ಬೆಳಗಾವಿ- ಗೋಕಾಕ ಮತ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪ್ರಚಾರ ಅರಂಭಿಸಿದೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಶೂನ್ಯ ಸಂಪಾದನಾ ಮಠಕ್ಕೆ ಭೇಟಿ ನೀಡಿ ಶ್ರೀ ಗಳ ಆಶಿರ್ವಾದ ಪಡೆದು ಶ್ರೀ ಮುರುಘ ರಾಜೇಂದ್ರ ಮಹಾಸ್ವಾಮಿಗಳಿಂದ ಜೋಳಿಗೆ ಹಾಕಿಸಿಕೊಂಡು ಮತಭೀಕ್ಷೆ ಆರಂಭಿಸಿದ್ದಾರೆ
ಅಶೋಕ ಪೂಜಾರಿ ಅವರಿಗೆ ಮಾಜಿ ಮಂತ್ರಿ ಬಂಡೆಪ್ಪಾ ಕಾಶಮಪೂರ ಸೇರಿದಂತೆ ಇತರ ಜೆಡಿಎಸ್ ನಾಯಕರು ಸಾಥ್ ನೀಡಿದ್ದಾರೆ.
ಗೋಕಾಕಿನಲ್ಲಿರುವ ಶೂನ್ಯ ಸಂಪಾದನಾ ಮಠ ಲಿಂಗಾಯತ ಸಮಾಜದ ಮುಖ್ಯ ಮಠವಾಗಿದ್ದು ಇತ್ತೀಚಿಗೆ ಸಿಎಂ ಯಡಿಯೂರಪ್ಪ ಇದೇ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶಿರ್ವಾದ ಪಡೆದಿದ್ದರು
ಇಂದು ಅಶೋಕ ಪೂಜಾರಿಯವರು ಇದೇ ಮಠಕ್ಕೆ ಭೇಟಿಕೊಟ್ಟು ಶ್ರೀಗಳ ಆಶಿರ್ವಾದ ಪಡೆದು ಶ್ರೀಗಳಿಂದಲೇ ಜೋಳಿಗೆ ಹಾಕಿಸಿಕೊಂಡು ಮತಭೀಕ್ಷೆಗೆ ಇಳಿದಿದ್ದಾರೆ
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಅಶೋಕ ಪೂಜಾರಿ ಕಳೆದ ಮೂರು ಚುನಾವಣೆ ಗಳಲ್ಲಿ ಆರ್ಥಿಕ ಕೊರತೆಯಿಂದ ಸೋತಿದ್ದೆ ಅದಕ್ಕಾಗಿ ಈ ಚುನಾವಣೆಯಲ್ಲಿ ಜಂಗಮ ಜೋಳಿಗೆ ಹಾಕಿದ್ದೇನೆ ಎಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ