ಬೆಳಗಾವಿ-ಬೆಳಗಾವಿ ಜಿಲ್ಲೆಯ ಖಾನಾಪುರ ಸೆಪ್ಟೆಂಬರ್28 ರಂದು ನಡೆದ ಘಟನೆ.ಅರ್ಬಾಜ್ ಮುಲ್ಲಾ(28) ಎಂಬ ಯುವಕರ ಭೀಕರ ಕೊಲೆ,ಪ್ರಕರಣಕ್ಕೆ ಸಮಂಧಿಸಿದಂತೆ ಆರೋಪಿಗಳ ಪತ್ತೆಗೆ ವಿಶೇಷ ಪೋಲೀಸ್ ತಂಡವನ್ನು ರಚಿಸಲಾಗಿದೆ.
ರೈಲ್ವೆ ಹಳಿಯ ಮೇಲೆ ರುಂಡು, ಮುಂಡ ಬೇರೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ ಆಗಿತ್ತು.ಯುವಕನ ತಾಯಿ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಪೋಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ,ಭೀಕರ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸ ಕಾರ್ಯಾಚರಣೆ ಆರಂಭಿಸಿದ್ದಾರೆ.
ಯುವಕನ ಕೊಲೆ ಪ್ರಕರಣ
ರೈಲ್ವೆ ಪೊಲೀಸರಿಂದ ಖಾನಾಪುರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದು, ಪ್ರಕರಣ ಭೇದಿಸಲು ಬೈಲಹೊಂಗಲ ಡಿಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಂಡಿದೆ.ಭೀಕರ ಹತ್ಯೆ ಖಂಡಿಸಿ ಖಾನಾಪುರದಲ್ಲಿ ಇಂದು ಪ್ರತಿಭಟನೆ ನಡೆದಿದೆ.
ಅಂಜುಮನ್ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಧರಣಿ ನಡೆಸಿ,
ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ ಮಾಡಕಾಗಿದೆ.
ಖಾನಾಪುರದಲ್ಲಿ ಮುಸ್ಲಿಂ ಯುವಕನ ಭೀಕರ ಕೊಲೆ ಪ್ರಕರಣ ಬೇಧಿಸಬೇಕು ಬುಧವಾರದ ಒಳಗೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಧರಿಣಿ ನಡೆಸುವ ಎಚ್ಚರಿಕೆಯನ್ಬು ಎಂಐಎಂ ಪಕ್ಷದ ಮುಖಂಡರು ನೀಡಿದ್ದಾರೆ. ಬುಧವಾರ ಆರೋಪಿಗಳ ಪತ್ತೆ ಆಗದಿದ್ದರೆ ಶುಕ್ರವಾರ ಅಸಾದುದ್ದೀನ್ ಓವೈಸಿ ಅವರ ನೇತ್ರತ್ವಸಲ್ಲಿ ಬೆಳಗಾವಿಯಲ್ಲಿ ಬೃಹತ್ತ್ ಪ್ರತಿಭಟನೆ ನಡೆಯುತ್ತದೆ.
ಆರೋಪಿಗಳ ಬಂಧನ ಆಗದೇ ಇದ್ರೆ ಬೆಳಗಾವಿಗೆ ಓವೈಸಿ ಬರ್ತಾರೆ ಎಂದು ಬೆಳಗಾವಿಯಲ್ಲಿ ಎಂಐಎಂ ಮುಖಂಡ ಲತೀಫ ಖಾನ್ ಪಠಾಣ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಐಜಿಪಿ ಸೇರಿದಂತೆ ಹಿರಿಯ ಪೋಲೀಸ್, ಅಧಿಕಾರಿಗಳು ಯುವಕನ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.ಕೊಲೆಯಾದ ಯುವಕನ ಹೆಸರಿನಲ್ಲಿ ನಿನ್ನೆ ಟ್ವೀಟರ್ ಅಕೌಂಟ್ ತೆರೆದು,ಐ ಯಮ್ ಅಲೈವ್,ನಾನು ಜೀವಂತವಾಗಿದ್ದೇನೆ,ನಾನು ಆರೋಗ್ಯವಾಗಿದ್ದೇನೆ,ನನ್ನ ಹೆಸರಿನಲ್ಲಿ ಶೃದ್ಧಾಂಜಲಿ ಅರ್ಪಿಸಬೇಡಿ ಎಂದು ಕಿಡಗೇಡಿಗಳು ಟ್ವೀಟ್ ಮಾಡುವ ಮೂಲಕ ತನಖೆಯ ದಿಕ್ಕು ತಪ್ಪಿಸುವ ಪ್ರಯತ್ನವೂ ನಡೆದಿದ್ದು ಖಾನಾಪೂರ ಯುವಕನ ಕೊಲೆ ಪ್ರಕರಣ ಈಗ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ತನಿಖೆ ಚುರುಕುಗೊಂಡಿದೆ.