Breaking News
Home / Breaking News / ನಮ್ಮ ಸವದಿ ಸಾಹುಕಾರ್ ಸಿಎಂ ಆಗ್ತಾರಂತೆ ಹಿಗೊಂದು ಅಡಿಯೋ ವೈರಲ್…!!

ನಮ್ಮ ಸವದಿ ಸಾಹುಕಾರ್ ಸಿಎಂ ಆಗ್ತಾರಂತೆ ಹಿಗೊಂದು ಅಡಿಯೋ ವೈರಲ್…!!

ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಡಿಸಿಎಂ ಹುದ್ದೆಗೇರಿ ಅಚ್ಛರಿ ಮೂಡಿಸಿದವರು‌ ಲಕ್ಷ್ಮಣ್ ಸವದಿ. ಇದೀಗ ಲಕ್ಷ್ಮಣ್ ಸವದಿ ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ ಎಂಬ ಗುಸು ಗುಸು ರಾಜಕಾರಣದಲ್ಲಿ ‌ಸದ್ದು ನಡೆದೆ.

ಲಕ್ಷ್ಮಣ ಸವದಿ ಬೆಂಬಲಿಗರೂ ಕೂಡ ಸವದಿ ಸವ್ಕಾರ್ ಮುಂದಿನ ಸಿಎಂ ಎಂದು ಮಾತನಾಡಿದ ಆಡಿಯೋ ಸಾಮಾಜಿಕ ‌ಜಾಲತಾಣಗಳಲ್ಲಿ ವೈರಲ್ ಆಗ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರಿ ಒಂದು ವರ್ಷವಾಗಿದೆ. ಇದಕ್ಕಾಗಿ ಬಿಜೆಪಿ ‌ನಾಳೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ‌ಅಧ್ಯಕ್ಷ ಜೆ.ಪಿ‌ ನಡ್ಡಾ ಕೂಡ‌ ಸಭೆಯಲ್ಲಿ ‌ಭಾಗವಹಿಸಲಿದ್ದಾರೆ. ಇದೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ರಾಜೀನಾಮೆ ನಿರ್ಧಾರ ‌ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ. ಮೊಣಕಾಲು ನೋವಿನ‌ ಬಳಲುತ್ತಿರುವ ಸಿಎಂ ಬೊಮ್ಮಾಯಿ ಚಿಕಿತ್ಸೆಗೆ ವಿದೇಶಕ್ಕೆ ತೆರಳಲಿದ್ದಾರೆ. ಈ ಕಾರಣಕ್ಕೆ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಅವರಿಂದ ತೆರವಾಗುವ ಹುದ್ದೆಗೆ ಲಕ್ಷ್ಮಣ ಸವದಿ ನೇಮಕವಾಗಲಿದ್ದಾರೆ ಎನ್ನುವ ಚರ್ಚೆ ಬೆಳಗಾವಿ ಜಿಲ್ಲೆಯಲ್ಲಿ ಜೋರಾಗಿಯೇ ನಡೆದಿದೆ. ಆದ್ರೆ ಇದೊಂದು ವದಂತಿ ಅಷ್ಟೇ ಈ ರೀತಿಯ ಯಾವುದೇ ರಾಜಕೀಯ ಚಟುವಟಿಕೆಗಳು ನಡೆದಿಲ್ಲ ಎಂದು ಹಲವಾರು ಜನ ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಬೆಳಗಾವಿ ಜಿಲ್ಲೆಯ ಕೆಲವು ಶಾಸಕರನ್ನು ಬಿಜೆಪಿ ಮುಖಂಡರನ್ನು ಬೆಳಗಾವಿ ಸುದ್ದಿ ಡಾಟ್ ಕಾಮ್ ಸಂಪರ್ಕ ಮಾಡಿ, ಈ ರೀತಿಯ ರಾಜಕೀಯ ಬೆಳವಣಿಗೆಗಳು ನಡೆದಿರುವ ಬಗ್ಗೆ ವಿಚಾರಿಸಿದಾಗ.ಇದೊಂದು ವದಂತಿ ಅಷ್ಟೇ, ಈ ರೀತಿಯ ಯಾವುದೇ ರಾಜಕೀಯ ಬೆಳವಣಿಗೆಗಳು ನಡೆದಿಲ್ಲ.ಎಂದು ಸ್ಪಷ್ಟಪಡಿಸಿದ್ದಾರೆ.

ಆದ್ರೂ ರಾಜಕೀಯದಲ್ಲಿ ಕೆಲವೊಂದು ಬಾರಿ ವದಂತಿಗಳೂ ರೆಕ್ಕೆ ಕಟ್ಟಿಕೊಂಡು ಹಾರಾಡುತ್ತವೆ.ಉಹೆಗೆ ನಿಲುಕದ ಸಂಗತಿಗಳು ಸತ್ಯವಾಗುತ್ತವೆ.ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ವದಂತಿಗಳದ್ದೇ ಹಾವಳಿ, ನಾಳೆ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ವರ್ಷ, ಹೀಗಾಗಿ ಹರ್ಷದ ಸಮಯದಲ್ಲಿ ಕೆಲವು ಖಿಲಾಡಿಗಳು ಬದಲಾವಣೆಯ ಬಾಂಬ್ ಸಿಡಿಸಿ ಕೋಲಾಹಲ ಸೃಷ್ಟಿಸಿರುವುದು ಸತ್ಯ.

Check Also

Banking & SSC Competitive Exam Coaching New Batch*

*Banking & SSC Competitive Exam Coaching New Batch* IBPS (Institute for Banking personal selection) has …

Leave a Reply

Your email address will not be published. Required fields are marked *