Breaking News

ಅಮಿತಾಬ್ ಬಚ್ಚನ್ ಅಂದು ಖಾನಾಪೂರದ ಅಸೋಗಾಕ್ಕೆ ಬಂದಿದ್ದು “ಅಭಿಮಾನ”

ಬೆಳಗಾವಿ-ವಿಶ್ವ ವಿಖ್ಯಾತ ಹಿಂದಿ ಚಿತ್ರನಟ ಅಮಿತಾಬ್ ಬಚ್ಚನ್ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಅಸೋಗಾ ಗೆ ಬಂದಿದ್ದು ಅಭಿಮಾನಕ್ಕಾಗಿ,ಅಂದ್ರೆ ಅಭಿಮಾನ್ ಹಿಂದಿ ಚಿತ್ರದ ಶೂಟಿಂಗ್ ಗಾಗಿ ಅನ್ನೋದು ಅಭಿಮಾನದ ಸಂಗತಿಯಾಗಿದೆ.

ಉತ್ತರ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನು ಅದರಲ್ಲಿಯೂ ಗಡಿನಾಡ ಗುಡಿ ಬೆಳಗಾವಿಯ ನಿಸರ್ಗ ಸೌಂಧರ್ಯವನ್ನು ಸ್ಯಾಂಡಲ್ ವುಡ್ ಚಿತ್ರೀಕರಣ ಮಾಡದಿದ್ದರು ಬಾಲಿವುಡ್ ಮಾಡಿದೆ.ಅನ್ನೋದಕ್ಕೆ ಸಾಕಷ್ಟು ಉಧಾಹರಣೆಗಳಿವೆ.

ಗೋಕಾಕ್ ಜಲಪಾತದ ತಟದಲ್ಲಿ‌ ಖ್ಯಾತ ಹಿಂದಿ ಚಿತ್ರನಟ ದಿಲೀಪ್ ಕುಮಾರ್ ಅವರ ಚಿತ್ರದ ಶೂಟಿಂಗ್ ನಡೆದಿತ್ತು,ಖಾನಾಪೂರದಲ್ಲಿ ಅಮೀತಾಬಚ್ಚನ್ ಅವರ ಅಭಿಮಾನ್ ಚಿತ್ರದ ಶೂಟಿಂಗ್ ನಡೆದಿತ್ತು, ಶೂಟೀಂಗ್ ನಡೆದ ಸ್ಥಳ ರಮಣೀಯವಾಗಿದ್ದು ಜೊತೆಗೆ ಈಸ್ಥಳ ಧಾರ್ಮಿಕವಾಗಿಯೂ ಲಕ್ಷಾಂತರ ಭಕ್ತರ ಗಮನ ಸೆಳೆದಿದೆ.

ಅಮೀತಾಬ್ ಬಚ್ಚನ್ ಅವರ ಅಭಿಮಾನ್ ಚಿತ್ರದ ಶೂಟಿಂಗ್ ನಡೆದ ಖಾನಾಪೂರದ ಅಸೋಗಾದಲ್ಲಿರುವ ಈ ಪುಣ್ಯ ಸ್ಥಳ ಇವತ್ತಿಗೂ ಎಲ್ಲರನ್ನು ಆಕರ್ಷಿಸುತ್ತಿದೆ.

ಈ ಸ್ಥಳದಲ್ಲಿ ನಿಜವಾಗಿಯೂ ಶಿವಲಿಂಗ ಇದೆ,ನೀರೊಳಗೆ ಇರುವ ಶಿವಲಿಂಗ ಸ್ಪರ್ಷ ಮಾಡಿದ್ರೆ, ಶಿವ ಒಲಿದಂತೆ ಎನ್ನುವ ನಂಬಿಕೆ ಇಂದಿಗೂ ಜೀವಂತವಾಗಿದೆ. ಅಭಿಮಾನ ಚಿತ್ರದ ಶೂಟಿಂಗ್ ಸಂಧರ್ಭದಲ್ಲಿ ಅಮೀತಾಬ್ ಬಚ್ಚನ್ ಮತ್ತು ಅವರ ಜೊತೆ ಅಭಿನಯಿಸಿದ ಚಿತ್ರ ನಟಿ ಇಬ್ಬರೂ ಅಸೋಗಾದಲ್ಲಿ ಇರುವ ಶಿವಹೊಂಡದಲ್ಲಿ ನೀರೊಳಗೆ ಕೈ ಹಾಕಿ ಶಿವಲಿಂಗ ಸ್ಪರ್ಷ ಮಾಡಿದ್ದಾರೆ,ಈ ಸಂಧರ್ಭದ ಸಂಭಾಷಣೆ ಅಭಿಮಾನ ಚಿತ್ರದಲ್ಲಿ ಸೆರೆಯಾಗಿದೆ.

ಅಸೋಗಾಕ್ಕೆ ಹೋಗಿ ಬಂದವರಿಗೆ ಇದರ ಮಹತ್ವ ಗೊತ್ತಿದೆ,ಇದರ ಬಗ್ಗೆ ಮಾಹಿತಿ ಇದ್ದವರು ಶಿವಲಿಂಗ ಸ್ಪರ್ಷ ಮಾಡಿದ್ದಾರೆ.

Check Also

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ …

Leave a Reply

Your email address will not be published. Required fields are marked *