Breaking News

BGAdmin

ಬೆಳಗಾವಿ ಜಿಲ್ಲಾಡಳಿತಕ್ಕೆ ಹೌದ್ದೋ ಹುಲಿಯಾ ಎಂದ ಗುಪ್ತ ವಾರ್ತೆ….!!

ಬೆಳಗಾವಿ-ಕೊರೊನಾ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಗಡಿಯಲ್ಲಿ ಸುಸಜ್ಜಿತ ಚೆಕ್ ಪೋಸ್ಟ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಪ್ರಯಾಣಿಕರ ನೋಂದಣಿ ಪ್ರಕ್ರಿಯೆಯ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿರುವ ಜಿಲ್ಲಾಡಳಿತದ ಬಗ್ಗೆ ಗುಪ್ತವಾರ್ತೆಯ ಹೆಚ್ಚುವರಿ ಆರಕ್ಷಕ ಮಹಾನಿರೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಅಭಿನಂದನಾ ಪತ್ರ ಬರೆದಿದ್ದಾರೆ ವಿಶೇಷವಾಗಿ ನಿಪ್ಪಾಣಿ ಚೆಕ್ ಪೋಸ್ಟ ನಲ್ಲಿ ಮಾಡಿರುವ ಅತ್ಯುತಮ ವ್ಯೆವಸ್ಥೆಯ ಕುರಿತು ಗುಪ್ತ ವಾರ್ತೆ ಮೆಚ್ಚುಗೆ ವ್ಯೆಕ್ತ ಪಡಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಅಭಿನಂಧನೆ ಸಲ್ಲಿಸಿ ಪತ್ರ …

Read More »

ಬೆಳಗಾವಿಗೆ ಮತ್ತೆ ಶಾಕ್ ಇಂದು ಮತ್ತೊಂದು ಪಾಸಿಟೀವ್ ಕೇಸ್ ಪತ್ತೆ

ಬೆಳಗಾವಿ ಇಂದು ಬೆಳಗಾವಿಯಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ 126 ಕ್ಕೆ ತಲುಪಿದೆ. ಜಾರ್ಖಂಡ್‌ನಿಂದ ಬೆಳಗಾವಿ ಜಿಲ್ಲೆಗೆ ಮರಳಿದ್ದ ಮತ್ತೋರ್ವ ವೃದ್ಧನಿಗೆ ಕೊರೊನಾ ಪತ್ತೆಯಾಗಿದೆಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 126ಕ್ಕೇರಿಕೆ   ಜಾರ್ಖಂಡ್‌ನಿಂದ ಮರಳಿದ್ದ15 ಜನರ ಪೈಕಿ ನಿನ್ನೆ ಮೂವರಲ್ಲಿ ಕೊರೊನಾ ದೃಢವಾಗಿತ್ತು ಇಂದು ಮತ್ತೆ ಓರ್ವ ವೃದ್ಧನಲ್ಲಿ ಕೊರೊನಾ ಸೋಂಕು ದೃಢ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ …

Read More »

ಆಶಾ ಕಾರ್ಯಕರ್ತೆಯರಿಗೆ ಮಹೇಶ ತಮ್ಮಣ್ಣವರ ನೆರವು…..

ರಾಯಬಾಗ: ಮಹಾಮಾರಿ ಕರೋನಾ ವೈರಸ್ ದೇಶಾದ್ಯಂತ ಹರಡುತ್ತಿರುವ ಹಿನ್ನೆಲೆ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ ಆಶಾ ಕಾರ್ಯಕರ್ತರನ್ನು ಮೆಚ್ಚಲೆ ಬೇಕು.‌ಅವರಿಗೆ ಧೈರ್ಯ ತುಂಬುವ ಕೆಲಸ‌ ಎಂದು ಯುವ ಧುರೀಣ ಮಹೇಶ ತಮ್ಮಣ್ಣವರ ಹೇಳಿದರು. ಕಲ್ಲೋಳಿಕರ ಪ್ರತಿಷ್ಠಾನದ ವತಿಯಿಂದ ತಾಲೂಕಿನ‌ ನಸಲಾಪುರ, ನಂದಿ‌ಕುರಳಿ ಗ್ರಾಮದ ಆಶಾ ಕಾರ್ಯಕರ್ತರಿಗೆ ಹಾಗೂ ಬಡ ಕುಟುಂಬಗಳಿಗೆ ಸುಮಾರು ೨೦೦೦ ಕ್ಕಿಂತ ಅಧಿಕ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ದೇಶದಲ್ಲಿ ಶೇ.೪೦ ರಷ್ಟು …

Read More »

ಗೋಕಾಕ್ ಕ್ಷೇತ್ರದ ಹಳ್ಳಿ,ಹಳ್ಳಿ… ಗಲ್ಲಿ ಗಲ್ಲಿ…ಗಳಲ್ಲಿ ಇಂದಿನಿಂದ “ಅಮರನಾಥ” ಯಾತ್ರೆ…..!

ವಿ ಬೆಳಗಾವಿ- ಗೋಕಾಕ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿ ಅಮರನಾಥ ಯಾತ್ರೆ ಈ ಯಾತ್ರೆ,ಕ್ಷೇತ್ರದ ಜನರಿಗೆ ಸಹಾಯ ಮಾಡುವ ಯಾತ್ರೆ,ಕ್ಷೇತ್ರದ ಮನೆ,ಮನೆಗೂ ತಲುಪುವ ಯಾತ್ರೆ,ಕ್ಷೇತ್ರದ ಜನರಿಗೆ ಧೈರ್ಯ ತುಂಬುವ ಯಾತ್ರೆ,ಈ ಅರ್ಥಪೂರ್ಣ,ಅಂತಃಕರಣದ ಯಾತ್ರೆ ಗೋಕಾಕ ಪಟ್ಟಣದಿಂದ ಶುಭ ಶುಕ್ರವಾರ ಆರಂಭವಾಗಲಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಪುತ್ರ ಅಮರನಾಥ ಅವರು,ಗೋಕಾಕ್ ಕ್ಷೇತ್ರದ ಜನರಿಗೆ ಕಿಟ್ ವಿತರಣೆ ಮಾಡುವ ಜವಾಬ್ದಾರಿ ವಹಿಸಿಕೊಂಡು,ಐವತ್ತು ಸಾವಿರಕ್ಕೂ ಹೆಚ್ಚು ಕಿಟ್ ರೆಡಿ ಮಾಡಿಕೊಂಡು ಇಂದು …

Read More »

PM ಕೇರ್ ಗೆ ಒಂದು ಲಕ್ಷ ₹ ನೀಡಿದ ಬೆಳಗಾವಿಯ ಅಜ್ಜಿ

ಕಳೆದ 20ವರ್ಷಗಳಿಂದ ದೈಹಿಕ ಅಂಗವಿಕಲತೆಯಿಂದ ಬಳಲುತ್ತಿರುವ ಸ್ವಾಧ್ಯಾಯ ವಿದ್ಯಾ ಕೇಂದ್ರದ ವಿಶ್ರಾಂತ ಗ್ರಂಥಪಾಲಕಿಯಾದ ಟಿಳಕವಾಡಿ ನಿವಾಸಿಯಾದ ನಳಿನಿ ಕೆಂಭಾವಿ ಅವರು ಕೊರೋನಾ ಮಹಾಮಾರಿಯಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸಲು PMCare fund ಗೆ ರೂ.1,00,000 ಹಣವನ್ನು ದೇಣಿಗೆ ನೀಡಿ ಆದರ್ಶಪ್ರಾಯರಾಗಿರುವರನ್ನು ಮಾನ್ಯ ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ಶ್ರೀ ಸುರೇಶ ಅಂಗಡಿ ಅವರು ಸ್ವತಃ ಅವರ ಮನೆಗೆ ಭೇಟಿ ನೀಡಿ ಅವರ ಕೊಡುಗೆಗೆ ಶಾಘ್ಲೀಸಿ ಧನ್ಯವಾದಗಳನ್ನು ಅರ್ಪಿಸಿದರು. ಸ್ವಾವಲಂಬಿ ಭಾರತಕ್ಕೆ ಇಂತಹ …

Read More »

ಬೆಳಗಾವಿಯಲ್ಲಿ ಇಂದು ಮತ್ತೆ ಒಬ್ಬ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, -ಕೋವಿಡ್-೧೯ ಸೋಂಕು ತಗುಲಿದ್ದ ಹಿರೇಬಾಗೇವಾಡಿಯ ವ್ಯಕ್ತಿಯೊಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ವ್ಯಕ್ತಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಹಿರೇಬಾಗೇವಾಡಿ ಪಿ-483 ***

Read More »

ಇಂದು ಪತ್ತೆಯಾದ 9 ಜನ ಸೊಂಕಿತರು ಎಲ್ಲಿಂದ ಬಂದವರು,ಯಾವ ಊರಿನವರು,ವಿವರ ಇಲ್ಲಿದೆ ನೋಡಿ

ಇಂದು ಪತ್ತೆಯಾದ 9 ಜನ ಎಲ್ಲಿಂದ ಬಂದವರು,ಯಾವ ಊರಿನವರು,ವಿವರ ಇಲ್ಲಿದೆ ನೋಡಿ ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು 9 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಇಂದು ಪತ್ತೆಯಾದ 9 ಜನ ಎಲ್ಲಿಂದ ಬಂದವರು ಯಾವ,ಯಾವ ಊರಿನವರು ಮಾಹಿತಿ ಟ್ರಾವೆಲ್ ಹಿಸ್ಟರಿ ಇಲ್ಲಿದೆ ನೋಡಿ‌ ರಾಮದುರ್ಗ ತಾಲ್ಲೂಕಿನ ಕಲ್ಲೂರ ಗ್ರಾಮದ ಏಳು ತಿಂಗಳ ಹೆಣ್ಣು ಮಗುವಿನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು P-1496 – 7 ತಿಂಗಳ ಹೆಣ್ಣು ಮಗುವಿಗೆ ಮಗುವಿಗೆ ಸೊಂಕು …

Read More »

ಮಹಾರಾಷ್ಟ್ರ,ಗೋವಾದಿಂದ ಬೆಳಗಾವಿಗೆ ಆಕ್ರಮವಾಗಿ ನುಸುಳಿದ ಮೂವರು ಶಂಕಿತರು ಪೋಲೀಸರ ವಶಕ್ಕೆ

ಬೆಳಗಾವಿ- ಪಕ್ಕದ ಮಹಾರಾಷ್ಟ್ರದಿಂದ ಬೆಳಗಾವಿಗೆ ಮೂವರು ಜನ ಕೊರೋನಾ ಸೊಂಕಿತರು ಬೆಳಗಾವಿಗೆ ಆಕ್ರಮವಾಗಿ ನುಸುಳಿ ಬಂದು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಪೋಲೀಸರ ಕೈಗೆ ಸಿಕ್ಕಿದ ಘಟನೆ ನಡೆದಿದೆ. ಬೆಳಗಾವಿ ಬಸ್ ನಿಲ್ಧಾಣದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೋಲೀಸ್ ಹವಾಲ್ದಾರ್ ಎಸ್ ಬಿ ಮಡಿವಾಳ ಅವರ ಸಮಯ ಪ್ರಜ್ಞೆಯಿಂದಾಗಿ ಮೂವರು ಜನ ಮಹಾರಾಷ್ಟ್ರದ ಶಂಕಿತರು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಸಿಕ್ಕಿದ್ದಾರೆ. ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಮೂವರ ಕೈಗೆ ಕ್ವಾರಂಟೈನ್ ಮುದ್ರೆ ಇರುವದನ್ನು ಗಮನಿಸಿದ …

Read More »

ಬೆಳಗಾವಿ ಜಿಲ್ಲೆಗೆ ಮತ್ತೆ ಕೊರೋನಾ ಶಾಕ್, ಜಿಲ್ಲೆಯ 9 ಜನರಲ್ಲಿ ರಲ್ಲಿ ಮತ್ತೆ ಸೊಂಕು ಪತ್ತೆ

ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಕೊರೋನಾ ವೈರಸ್ ಮತ್ತೆ ಶಾಕ್ ನೀಡಿದೆ.ಇಂದು ಗುರುವಾರ ಬಿಡುಗಡೆಯಾದ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ. 9 ಜನರಲ್ಲಿ ಸೊಂಕು ಪತ್ತೆಯಾಗಿದೆ ಇಂದು ಪತ್ತೆಯಾಗಿರುವ ಕೊರೋನಾ ಸಂಕಿತರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 125  ಕ್ಕೇ ಏರಿದಂತಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ 8 ಜನ ಅಜ್ಮೇರ್ ದರ್ಗಾ ದರ್ಶನ ಮಾಡಿ ಸಂಪಗಾಂವ ಮರಳಿದ್ದರು ಇವರನ್ನು …

Read More »

ಬೆಳಗಾವಿಯಲ್ಲಿ ಅಂದು ಗ್ಯಾಂಗ್ ವಾರ್ , ಇಂದು ಗಾಂಜಾ ವಾರ್…!!!

ಬೆಳಗಾವಿ- ಒಂದು ಕಾಲದಲ್ಲಿ ಬೆಳಗಾವಿ ಗ್ಯಾಂಗ್ ವಾರ್ ಗೆ ಹೆಸರಾಗಿತ್ರು,ಯಾವಾಗ ಎನ್ ಕೌಂಟರ್ ಶುರುವಾಯಿತೋ ಅಂದಿನಿಂದ ಗ್ಯಾಂಗ್ ವಾರ್ ರೌಡಿಗಳ ಕಥೆ ಮುಗಿದು ಹೋಗಿತ್ತು, ಗ್ಯಾಂಗ್ ವಾರ್ ಗಳಿಂದು ನೊಂದು ಬೆಂದು ಹೋಗಿದ್ದ ಬೆಳಗಾವಿಗೆ ಗಾಂಜಾ ನಂಜು ಏರುತ್ತಿರುವದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಬೆಳಗಾವಿಯಲ್ಲಿ ಈಗ ಗಾಂಜಾ ಹೊಗೆ ಬಿಡುತ್ತಿದ್ದೆ,ಈ ವಿಷಕಾರಿ ಹೊಗೆಯ ಸುಳಿಯಲ್ಲಿ ಯುವಕರೇ ಸಿಗುತ್ತಿದ್ದು,ಗಾಂಜಾ ಮಾರಾಟಗಾರರ ಹಾರಾಟ ಬೆಳಗಾವಿಯಲ್ಲಿ ಜೋರಾಗಿಯೇ ನಡೆದಿದೆ ಎನ್ನುವದಕ್ಕೆ ನಿನ್ನೆ ರಾತ್ರಿ ನಡೆದ …

Read More »