BGAdmin

ನಾಗಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಮುನವಳ್ಳಿ : ಸಮೀಪದ ಯಕ್ಕೇರಿ ಗ್ರಾಮದ ಜನತಾ ಕಾಲೋನಿಯಲ್ಲಿರುವ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಆ. 6 ರಿಂದ 10 ರವರೆಗೆ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಜು. 6 ರಂದು ಬೆಳಿಗ್ಗೆ ರುದ್ರಾಭಿಷೇಕ, ಸಂಜೆ 6 ಗಂಟೆಗೆ ಹಾಲು ಎರೆಯುವುದು. ದಿ. 7 ರಂದು ಮುಂಜಾನೆ 10 ಗಂಟೆಗೆ ಸ್ಲೋ ಸೈಕಲ್ ಮೋಟಾರ ಸ್ಪರ್ಧೆ, ಮಧ್ಯಾಹ್ನ 1 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ಧೆ. ದಿ. 8 ರಂದು …

Read More »

ಬಿಜೆಪಿ ಬಲಪಡಿಸುವ ಅವಷ್ಯಕತೆ ಇದೆ.

ಬಿಜೆಪಿ ಬಲಪಡಿಸುವ ಅವಷ್ಯಕತೆ ಇದೆ. ಪ್ರಾಮಾಣಿಕ, ನಿಷ್ಠಾವಂತ, ಕಾರ್ಯಕರ್ತರಾಗಿ ಸುಮಾರು 20-25 ವರ್ಷಗಳಿಂದ ಪಕ್ಷದಲ್ಲಿದ್ದು ಜನಮನಗೆದ್ದ ಲಕ್ಕಪ್ಪ ಕುರನಿಂಗ ಅವರು ಬಿಜೆಪಿ ಕುಡಚಿ ಮಂಡಳ ಉಪಾಧ್ಯಕ್ಷರಾಗಿದ್ದು ನಮ್ಮ ಭಾಗದ ಭಾಜಪ ಕಾರ್ಯಕರ್ತರಿಗೆ ಆನೆಬಲ ಬಂದತಾಗಿದೆಂದು ಮಲ್ಲಿಕಾರ್ಜುನ ತೇಲಿ ಹೇಳಿದರು. ಸಮೀಪದ ಕಪ್ಪಲಗುದ್ದಿ ಗ್ರಾಮದ ಗ್ರಾ.ಪಂ.ಕಾರ್ಯಾಲಯದಲ್ಲಿ ಹಮ್ಮಿಕೊಂಡ ಲಕ್ಕಪ್ಪ ಕುರನಿಂಗ ಇವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕ್ಷೇತ್ರತುಂಬೆಲ್ಲ ಪಕ್ಷವನ್ನು ಬಲಪಡಿಸಿ, ಯುವಕರನ್ನು ಹುರಿದುಂಬಿಸಿ, ಭಾಜಪ ಪಕ್ಷವನ್ನು …

Read More »

ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಮನೆಗಳ್ಳತನ, ಸಾಮಾನ್ಯ ಕಳುವು, ಧರೋಡೆ, ಕಳ್ಳಸಾಗಾಣಿಕೆ,

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಮನೆಗಳ್ಳತನ, ಸಾಮಾನ್ಯ ಕಳುವು, ಧರೋಡೆ, ಕಳ್ಳಸಾಗಾಣಿಕೆ, ಲಾಭಕ್ಕಾಗಿ ಕೊಲೆ ಸೇರಿದಂತೆ ವಿವಿಧ ಮುಖ್ಯ ೫೬ ಪ್ರಕರಣಗಳನ್ನು ಪತ್ತೆ ಹಚ್ಚಿ ಸುಮಾರು ೧.೨೬ ಕೋಟಿ ರು. ಮೌಲ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಮೌಲ್ಯದ ಮಾಲೀಕರಿಗೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಿತರಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ರವಿಕಾಂತೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಜನವರಿ ತಿಂಗಳಿನಿಂದ ಜುಲೈ ತಿಂಗಳವರೆಗೆ ೫೬ ಪ್ರಮುಖ ಪ್ರಕರಣಗಳನ್ನು ಪತ್ತೆ …

Read More »

ಶಾಸಕ ಸೇಠ ಅವರಿಂದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಪರಶೀಲನೆ ಕಣಬರ್ಗಿ ಕನ್ನಡ ಶಾಲೆಯ ಅಬಿವೃದ್ಧಿಗೆ ೩೫ ಲಕ್ಷ ರೂ.

ಬೆಳಗಾವಿ- ಬೆಳಗಾವಿ ಊತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ ಅವರು ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಬೇಟಿ ನೀಡಿ ಶಾಲೆಗಳ ಪರಿಸ್ಥಿತಿಯನ್ನು ಪರಶೀಲಿಸಿದರು ಬೆಳಗಾವಿ ಊತ್ತರ ಮತಕ್ಷೇತ್ರದ ಕಣಬರ್ಗಿ ಕನ್ನಡ ಶಾಲೆ,ಕಾಕತಿವೇಸ್ ಊರ್ದು ಶಾಲೆ,ಪುಲಬಾಗ್ ಗಲ್ಲಿ, ಮಾಳಿಗಲ್ಲಿ ಸೇರಿದಂತೆ ಅನೇಕ ಶಾಲೆಗಳಿಗೆ ಬೇಟಿ ನೀಡಿದ ಶಾಸಕ ಸೇಠ ಪರಿಸ್ಥಿತಿಯನ್ನು ಪರಶೀಲಿಸಿದರು ಕಣಬರ್ಗಿ ಕನ್ನಡ ಶಾಲೆಗೆ ೩೫ಲಕ್ಷ,ಕಾಕತಿವೇಸ್ ಶಾಲೆಗೆ ೫ಲಕ್ಷ, ಮಾಳಿಗಲ್ಲಿ ಶಾಲೆಗೆ ೩ಲಕ್ಷ, ಅನುದಾನ ನೀಡಿ ಶಾಲಾ ಕೊಠಡಿ ನಿರ್ಮಾಣ …

Read More »

ಎಲ್ಲಾ ದಾಖಲೆಗಳನ್ನು ಮುರಿದ ಕಬಾಲಿ: ಮೊದಲ ದಿನವೇ ಬರೋಬ್ಬರಿ 250 ಕೋಟಿ ಗಳಿಕೆ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ವಿಶ್ವಾದ್ಯಂತ ಬಿಡುಗಡೆಗೊಂಡ ಮೊದಲ ದಿನವೇ 250 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುವ ಮೂಲಕ ಈವರೆಗಿನ ಎಲ್ಲಾ ದಾಖಲೆಗಳನ್ನು ಕಬಾಲಿ ಮುರಿದಂತಾಗಿದೆ. ತಮಿಳುನಾಡಿನ ಥಿಯೇಟರ್ ಗಳಲ್ಲಿಯೇ ನೂರು ಕೋಟಿ ರೂಪಾಯಿ ಹಾಗೂ ದೇಶದ ವಿವಿಧ ಚಿತ್ರಮಂದಿರಗಳಲ್ಲಿ (150ಕೋಟಿ) ಕಬಾಲಿ 250 ಕೋಟಿ ಗಳಿಕೆ ಮಾಡಿರುವುದಾಗಿ ಚಿತ್ರದ ನಿರ್ಮಾಪಕ ಎಸ್ ತನು ತಿಳಿಸಿದ್ದಾರೆ. ಬಾಲಿವುಡ್ ನ ಪಿಕೆ, ಸುಲ್ತಾನ್ …

Read More »

ಸಿಎಂ ಭೇಟಿಯಾದ ಕಲ್ಲಪ್ಪ ಕುಟುಂಬ, ಡಿವೈಎಸ್ಪಿ ಸಾವಿಗೆ ಕಾರಣರಾದವರನ್ನು ಶಿಕ್ಷಿಸಿ ಎಂದು ಆಗ್ರಹ

ಬೆಂಗಳೂರು: ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ಕುಟುಂಬ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದರು. ಕಲ್ಲಪ್ಪ ಹಂಡಿಭಾಗ್ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಶೀಘ್ರ ಕ್ರಮಕೈಗೊಳ್ಳಿ ಎಂದು ಮೃತ ಪೊಲೀಸ್ ಅಧಿಕಾರಿ ಕುಟುಂಬ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ನಮ್ಮ ಮಗ ಅಮಾಯಕನಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಅತ್ಯಂತ ನಿಷ್ಠಾವಂತನಾಗಿ ಕಾರ್ಯನಿರ್ವಹಿಸಿದ್ದಾನೆ. ಆತನ ಆತ್ಮಹತ್ಯೆ ಹಿಂದಿನ …

Read More »

ಕೊಚ್ಚಿ ಹೋದ ರಸ್ತೆ…! ರೊಚಿಗೆದ್ದ ರೈತರು ರಸ್ತೆ ದುರಸ್ತಿಗೆ ಆಗ್ರಹಿಸಿ ಸಾಂಬ್ರಾ ರೈತರಿಂದ ರಸ್ತೆ ತಡೆ

ಬೆಳಗಾವಿ- 53 ಲಕ್ಷ ರುಪಾಯಿ ಖರ್ಚುಮಾಡಿ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾದ ರಸ್ತೆಯು ಆರು ತಿಂಗಳಲ್ಲಿ ಕೊಚ್ಚಿ ಹೋಗಿದ್ದು ರಸ್ತೆ ದುರಸ್ತಿಗೆ ಆಗ್ರಹಿಸಿ ಸಾಂಬ್ರಾ ಗ್ರಾಮದ ರೈತರು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು ಸಾಂಬ್ರಾ ವಿಮಾಣ ನಿಲ್ದಾಣದ ಬಳಿ ರೈತರಿಗೆ ಹೊಲಗದ್ದೆಗಳಿಗೆ ಹೋಗಲು ಅನಕೂಲವಾಗುವಂತೆ 53 ಲಕ್ಷ ರುಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಲಾಗಿತ್ತು ಆದರೆ ಈ ರಸ್ತೆ ಆರು ತಿಂಗಳಲ್ಲಿಯೇ ಮಳೆ ನೀರಿನಲ್ಲಿ …

Read More »

ಸರ್ಕಾರಿ ಬಸ್ ಸಂಚಾರ ಸ್ಥಗಿತ, ಜನರ ಪರದಾಟ

ಬೆಂಗಳೂರು, ಜುಲೈ 25 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸುಗಳು ರಸ್ತೆಗಿಳಿದಿಲ್ಲ. ಶೇ. 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆಗಳ ನೌಕರರು ಜುಲೈ 25ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರದ …

Read More »

ಗಣಪತಿ ಆತ್ಮಹತ್ಯೆ ಪ್ರಕರಣದ ಆರೋಪಿ ಪ್ರಸಾದ್‌ಗೆ ಹೊಸ ಹುದ್ದೆ

ಬೆಂಗಳೂರು, ಜುಲೈ, 22: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಅವರಿಗೆ ಸರ್ಕಾರ ಹೊಸ ಹುದ್ದೆ ನೀಡಿದೆ. ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್ ಅವರಿಗೆಗಾಗಿಯೇ ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಮಾನವಾದ ಹೊಸ ಹುದ್ದೆಯೊಂದನ್ನು ಸೃಷ್ಟಿ ಮಾಡಿ ನೀಡಿದೆ. ಬೆಂಗಳೂರು ನಗರ ಸಂಚಾರ ವಿಭಾಗ ಪೊಲೀಸ್ ಆಯುಕ್ತರಾಗಿ ಇನ್ನು ಮುಂದೆ ಎ.ಎಂ.ಪ್ರಸಾದ್ ಅಧಿಕಾರ ನಡೆಸಲಿದ್ದಾರೆ. ರಾಜ್ಯ ಗುಪ್ತದಳದ ಮುಖ್ಯಸ್ಥರಾಗಿದ್ದ ಎ.ಎಂ.ಪ್ರಸಾದ್ ಅವರನ್ನು ಶುಕ್ರವಾರ …

Read More »