ಬೊಮ್ಮಾಯಿ ಹೇಳಿದ ಹಾಗೆ,ಚಂದರಗಿ ಮಾಡಿದ್ರು…!!

ಬೆಳಗಾವಿ-

ಬೆಳಗಾವಿ ಜಿಲ್ಲೆಯ ಖ್ಯಾತ
ಸಾಹಿತಿಗಳ,ಸಂಗೀತಗಾರರ,ರಂಗ
ಕಲಾವಿದರ ಹೆಸರುಗಳಲ್ಲಿ ಪ್ರತಿಷ್ಠಾನಗಳನ್ನು
ಸ್ಥಾಪಿಸಿ ಸರಕಾರದ ಅನುದಾನ
ಪಡೆಯಲು ರಾಜ್ಯ ಸರಕಾರದ ಮೇಲೆ
ಒತ್ತಡ ತರಲು ಇಂದು ಮಂಗಳವಾರ
ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ
ನಡೆದ ಸಾಹಿತಿಗಳ,ಚಿಂತಕರ ಸಭೆಯಲ್ಲಿ
ನಿರ್ಧರಿಸಲಾಯಿತು.
ಖ್ಯಾತ ರಂಗಭೂಮಿ ಕಲಾವಿದ
ದಿ.ಏಣಗಿ ಬಾಳಪ್ಪ,ಖ್ಯಾತ ಹಿಂದೂಸ್ತಾನಿ
ಗಾಯಕ ದಿ.ಕುಮಾರ ಗಂಧರ್ವ,ಖ್ಯಾತ
ಕಾದಂಬರಿಕಾರ ದಿ.ಕೃಷ್ಣಮೂರ್ತಿ
ಪುರಾಣಿಕ,ಖ್ಯಾತ ಕವಿ ದಿ.ಡಿ.ಎಸ್.
ಕರ್ಕಿ ಮತ್ತು ಖ್ಯಾತ ಸಾಹಿತಿ ದಿ.ಎಸ್.ಡಿ.
ಇಂಚಲ ಅವರ ಹೆಸರುಗಳಲ್ಲಿ
ಪ್ರತಿಷ್ಠಾನಗಳನ್ನು ಸ್ಥಾಪಿಸಿ
ನೋಂದಾಯಿಸಲು ಸಭೆಯಲ್ಲಿ
ನಿರ್ಣಯಿಸಲಾಯಿತು.
ಬರುವ ಅಗಷ್ಟ ಮಾಸಾಂತ್ಯದೊಳಗೆ
ಪ್ರತಿಷ್ಠಾನಗಳನ್ನು ನೋಂದಾಯಿಸಿ
ಸಪ್ಟೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ
ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರ
ಭೆಟ್ಟಿಗೆ ನಿಯೋಗ ಒಯ್ಯಲು ಸಭೆಯು
ತೀರ್ಮಾನಿಸಿತು.
ಕಳೆದ ವರ್ಷದ ಡಿಸೆಂಬರ್ ದಿಂದ
ಈ ವರ್ಷದ ಫೆಬ್ರುವರಿವರೆಗೆ ಮುಖ್ಯಮಂತ್ರಿ
ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು
ಭೆಟ್ಟಿಯಾಗಿ ಪ್ರತಿಷ್ಠಾನಗಳ ಸಂಬಂಧ
ಮನವಿ ಸಲ್ಲಿಸಲಾಗಿದೆ.ಇದೇ ಜುಲೈ
16 ರಂದು ಬೆಂಗಳೂರಿನಲ್ಲಿ
ತಾವು ಬೊಮ್ಮಾಯಿ ಅವರನ್ನು
ಮತ್ತೊಮ್ಮೆ ಭೆಟ್ಟಿಯಾಗಿ ಚರ್ಚಿಸಿದ
ಕಾಲಕ್ಕೆ ಬೊಮ್ಮಾಯಿ ಅವರು ತಿಳಿಸಿದ
ಅಭಿಪ್ರಾಯವನ್ನು ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಅಧ್ಯಕ್ಷ ಶ್ರೀ ಅಶೋಕ ಚಂದರಗಿ ಅವರು
ಸಭೆಗೆ ವಿವರಿಸಿದರು.
ಬರುವ ಅಕ್ಟೋಬರ
ತಿಂಗಳಲ್ಲಿ ಬೆಳಗಾವಿಯಲ್ಲಿ ಒಂದು
ನೂರು ಸಾಹಿತಿಗಳ ಸಮಾವೇಶ
ನಡೆಸಲು ಸಭೆ ನಿರ್ಣಯಿಸಿತಲ್ಲದೇ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷ ಡಾ.ನಾಗಾಭರಣ ಮತ್ತು
ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷ ಡಾ.ಸಿ.ಸೋಮಶೇಖರ
ಅವರನ್ನು ಸಮಾವೇಶಕ್ಕೆ ಆಹ್ವಾನಿಸಲು
ನಿರ್ಧರಿಸಲಾಯಿತು.
ನೂರು ವರ್ಷದ ಇತಿಹಾಸ ಉಳ್ಳ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ
ಸಂಘದ ಚಟುವಟಿಕೆಗಳು ಕೇವಲ
ಧಾರವಾಡಕ್ಕೆ ಸೀಮಿತವಾಗಿರುವದಕ್ಕೆ
ತೀವ್ರ ಅಸಮಾಧಾನ ವ್ಯಕ್ತಪಡಿಸಿದ
ಸಭೆಯು ಕಾರ್ಯ ವ್ಯಾಪ್ತಿಯನ್ನು
ಕಿತ್ತೂರು ಕರ್ನಾಟಕದ ಇತರ
ಜಿಲ್ಲೆಗಳಿಗೂ ವಿಸ್ತರಿಸುವಂತೆ
ಆಗ್ರಹಿಸಿತು.
ಬೆಳಗಾವಿಯಲ್ಲಿ ರಂಗ
ಚಟುವಟಿಕೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ
ಯುವಕರನ್ನು ಒಳಗೊಂಡ
ರಂಗ ಸಂಸ್ಥೆಯನ್ನು ಸ್ಥಾಪಿಸಲು
ಸಭೆ ನಿರ್ಧರಿಸಿತು.
ಹಿರಿಯ ರಂಗಕರ್ಮಿ ಶ್ರೀ ಬಿ.ಎಸ್.
ಗವಿಮಠ ಅವರ ಅಧ್ಯಕ್ಷತೆಯಲ್ಲಿ
ನಡೆದ ಇಂದಿನ ಸಭೆಯಲ್ಲಿ
ಸರ್ವಶ್ರೀ ಬಸವರಾಜ ಜಗಜಂಪಿ,
ಬಸವರಾಜ ಗಾರ್ಗಿ, ರಾಮಕೃಷ್ಣ
ಮರಾಠೆ,ಶಿರೀಶ ಜೋಶಿ,ಸುಭಾಷ
ಏಣಗಿ,ಆನಂದ ಪುರಾಣಿಕ ಹಾಜರಿದ್ದರು.
ಶ್ರೀ ಅಶೋಕ ಚಂದರಗಿ
ಆರಂಭದಲ್ಲಿ ಸ್ವಾಗತಿಸಿ ಕೊನೆಗೆ
ಆಭಾರ ಮನ್ನಿಸಿದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *