ಬೆಳಗಾವಿ ,- ಬೆಳಗಾವಿಯಿಂದ ಬೆಂಗಳೂರು ಹಾಸನ ಜಿಲ್ಲೆಗಳಿಗೆ ಕಚೇರಿಗಳನ್ನು ಸ್ಥಳಾಂತರ ಮಾಡುತ್ತರುವ ಸರ್ಕಾರದ ಹಠಮಾರಿ ಧೋರಣೆ ಖಂಡಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯೆದುರು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸಿದವು
ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಕೆಶಿಪ್ ಮತ್ತು 2017.18 ರ ಬಜೆಟ್ ನಲ್ಲಿ ಘೋಷಿಸಿದ್ದ ಆಯುಷ್ ಔಷಧಿ ತಯಾರಿಕೆ ಘಟಕವನ್ನು ಬೆಳಗಾವಿಯಿಂದ ಸ್ಥಳಾಂತರಿಸಿರುವದನ್ನು ಕನ್ನಡ ಸಂಘಟನೆಗಳು ಪ್ರತಿಭಟಸಿ ಕೂಡಲೇ ಈ ಎರಡೂ ಆದೇಶಗಳನ್ನು ಸರ್ಕಾರ ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು
ನೃಪತುಂಗ ಯುವಕ ಮಂಡಳದ ವತಿಯಿಂದ ಮನವಿ ಸಲ್ಲಿಸಲಾಯಿತು ಮಂಡಳದ ಅಧ್ಯಕ್ಷ ಸಾಗರ್ ಬೋರಗಲ್ ಬೆಳಗಾವಿ ಕನ್ನಡ ಸಂಘಟನೆಗಳ ಪ್ರಮುಖ ಅಶೋಕ ಚಂದರಗಿ ಉಪಸ್ಥಿತರಿದ್ದರು