ನೆರೆಹಾನಿ: ಕೇಂದ್ರ ಅಧ್ಯಯನ ತಂಡ ಭೇಟಿ; ಪರಿಶೀಲನೆ ಬೆಳಗಾವಿ, ಸೆ.8(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಮಂಗಳವಾರ (ಸೆ.8) ಭೇಟಿ ನೀಡಿ ಪರಿಶೀಲಿಸಿತು ಹೈದ್ರಾಬಾದ್ ನಲ್ಲಿರುವ ಕೃಷಿ ಇಲಾಖೆಯ ಎಣ್ಣೆಬೀಜಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಡಾ.ಮನೋಹರನ್ ಹಾಗೂ ಬೆಂಗಳೂರಿನ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ಗುರುಪ್ರvಸಾದ್ ಜೆ. ಅವರು ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂಚರಿಸಿ ಮಾಹಿತಿಯನ್ನು ಕಲೆಹಾಕಿದರು. ನಗರಕ್ಕೆ ಆಗಮಿಸಿದ …
Read More »ಬೆಳಗಾವಿಗೆ ಬಂದಿದೆ,ಕೇಂದ್ರದ ಅಧ್ಯಯನ ತಂಡ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶದಲ್ಲಿ ಬೆಳೆ ಹಾನಿ ಸೇರಿದಂತೆ ಇತರ ಹಾನಿಯನ್ನು ಅದ್ಯಯನ ಮಾಡಲು ಕೇಂದ್ರದ ಅದ್ಯಯನ ತಂಡ ಬೆಳಗಾವಿಗೆ ಆಗಮಿಸಿದೆ ಇಂದು ಬೆಳಿಗ್ಗೆ ಬೆಳಗಾವಿಗೆ ಬಂದಿರುವ ಕೇಂದ್ರದ ತಂಡ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಇತರ ಅಧಿಕಾರಿಗಳ ಜೊತೆ,ಸಭೆ ನಡೆಸಿದೆ ಸಭೆಯಲ್ಲಿ ಜಿಲ್ಲಾಧಿಕಾರಿಗಳು ವಿಪರೀತ ಮಳೆಯಿಂದ ಎಷ್ಟು ನಷ್ಟ ವಾಗಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿದ್ದಾರೆ,ಬೆಳೆಹಾನಿ,ಸಾರ್ವಜನಿಕ ಆಸ್ತಿ,ಮನೆಗಳ ಹಾನಿ ಸೇರಿದಂತೆ …
Read More »ಕ್ರಾಂತಿ ನೆಲದಲ್ಲೂ ಓಡಾಡತೈತಿ ರೈಲು ಗಾಡಿ….ವ್ಹಾರೆ ವ್ಹಾ ಸುರೇಶ ಅಂಗಡಿ…..!
ಬೆಳಗಾವಿ-ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟೀಷರ ರುಂಡ ಚೆಂಡಾಡಿದ ಕ್ರಾಂತಿಯ ನೆಲ ವೀರರಾಣಿ ಕಿತ್ತೂರ ಚನ್ನಮ್ಮ ನಾಡಿನಲ್ಲೂ ರೈಲು ಗಾಡಿ ಓಡಾಡುವ ಕಾಲ ಕೂಡಿ ಬಂದಿದೆ,ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಇಚ್ಛಾಶಕ್ತಿಯಿಂದಾಗಿ ಐತಿಹಾಸಿಕ ನಗರಿ ಕಿತ್ತೂರಿಗೂ ರೈಲು ಬರಲಿದೆ. ಬಹುದಿನಗಳ ಕನಸನ್ನು ಸಚಿವ ಸುರೇಶ ಅಂಗಡಿ ನನಸು ಮಾಡಿದ್ದು, ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ರೈಲ್ವೆ …
Read More »ಗಂಡನನ್ನು ಕೊಂದು,ಮನೆಯ ಅಂಗಳದಲ್ಲಿ ಸಮಾಧಿ ಮಾಡಿದವಳು,ಈಗ ಪಂಜರದಲ್ಲಿ….!
ಬೆಳಗಾವಿ- ಅನೈತಿಕ ಸಂಬಂಧದ ಬಗ್ಗೆ ಗಂಡ ಪ್ರಶ್ನೆ ಮಾಡಿದ್ದಕ್ಕೆ ಗಂಡನನ್ನು ಕೊಂದು ಮನೆಯ ಅಂಗಳದಲ್ಲೇ ಸಮಾಧಿ ಮಾಡಿದ ಪತ್ನಿಯನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಗಂಡನ ಕೊಲೆಗೆ ಪತ್ನಿಗೆ ಸಾಥ್ ಕೊಟ್ಟ ಮೂವರು ಸೇರಿದಂತೆ ಒಟ್ಟು ನಾಲ್ಕು ಜನ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಪತಿಯನ್ನು ಕೊಲೆಗೈದು ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿಯಿಂದ ತಗ್ಗಾ ತೆಗೆಸಿ ಶವವನ್ನು ಮನೆಯ ಅಂಗಳದಲ್ಲೇ ಹೂತು ಹಾಕಿದ್ದ ಪತ್ನಿ …
Read More »ಪೀರನವಾಡಿಯಲ್ಲಿ ಯಾತ್ರೆಗಳ ಜಾತ್ರೆ….ಸೆಲ್ಫೀಯ ಹಾಟ್ ಸ್ಪಾಟ್….!
ಬೆಳಗಾವಿ- ಬೆಳಗಾವಿಯ ಪೀರನವಾಡಿ,ರಾಯಣ್ಣನ ಮೂರ್ತಿ ಈಗ ಸೆಲ್ಫೀ ಸ್ಪಾಟ್ ಆಗಿಬಿಟ್ಟಿದೆ.ದಿನನಿತ್ಯ ನೂರಾರು ಜನ ಅಲ್ಲಿಗೆ ಬಂದು ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ ಎಂದು ಘೋಷಣೆ ಕೂಗಿ,ಸೆಲ್ಫಿ ತೆಗೆಸಿಕೊಂಡು,ಅಲ್ಲಿಂದಲೇ ಫೇಸ್ ಬುಕ್ ಗೆ ಪೋಸ್ಟ್ ಮಾಡುವದು ಸಾಮಾನ್ಯವಾಗಿದೆ. ಪೀರಣವಾಡಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಕೇವಲ ಹೋರಾಟಗಾರರು,ಮಂತ್ರಿಗಳು,ಲೀಡರ್ ಗಳು ಹೂವಿನ ಹಾರ ಹಾಕುತ್ತಿದ್ದಾರೆ,ಜೊತೆಗೆ ಈ ದಾರಿಯಿಂದ ಸಾಗುವ ಭಕ್ತರು ತಮ್ಮ ವಾಹನಗಳನ್ನು ನಿಲ್ಲಿಸಿ ಕ್ರಾಂತಿಪುರುಷನ ಪ್ರತಿಮೆಗೆ ಕೈ ಮುಗಿದು,ಮುಂದಕ್ಕೆ ಸಾಗುತ್ತಿದ್ದಾರೆ. ಮೋಬೈಲ್ …
Read More »ಗಂಡನ ಕೊಲೆ ಮಾಡಿ ಅಂಗಳದಲ್ಲೇ ಸಮಾಧಿ ಮಾಡಿದ ಪತ್ನಿ
ಬೆಳಗಾವಿ- ಅನೈತಿಕ ಸಂಬಂಧದ ಕುರಿತು ಪ್ರಶ್ನೆ ಮಾಡಿದ ಗಂಡನ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಪತ್ನಿ, ಗಂಡನ ಶವವನ್ನು ಮನೆಯ ಅಂಗಳದಲ್ಲೇ ಸಮಾಧಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಹಂಚನಾಳ ಗ್ರಾಮದಲ್ಲಿ ನಡೆದಿದೆ ಸಚಿನ್ ಸದಾಶಿವ ಭೋಪಲೆ (35) ಮೃತ ದುರ್ದೈವಿಯಾಗಿದ್ದು ಈತ ಮೂಲತಹ ಮಹಾರಾಷ್ಟ್ದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ನೇರ್ಲಿ ಗ್ರಾಮದವನು ಎಂದು ತಿಳಿದು ಬಂದಿದೆ. ಹಂಚನಾಳ ಗ್ರಾಮದಲ್ಲಿ ವಾಸವಾಗಿದ್ದ ಪತಿ ಸಚಿನ್ …
Read More »ಬೆಳಗಾವಿಯಲ್ಲಿ ಟೀಚರ್ಸ್ ಡೇ…..
ಬೆಳಗಾವಿ, -: ಶಿಕ್ಷಕರು ಶಾಲೆಗಳಲ್ಲಿ ಮಕ್ಕಳಿಗೆ ಪಾಠವನ್ನಷ್ಟೇ ಮಾಡದೇ ಕೋವಿಡ್-೧೯ ಸಂಕಷ್ಟ ಕಾಲದಲ್ಲಿಯೂ ಕೂಡಾ ಮುಂದೆ ಬಂದು ಕೆಲಸ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಶಾಸಕ ಅನಿಲ ಬೆನಕೆ ಅವರು ಹೇಳಿದರು. ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ (ಸೆ.೫) ನಗರ ಸಂತ ಅಂಥೋನಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು …
Read More »ಹ್ಯಾಪಿ ಟೀಚರ್ಸ್ ಡೇ….ಈ ಬಾರಿ ಓನ್ಲೀ ಡಿಜಿಟಲ್ ಮೆಸ್ಸೇಜ್…!
ಈ ಬಾರಿ ಶಿಷ್ಯರಿಂದ ಗುರುಗಳಿಗೆ ಡಿಜಿಟಲ್ ಶುಭಾಶಯ…..! ಬೆಳಗಾವಿ-ಎಲ್ಲ ಹಬ್ಬ,ಸಭೆ ಸಮಾರಂಭ,ಜಾತ್ರೆ,ಉತ್ಸವಗಳನು ನುಂಗಿರುವ ಮಹಾಮಾರಿ ಕೊರೋನಾ ವರ್ಷಕ್ಕೊಮ್ಮೆ ಶಿಷ್ಯರು ಸಲ್ಲಿಸುವ ಗುರುವಂದನೆಗೂ ಅಡ್ಡಿಯಾಗಿದೆ. ಪ್ರತಿವರ್ಷ ಮಕ್ಕಳು ಶಿಕ್ಷಕರ ದಿನಾಚರಣೆಯ ದಿನ ಮಕ್ಕಳು ಗುಲಾಬಿ ಕೊಡಿಸುವಂತೆ ಪಾಲಕರಿಗೆ ಕಾಡಿಸುವದು,ತಮಗೆ ಕಲಿಸುವ ಕ್ಲಾಸ್ ಟೀಚರ್ ಗೆ ಗುಲಾಬಿ ಹೂವು ಕೊಟ್ಟು ಹ್ಯಾಪಿ ಟೀಚರ್ಸ್ ಡೇ ಹೇಳುವದು,ಅನೇಕ ತಲೆಮಾರಿನಿಂದ ನಡೆದುಕೊಂಡು ಬಂದ ಸಂಸ್ಕೃತಿ. ಕೋವಿಡ್ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿವೆ,ಮಕ್ಕಳು ಶಾಲೆಗೆ ಹೋಗುವಂತಿಲ್ಲ,ಹೀಗಾಗಿ …
Read More »ಸೆ. ೨೨ ರ ಒಳಗೆ ರಸ್ತೆ, ಸೇತುವೆ ಕಾಮಗಾರಿ ಪ್ರಾರಂಭಿಸಿ: ಗೋವಿಂದ ಕಾರಜೋಳ
ಬೆಳಗಾವಿ, – ಮಳೆ ಮತ್ತು ಪ್ರವಾಹದಿಂದ ಹಾಳಾಗಿರುವ ಸೇತುವೆ ಹಾಗೂ ರಸ್ತೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರುಗಳ ಗಮನಕ್ಕೆ ತಂದು ಸೆ.೨೨ರ ಒಳಗಾಗಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಲಯ ಮಟ್ಟದ ಯೋಜನೆಗಳ ಬಗ್ಗೆ ಮತ್ತು ಪ್ರವಾಹ ಹಾನಿ ತಡೆಗಟ್ಟುವ ಕುರಿತು ತುರ್ತಾಗಿ …
Read More »ಕೋವಿಡ್- ತಡೆಗೆ ಇನ್ನಷ್ಟು ಕಾರ್ಯಪ್ರವೃತ್ತರಾಗಿ: ಸಚಿವ ರಮೇಶ್ ಜಾರಕಿಹೊಳಿ ಸೂಚನೆ
ಕೋವಿಡ್-೧೯ ತಡೆಗೆ ಇನ್ನಷ್ಟು ಕಾರ್ಯಪ್ರವೃತ್ತರಾಗಿ: ಸಚಿವ ರಮೇಶ್ ಜಾರಕಿಹೊಳಿ ಸೂಚನೆ ಬೆಳಗಾವಿ, ಸೆ.೪(ಕರ್ನಾಟಕ ವಾರ್ತೆ):ಪ್ರತಿ ತಾಲೂಕಿಗಳಲ್ಲಿರುವ ಕೋವಿಡ್-೧೯ ಸೆಂಟರ್ ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ವರದಿ ಪರಿಶೀಲನೆ ಮಾಡಿದ ಬಳಿಕ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಮಾಡೋಣ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಸೂಚನೆ ನೀಡಿದರು. ಕೋವಿಡ್-೧೯ ಹಾಗೂ ಅತಿವೃಷ್ಟಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತ್ತು …
Read More »