Breaking News
Home / Breaking News / ಹುದಲಿಯಲ್ಲಿ ಏಕಕಾಲಕ್ಕೆ ತಾಯಿ ಮತ್ತು ಮಗ, ಇಬ್ಬರ ಸಾವು…

ಹುದಲಿಯಲ್ಲಿ ಏಕಕಾಲಕ್ಕೆ ತಾಯಿ ಮತ್ತು ಮಗ, ಇಬ್ಬರ ಸಾವು…

ಬೆಳಗಾವಿ- ಹೊಲದಿಂದ ಮನೆಗೆ ಮರಳಿದ ಬಳಿಕ ಮನೆಯಲ್ಲಿ ಭಜಿ ಮಾಡಿ ತಿಂದ ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ ಘಟನೆ ಸಮೀಪದ ಹುದಲಿ ಗ್ರಾಮದಲ್ಲಿ ನಡೆದಿದೆ.

ಹುದಲಿ ಗ್ರಾಮದ ಪಾರ್ವತಿ ಮಾರುತಿ ಮಳಗಲಿ (58) ಮತ್ತು ಮಗ ಸೋಮನಿಂಗ ಮಾರುತಿ ಮಳಗಲಿ ಇಬ್ಬರೂ ಫುಡ್ ಪಾಯಿಸನ್ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಭಜಿ ಮಾಡಿಕೊಂಡು ತಾಯಿ ಮತ್ತು ಮಗ ಇಬ್ಬರು ಸೇವನೆ ಮಾಡಿದ್ದಾರೆ,ಆದ್ರೆ ನಿನ್ನೆ ಬೆಳಿಗ್ಗೆ ಇಬ್ಬರಿಗೂ ವಾಂತಿ ಭೇದಿ ಶುರುವಾಗಿದೆ.ಇಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಔಷಧಿ ಸೇವನೆ ಮಾಡಿದ್ದಾರೆ,ಆದಾಗ್ಯು ವಾಂತಿ ಭೇದಿ ಕಡಿಮೆ ಆಗಿಲ್ಲ,ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದಾರೆ.

ಮನೆಯಲ್ಲಿ ಭಜಿ ಮಾಡಿ ಸೇವಿಸಿದ ತಾಯಿ ಮತ್ತು ಮಗನಿಗೆ ಫುಡ್ ಪಾಯಿಸನ್ ಆದ ಹಿನ್ನಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ಹುದಲಿಯ ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರು ಮಾತ್ರ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *