Breaking News

ಕಂದಾಯ ಸಚಿವರ ನಿರ್ಧಾರಕ್ಕೆ ಗಡಿನಾಡು ಗರಂ….!!!

ಬೆಳಗಾವಿ- ರಾಜ್ಯದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗಳು ಬಿಳಿಯಾನೆ ಆಗಿದ್ದು ಈ ಕಚೇರಿಗಳನ್ನು ಬಂದ್ ಮಾಡುತ್ತೇವೆ.ಎಂದು ಕಂದಾಯ ಸಚಿವ ಆರ್ ಅಶೋಕ ಅವರು ಹೇಳಿಕೆ ನೀಡಿರುವದಕ್ಕೆ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಹಿರಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರ ನೇತ್ರತ್ವದಲ್ಲಿ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳು,ಕಂದಾಯ ಸಚಿವರು ಕೂಡಲೇ ನಿರ್ಧಾರ ವಾಪಸ್ ಪಡೆದು ರಾಜ್ಯದಲ್ಲಿರುವ ಎಲ್ಲ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಮುಂದುವರೆಸುವಂತೆ ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿದ ಅಶೋಕ ಚಂದರಗಿ ಸರ್ಕಾರ ಅಧಿಕಾರವನ್ನು ವಿಕೇಂದ್ರಿಕರಣ ಮಾಡುವ ಬದಲು,ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಬಂದ್ ಮಾಡಿ,ಬೆಂಗಳೂರಿನಲ್ಲೇ ಕಂದಾಯ ಸಚಿವಾಲಯ ತೆರೆದು ಅಧಿಕಾರವನ್ನು ಬೆಂಗಳೂರಿನಲ್ಲೇ ಕೇಂದ್ರಿಕೃತ ಮಾಡಲು ಹೊರಟಿದೆ. ಸರ್ಕಾರದ ನಿರ್ಧಾರ ಜನವಿರೋಧಿ ಆಗಿದ್ದು ಯಾವುದೇ ಕಾರಣಕ್ಕೂ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಬಂದ್ ಮಾಡಬಾರದು ಎಂದು ಒತ್ತಾಯಿಸಿದರು.

2001 ರಲ್ಲಿ ರಾಜ್ಯದ ಉಪ ವಿಭಾಗಾಧಿಕಾರಿಗಳ ಕಚೇರಿಗಳನ್ನು ಆಗಿನ ಸರ್ಕಾರ ಬಂದ್ ಮಾಡಿತ್ತು.ಸರ್ಕಾರದ ನಿರ್ಧಾರಕ್ಕೆ ಜನಾಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ 2006 ರಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿಗಳು ಮತ್ತೆ ಶುರುವಾದವು.2001ರಲ್ಲಿ ಸರ್ಕಾರ ಮಾಡಿದ ತಪ್ಪು ಈಗ ಮತ್ತೆ ಮರುಕಳಿಸಬಾರದು,ಸರ್ಕಾರ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡರೆ ಗಡಿನಾಡಿನಿಂದಲೇ ಸರ್ಕಾರದ ವಿರುದ್ಧ ಜನಾಂದೋಲನ ಆರಂಭವಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಮ ಕರವೇ ಸಂಚಾಲಕ ಮಹಾದೇವ ತಳವಾರ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಶಂಕರ ಬಾಗೇವಾಡಿ, ಬಾಳು ಜಡಗಿ ಸಾಗರ ಬೋರಗಲ್,ಸಂಪತ್,ಮೈನೋದ್ದಿನ ಮಕಾನದಾರ, ಮೊದಲಾದವರು ಉಪಸ್ಥಿತರಿದ್ದರು.

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *