Breaking News
Home / Breaking News / ಕ್ಷಮಿಸಿ ಎಂದು ಬರೆದು, ಕೊನೆಗೆ Good bye ಹೇಳಿದ….

ಕ್ಷಮಿಸಿ ಎಂದು ಬರೆದು, ಕೊನೆಗೆ Good bye ಹೇಳಿದ….

Death note……

ಬೆಳಗಾವಿ-ಕ್ಷಮಿಸಿ ಎಂದು ಬರೆದು, ಫಾರ್ಮಿಸಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಇಹಲೋಕ ಕ್ರಮಿಸುವ ಮೊದಲು ಈತ ಡೆತ್ ನೋಟ್ ನಲ್ಲಿ ಗುಡ್ ಬಾಯ್ ಹೇಳಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಡೆತ್‌ನೋಟ್ ಬರೆದಿಟ್ಟು ಡಿ-ಫಾರ್ಮಸಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ, ಬೆಳಗಾವಿಯ ನೆಹರು ನಗರದಲ್ಲಿ ನಡೆದಿದೆ. ರೂಮ್‌ನಲ್ಲಿ ನೇಣು ಬಿಗಿದುಕೊಂಡು‌ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಹಾರಾಷ್ಟ್ರದ ಇಚಲಕರಂಜಿಯ ಭರತ್ ಪಾಟೀಲ್(21) ನೇಣಿಗೆ ಶರಣಾದ ದುರ್ದೈವಿಯಾಗಿದ್ದು,ಈತ ಬೆಳಗಾವಿ ಖಾಸಗಿ ಕಾಲೇಜಿನ ಡಿ-ಫಾರ್ಮಸಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ,ಮರಾಠಿ ಭಾಷೆಯಲ್ಲಿ ಮೂರು ಲೈನ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

‘ಎಕ್ಸಾಂ ಟೆನ್ಷನ್ ಹಾಗೂ ಫ್ಯಾಮಿಲಿ ಪ್ರಾಬ್ಲಮ್‌ನಿಂದ ಈ ನಿರ್ಣಯ ಕೈಗೊಂಡಿದ್ದೇ‌ನೆ, ನನ್ನಿಂದ ಯಾರ ಮನಸ್ಸಿಗಾದರೂ ನೋವಾದಲ್ಲಿ ಕ್ಷಮಿಸಿ,’Good bye’ ಅಂತಾ ಬರೆದು ಸ್ಮೈಲಿ ಸಿಂಬಾಲ್ ಚಿತ್ರ ಬಿಡಿಸಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Check Also

ಲಕ್ಷ..ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ರು….!!

ಬೆಳಗಾವಿ : ಖಾತಾ ವರ್ಗಾವಣೆಗೆ ಹಣ ಬೇಡಿಕೆಯಿಟ್ಟಿದ್ದ ತಹಶಿಲ್ದಾರರ ಹಾಗೂ ಕಚೇರಿ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ …

Leave a Reply

Your email address will not be published. Required fields are marked *