Breaking News
Home / Uncategorized / ಗಂಡನನ್ನು ಕೊಂದು,ಮನೆಯ ಅಂಗಳದಲ್ಲಿ ಸಮಾಧಿ ಮಾಡಿದವಳು,ಈಗ ಪಂಜರದಲ್ಲಿ….!

ಗಂಡನನ್ನು ಕೊಂದು,ಮನೆಯ ಅಂಗಳದಲ್ಲಿ ಸಮಾಧಿ ಮಾಡಿದವಳು,ಈಗ ಪಂಜರದಲ್ಲಿ….!

ಬೆಳಗಾವಿ- ಅನೈತಿಕ ಸಂಬಂಧದ ಬಗ್ಗೆ ಗಂಡ ಪ್ರಶ್ನೆ ಮಾಡಿದ್ದಕ್ಕೆ ಗಂಡನನ್ನು ಕೊಂದು ಮನೆಯ ಅಂಗಳದಲ್ಲೇ ಸಮಾಧಿ ಮಾಡಿದ ಪತ್ನಿಯನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ.

ಗಂಡನ ಕೊಲೆಗೆ ಪತ್ನಿಗೆ ಸಾಥ್ ಕೊಟ್ಟ ಮೂವರು ಸೇರಿದಂತೆ ಒಟ್ಟು ನಾಲ್ಕು ಜನ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.

ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಪತಿಯನ್ನು ಕೊಲೆಗೈದು ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿಯಿಂದ ತಗ್ಗಾ ತೆಗೆಸಿ ಶವವನ್ನು ಮನೆಯ ಅಂಗಳದಲ್ಲೇ ಹೂತು ಹಾಕಿದ್ದ ಪತ್ನಿ ಈಗ ಪೋಲೀಸರ ಬಲೆಗೆ ಬಿದ್ದಿದ್ದಾಳೆ

ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿ ನಾಲ್ವರನ್ನು ಪೊಲೀಸರು ಮಹಾರಾಷ್ಟ್ರ ಗಡಿಯಲ್ಲಿ ಬಂಧಿಸಿದ್ದಾರೆ.
ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದ ಈ ಕೊಲೆ ಪ್ರಕರಣದಲ್ಲಿ ಸಚಿನ್ ಸದಾಶಿವ ಭೋಪಳೆ ಎಂಬ 35 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು. ಹಂಚಿನಾಳ ಗ್ರಾಮದ ಆ ವ್ಯಕ್ತಿಯ ಪತ್ನಿ ಅನಿತಾ ಭೋಪಳೆ ಕೊಲೆ ಮಾಡಿದ್ದು, ಆಕೆಯ ಸಹೋದರರಾದ ಕೃಷ್ಣ ರಾಜಾರಾಮ ಘಾಟಗೆ, ಗಣೇಶ ಅಣ್ಣಪ್ಪ ರೇಡೆಕರ ಮತ್ತು ಸಹೋದರಿ ವನಿತಾ ಚೌವಾಣ ಮೂವರು ಸಾಥ್ ನೀಡಿದ್ದರು. ಕೊಲೆ ನಂತರ ಪರಾರಿಯಾಗಿದ್ದ ಆರೋಪಿಗಳ ಶೋಧಕ್ಕೆ ನಿಪ್ಪಾಣಿ ಗ್ರಾಮೀಣ ಠಾಣೆಯ ಪೆÇಲೀಸರು ಜಾಲ ಬೀಸಿದ್ದರು. ಈಗ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Check Also

ರದ್ದಾದ ಯೋಜನೆಗೆ ಮತ್ತೇ ಲೀಫ್ಟ್….ಶಾಸಕ ಅಭಯ ಪಾಟೀಲರಿಂದ ಬೆಳಗಾವಿಗೆ ಸ್ಪೇಷಲ್ ಗೀಫ್ಟ್….!

ಬೆಳಗಾವಿ-ಬೆಳಗಾವಿ ಮಹಾನಗರದ ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ಶಾಸಕ ಅಭಯ ಪಾಟೀಲ ಅವರು ಸದ್ದಿಲ್ಲದೇ ಬೆಳಗಾವಿಯಿಂದ ಕೈಬಿಟ್ಟು ಹೋಗಿದ್ದ ನಿರಂತರ ನೀರು …

Leave a Reply

Your email address will not be published. Required fields are marked *