ್ಲ ಧಾರ್ಮಿಕ ಸಮುದಾಯಗಳಲ್ಲೂ ಇದ್ದಾರೆ. ಎಲ್ಲ ಪ್ರಜ್ಞಾವಂತರು ಇಂಥ ವರ್ತನೆಗಳನ್ನು ತೀವ್ರವಾಗಿ ಖಂಡಿಸಬೇಕು ಎಂದು ತಿಳಿಸಿದ್ದಾರೆ.

ಕೆಲ ಹುಂಬುತನ ಹಾಗೂ ಮೂಲಭೂತವಾದಿಗಳು ಸನ್ನಿವೇಶವನ್ನು ದುರುಪಯೋಗಪಡಿಸಿಕೊಂಡು ನಿರ್ಧಿಷ್ಟ ಒಂದು ಸಮುದಾಯದ ತಲೆಗೆ ಕಟ್ಟಿ ಧಾರ್ಮಿಕ ದ್ವೇಷ ಸಾಧಿಸುವ ವ್ಯವಸ್ಥಿತ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿ ಮತ್ತು ಸಮುದಾಯದವರು ಈ ಬಗೆಯ ತಪ್ಪುಗಳನ್ನು ಮಾಡುತ್ತಿದ್ದರೆ ಎಲ್ಲರೂ ಖಂಡಿಸಬೇಕಿದೆ. ಇದಕ್ಕೆ ಹೊರತಾದ ಜಾತಿ ಮತಾತೀತವಾಗಿ ಸಂದಿಗ್ಧ ಸನ್ನಿವೇಶವನ್ನು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ ಎಂದು ರಾಜು ಸೇಠ ಸೂಚಿಸಿದ್ದಾರೆ.

ಭಾರತಕ್ಕೆ ಎದುರಾದ ಕೊರೊನಾ ವೈರಸ್‍ನ ಕಷ್ಟಕರ ಈ ಯುದ್ಧದಲ್ಲಿ ಎಲ್ಲರೂ ಗೆಲವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಮುಸ್ಲಿಂ ಚಿಂತಕರ ಚಾವಡಿಯು ಸರ್ಕಾರ ಕೈಗೊಳ್ಳುವ ಎಲ್ಲ ಉಪಯುಕ್ತವಾದ ಕ್ರಮಗಳಿಗೆ ಮುಕ್ತವಾದ ಬೆಂಬಲ ವ್ಯಕ್ತಪಡಿಸುತ್ತದೆ. ಸಹನೆ ಹಾಗೂ ವಿವೇಕದಿಂದ ಮುಸ್ಲಿಂ ಸಮುದಾಯ ಎದುರಸಬೇಕೆಂದು ವಿನಂತಿಸಿಕೊಂಡಿರುವ ರಾಜು ಸೇಠ ಅವರು, ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮದ ವಿಚಾರಗಳನ್ನು ತಿರುಚಿ, ಬಹುಮಾಧ್ಯಮಗಳಲ್ಲಿ ನಡೆಸಲಾಗುತ್ತಿರುವ ಅಪಪ್ರಚಾರವನ್ನು ತಡೆದು, ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಾಳೆ ಶಬ – ಎ – ಬಾರಾತ ಸಾಮೂಹಿಕ ಪ್ರಾರ್ಥನೆ ಇಲ್ಲ.

ನಾಳೆ ಇಸ್ಲಾಂ ಧರ್ಮದ ಪವಿತ್ರ ಶಬ ಎ ಬಾರಾತ ಆಚರಣೆ ಇದ್ದು ಮಸೀದಿಯಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯನ್ನು ಬೆಳಗಾವಿ ಜಿಲ್ಲೆಯಾದ್ಯಂತ ರದ್ದು ಗೊಳಿಸಲಾಗಿದ್ದು ,ಎಲ್ಲ ಮುಸ್ಲೀಂ ಬಾಂಧವರು ತಮ್ಮನೆಗಳಲ್ಲಿಯೇ ನಮಾಜ್ ( ಪ್ರಾರ್ಥನೆ) ಮಾಡುವಂತೆ ಬೆಳಗಾವಿಯ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ರಾಜು ಸೇಠ ತಿಳಿಸಿದ್ದಾರೆ.

ಅಂಜುಮನ್ ಸಂಸ್ಥೆ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು ಶಬ ಎ ಬಾರಾತ ಪವಿತ್ರ ರಾತ್ರಿಯ ದಿನ ಖಬರಸ್ತಾನ ( ಸ್ಮಶಾನ) ಕ್ಕೆ ಹೋಗಿ ಅಗಲಿದ ತಮ್ಮ ಹಿರಿಯರನ್ನು ಸ್ಮರಿಸುವ ಸಂಪ್ರದಾಯವಿದ್ದು ಕೊರೋನಾ ಹಿನ್ನಲೆಯಲ್ಲಿ ಈ ಸಂಪ್ರದಾಯವನ್ನು ಆಚರಿಸಲು ಯಾರೊಬ್ಬರೂ ಖಬರಸ್ಥಾನಕ್ಕೆ ಬರಬಾರದು ಮನೆಯಿಂದಲೇ ಹಿರಿಯರನ್ನು ಸ್ಮರಿಸುವ ಪ್ರಾರ್ಥನೆ ಸಲ್ಲಿಸಬೇಕೆಂದು ರಾಜು ಸೇಠ ಮನವಿ ಮಾಡಿಕೊಂಡಿದ್ದಾರೆ .

ಕೊರೋನಾ ಮಹಾಮಾರಿ ತಡೆಯಲು ಜಿಲ್ಲಾಡಳಿತ ಕೈಗೊಳ್ಳುವ ಎಲ್ಲ ಕ್ರಮಗಳನ್ನು ಮುಸ್ಲೀಂ ಬಾಂಧವರು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕೆಂದು ರಾಜು ಸೇಠ ಮನವಿ ಮಾಡಿಕೊಂಡಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *